India Languages, asked by sphraba8467, 10 months ago

How can Kannada useful in other fields essay in Kannada?

Answers

Answered by Sachinarjun
1

Explanation:

ಭಾನುವಾರ, ಮಾರ್ಚ್ ೨೯ ರಂದು ಸಂಪದ ತಂತ್ರಜ್ಞರ ತಂಡ ಹಾಗು ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಜೊತೆಗೂಡಿ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಬರಹ" ಕುರಿತ ಚರ್ಚೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಬರಹ ಕಾರ್ಯಕ್ರಮದ ವರದಿ. ಕನ್ನಡ, ಭಾರತದ ಹಲವು ಭಾಷೆಗಳಂತೆ ತಂತ್ರಜ್ಞಾನ, ವಿಜ್ಞಾನ ಮಾಹಿತಿ ಶೇಖರಿಸಿಡಲು ತುಂಬ ಕಡಿಮೆ ಬಳಕೆಯಾಗುತ್ತಿದೆ. ಹೀಗಿರುವಾಗ ಕನ್ನಡ ಭಾಷೆಯನ್ನು ಮಾಹಿತಿ ಸಂಗ್ರಹಿಸಿಡಲು, ವಿಜ್ಞಾನ ತಂತ್ರಜ್ಞಾನ ಕುರಿತ ವಿಷಯಗಳನ್ನು ಹಂಚಿಕೊಳ್ಳಲು ಬಳಸುವಾಗ ಏನೇನು ತೊಂದರೆ ಅಡಚಣೆಗಳನ್ನು ಎದುರಿಸುತ್ತೇವೆ ಎಂಬುದರ ಸುತ್ತ ಚರ್ಚೆ ನಡೆದಿತ್ತು. ಕಾರ್ಯಕ್ರಮದ ಸವಿವರ ವರದಿ ಲೇಖನದಲ್ಲಿದೆ.

ನಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿಯೇ ನಾವುಗಳು ಇಲ್ಲಿದ್ದೇವೆ, ನಮ್ಮ ಕೆಲಸಗಳಲ್ಲಿ ಬಳಸುವ ಭಾಷೆ ಬೇರೆಯದ್ದಾದರೇನು, ನಮ್ಮ ಭಾಷೆಯ ನಂಟು ಬಿಟ್ಟಿಲ್ಲ! ಸೂಕ್ಷ್ಮ ರೇಖೆಯಂತಿರುವ ಈ "ಭಾಷೆ" ಎಂಬ ಬಂಧ ಬೇರೆ ಬೇರೆ ಆಸಕ್ತಿ, ಬೇರೆ ಬೇರೆ ಅಭಿಪ್ರಾಯಗಳ ಬುತ್ತಿಯನ್ನು ಕಟ್ಟಿ ತರುವ ನಮ್ಮನ್ನೆಲ್ಲ ಅದು ಹೇಗೆ ಹಿಡಿದಿಟ್ಟಿದೆ ಎಂಬುದು ಒಮ್ಮೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.

ಕಾರ್ಯಕ್ರಮದ ದಿನದಂದು ಕಂಡುಬಂದ ಮುಖಗಳು ಸಂಖ್ಯೆಯ ಲೆಕ್ಕದಲ್ಲಿ ನಮಗೆ ಕೊಂಚ ಬೇಸರ ಮೂಡಿಸಿದರೂ, ಆ ದಿನ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ"ಯ ಸುತ್ತ ಒಂದು ಉತ್ತಮ ಚರ್ಚೆ ನಡೆದದ್ದು ಖುಷಿ ಕೊಟ್ಟಿತು. ಉದ್ದೇಶ ಇದ್ದದ್ದು ಹೀಗೆ ಬರೆಯಲು ಇಂಟರ್ನೆಟ್ ಬಳಸುವುದು ಹೇಗೆ? ಮತ್ತು ತದನಂತರ ಇಂಟರ್ನೆಟ್ಟಿನಿಂದ ಹೊರಗೆ, ಇಂಟರ್ನೆಟ್ ವ್ಯಾಪ್ತಿಯಿಲ್ಲದೆಡೆಗೆ ಅದನ್ನು ವಿಸ್ತರಿಸುವುದು ಹೇಗೆ ಎನ್ನುವುದರ ಸುತ್ತ. ಚರ್ಚೆ ನಡೆದದ್ದು ಭಾನುವಾರ ೨೯, ೨೦೦೯, ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ, ಕನ್ನಿಂಗ್ಹಾಮ್ ರೋಡಿನಲ್ಲಿ.

ಅಂದು ನಾವು ಕನ್ನಿಂಗ್ಹಾಮ್ ರೋಡಿಗೆ ಹೊರಟು ನಿಂತಾಗ ನಮಗದು 'ಮತ್ತೊಂದು ಭಾನುವಾರ'. ಆದರೂ ಎಷ್ಟು ಜನ ಬರುತ್ತಾರೋ, ಯಾರು ಯಾರು ಬರುವರು ಎಂಬ ಕುತೂಹಲ ನಮಗೆ! ನಾವುಗಳು ಎಲ್ಲರಿಗೂ ಆಮಂತ್ರಣ ಕಳುಹಿಸಿದ್ದೇ ಕೊಂಚ ತಡವಾಗಿ! ಕಾರ್ಯಕ್ರಮದ ಬಗ್ಗೆ ತಿಳಿಸಲು ಒಂದು ವಾರ ಕೂಡ ಇರಲಿಲ್ಲ. ಅದಕ್ಕೆ ಸೇರಿಕೊಂಡಂತೆ ಮೂರು ದಿನ ರಜೆ ಬೇರೆ - ಯುಗಾದಿ, ಶನಿವಾರ ಮತ್ತು ಭಾನುವಾರ!

ಆದರೆ ಆ ಭಾನುವಾರ ವಿಶೇಷ ದಿನವೆನಿಸಿದ್ದು ಹೌದು. ನಮ್ಮ ನೆಚ್ಚಿನ ವಿಷಯಗಳು - ತಂತ್ರಜ್ಞಾನ, ಕನ್ನಡ ಇವುಗಳೊಡನೆ - ಅಂತರ್ಜಾಲ ಕೂಡ ಬೆರೆತದ್ದಲ್ಲದೆ ಅವುಗಳ ಕುರಿತು ಉತ್ತಮ ಚರ್ಚೆ ನಡೆದದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ನಿಮಿಷಗಳು.

ಮೊದಲ ಅವಧಿ ಕನ್ನಡದಲ್ಲಿ ತಂತ್ರಾಂಶಗಳು ಹಾಗು ಅದರ ಸುತ್ತ ಇರುವ ತಂತ್ರಜ್ಞಾನದ ಕುರಿತು ಬರೆಯುವ ಬಗ್ಗೆ ಮಾತುಕತೆ ಎಂಬುದಾಗಿತ್ತು ನಮ್ಮ ಉದ್ದೇಶ. ನಾನು ಕೊಟ್ಟ ಒಂದು ಪುಟ್ಟ ಪೀಠಿಕೆಯ ನಂತರ ಪತ್ರಕರ್ತ ಗೆಳೆಯರಾದ ಇಸ್ಮಾಯಿಲ್ ಚರ್ಚೆ ಪ್ರಾರಂಭಿಸಿದರು, ಚರ್ಚೆ ತಂತ್ರಾಂಶಗಳ ಕುರಿತು ಹೇಗೆ ಬರೆಯುವುದು ಎಂಬುದರ ಸುತ್ತ ನಡೆಯಿತು. ಹಲವು ವಿಷಯಗಳು ಚರ್ಚೆಗೆ ಬಂದವು. ತೀರ ಗ್ರಾಂಥಿಕವಾದ ಅನುವಾದ ಮಾಡಬೇಕಿಲ್ಲ ಎಂಬ ವಿಷಯವನ್ನು ಇಸ್ಮಾಯಿಲ್ ಕೂಡಲೆ ಪ್ರಸ್ತಾಪಿಸಿದರು. ಈಗಾಗಲೇ ಬಳಕೆಯಲ್ಲಿರುವ ಕೆಲವು ಪದಗಳು ಅವು ಇದ್ದಂತೆಯೇ ಬಳಸಬಹುದು ಎಂಬ ವಿಷಯವನ್ನು ಮುಂದಿಟ್ಟರು. ಅತಿಯಾದ ಸಂಸ್ಕೃತ ಬಳಸಿ ತಂತ್ರಜ್ಞಾನದ ಪದಗಳನ್ನು ಅನುವಾದ ಮಾಡುವ, ಹೊಸ ಹೊಸ ಪದಗಳನ್ನು ರಚಿಸುವ ಮನೋಭಾವ ಪ್ರಶ್ನಿಸಿದರು. ಅದೇ ಸಮಯ ಹಳೆಗನ್ನಡ ಬಳಸಿಯೂ ಹೀಗೆಯೇ ಮಾಡಲಾಗುತ್ತಿರುವ ಮತ್ತೊಂದು extreme ಕುರಿತು ಗಮನ ಸೆಳೆಯುವ ಎಂದಿದ್ದೆ - ಅಷ್ಟರೊಳಗೆ ಚರ್ಚೆಯಲ್ಲಿ ಮತ್ತಷ್ಟು ದನಿ, ಅಭಿಪ್ರಾಯಗಳು ಬೆರೆತು ಮಾತುಕತೆ ಮುನ್ನಡೆದು ಹೋಗಿತ್ತು. ಒಟ್ಟಾರೆ, ಪರ್ಯಾಯ ಪದಗಳಿಲ್ಲದ ಸಮಯ, ಗೊಂದಲ ಮೂಡಿಸುವಂತಹ ಪದಗಳಿರುವ ಸಮಯ, ಆಗಲೇ ಬಳಕೆಯಲ್ಲಿರುವ ಇಂಗ್ಲೀಷ್ ಪದಗಳನ್ನೇ ಬಳಸುವುದು ಎಂಬ ವಿಷಯಕ್ಕೆ ಬೆಂಬಲ ಸಿಕ್ತು. ಚರ್ಚೆ ನಡೆಯುತ್ತಿದ್ದ ಸಮಯ ಕಳೆದ ಚುನಾವಣೆಯಲ್ಲಿ ಬಿಜೆಪಿಯ "Feel Good Factor" ಕನ್ನಡಕ್ಕೆ ಅನುವಾದಗೊಳ್ಳುವಾಗ ಪತ್ರಿಕೆಗಳಲ್ಲಿ ಏನೆಲ್ಲ ಅನಾಹುತಕ್ಕೀಡುಮಾಡಿತ್ತು, ಏನೆಲ್ಲ ಗೊಂದಲ ಹುಟ್ಟುಹಾಕಿತ್ತು ಎಂಬ ವಿಷಯ ಪ್ರಸ್ತಾಪವಾಯಿತು. ಓದುಗರಿಗೆ ಸರಿಯಾಗಿ ಅರ್ಥವಾಗದೇ ಇದ್ದದ್ದಷ್ಟೇ ಅಲ್ಲ, ಆಗ ಪತ್ರಕರ್ತರು ಬರೆದ ವಿಷಯ ಓದುಗರಿಗೆ ಸರಿಯಾಗಿ ತಲುಪದೇ ಹೋಗಿತ್ತು ಕೂಡ. ಈ ವಿಷಯ ಈಗ ನಗಣ್ಯವೆನಿಸಬಹುದು, ಆದರೆ ಮಾಹಿತಿ ತಲುಪಿಸುವಾಗ ಈ ಚಿಕ್ಕ ಸಮಸ್ಯೆಯೂ ಪ್ರಮುಖ ವಿಷಯವಾಗಬಹುದು.

ನಂತರ ತಂತ್ರಜ್ಞಾನ ಕುರಿತು ಬರೆಯುವಾಗ ಮತ್ತೆ ಮತ್ತೆ ಎದುರಾಗುವ ತೊಂದರೆಗಳು, ಬರೆಯುವ ಉತ್ಸಾಹವನ್ನೇ ಹೋಗಲಾಡಿಸುವಂತಹ ತೊಂದರೆಗಳು - ಈ ಕುರಿತು ಚರ್ಚೆ ಮುಂದುವರೆಯಿತು.

ಇಸ್ಮಾಯಿಲ್ ಹಾಕಿದ ಪ್ರಶ್ನೆ: "ಪ್ರೊಜೆಕ್ಟರನ್ನು ಕನ್ನಡದಲ್ಲಿ ಏನಂತ ಕರೆಯುತ್ತೀರಿ?" ಬರವಣಿಗೆಯ ಮೂಲ ಉದ್ದೇಶದ ಕುರಿತು ಗಮನ ಹರಿಸಬೇಕಾದ ಅವಶ್ಯಕತೆ, ಭಾಷೆಯನ್ನು 'ಶುದ್ಧ'ವಾಗಿಟ್ಟುಕೊಳ್ಳುವುದಕ್ಕಿಂತ ಮುಖ್ಯವಾದದ್ದು ಎಂಬುದನ್ನು ಒಪ್ಪುವಂತೆ ಮಾಡಿತ್ತು.

✌✌✌

❤❤❤❤❤

Similar questions