India Languages, asked by Linda1340, 10 months ago

How to write a essay in kannada about my experience of summer holidays

Answers

Answered by shashwat2320
12

ಹಳದಿ ಬಣ್ಣದ ಶಾಲಾ ಬಸ್'ಗಳು ಅರ್ಧ ದಿನದ ಶಾಲೆ ಮುಗಿಸಿ ಶಾಲೆಯಿಂದ ಹೊರಬಿದ್ದ ನಲಿಯುವ ಮಕ್ಕಳನ್ನು ತನ್ನ ಗರ್ಭದಲ್ಲಿ ಹೊತ್ತು ಅವರವರುಗಳು ಇಳಿಯುವ ಸ್ಟಾಪ್'ನಲ್ಲಿ ಇಳಿಸಿ ಮುಂದೆ ಸಾಗುತ್ತಿತ್ತು. ಮಕ್ಕಳನ್ನು ಮನೆಗೆ ಕರೆದೊಯ್ಯಲು ಬಂದಿದ್ದ ಮಾತಾಪಿತೃಗಳು ಮಕ್ಕಳ ಚಿತ್ರ ತೆಗೆಯೋದೇನು, ಅಪ್ಪಿಕೊಳ್ಳೋದೇನು. ನೋಡೋಕ್ಕೆ ಮಜವಾಗಿತ್ತು. ದಿನವೂ ಫೋಟೋ ತೆಗೀತಾರಾ? ದಿನವೂ ಸೆಲ್ಫಿ ತೊಗೊಳ್ತಾರಾ? ಅಂತ ಅನ್ನಿಸಿದ್ದರೆ ಅದು ಹಾಗಲ್ಲಾ... ಇಲ್ಲಿನ ಶಾಲೆಗಳ ಶೈಕ್ಷಣಿಕ ವರ್ಷದ ಕೊನೆಯ ದಿನ ಅದು!

ಜೀವನದ ಮತ್ತೊಂದು ಮಜಲನ್ನು ಯಶಸ್ವಿಯಾಗಿ ಮುಗಿಸಿದ ಮಕ್ಕಳಿಗೆ ವೀರ ಸ್ವಾಗತ. ಖುಷಿಯಿಂದ ಬರಮಾಡಿಕೊಳ್ಳಲೇಬೇಕು. ಖಂಡಿತಾ ಅಡ್ಡಿಯಿಲ್ಲ. ಅರ್ಥಾತ್ ಬೇಸಿಗೆ ರಜಾ ಆರಂಭವಾಯ್ತು ಅಂತ... ಸೆಪ್ಟೆಂಬರ ತಿಂಗಳ ಮೊದಲವಾರದಲ್ಲಿ ಮತ್ತೆ ಹೊಸ ಶೈಕ್ಷಣಿಕ ವರ್ಷ ಆರಂಭ. ಅಲ್ಲಿಯವರೆಗೆ ರಜಾ ಮಜಾ ಅಷ್ಟೇ!

ಅಂದಿನ ಕಾಲದಲ್ಲಿ ಸಿನೆಮಾ ನೋಡುವ ಮಜವೇ ಮಸ್ತಾಗಿತ್ತು!

ನಮ್ಮ ಮನೆಯ ಎದುರಿಗೇ ಶಾಲಾ ಬಸ್ ಸ್ಟಾಪ್ ಇರೋದು. ಹಾಗಾಗಿ ದಿನನಿತ್ಯದಲ್ಲಿ ಮಕ್ಕಳು ಸ್ಟಾಪಿಗೆ ಬರುವುದನ್ನು ನೋಡುವ ಒಂದು ಅವಕಾಶ ಸಿಗುತ್ತೆ. ಮಳೆಗಾಲ, ಚಳಿಗಾಲ ಅಂತ ಕಾಲಕಾಲಕ್ಕೆ ಅವರ ದಿರುಸುಗಳು, ದಿನನಿತ್ಯದಲ್ಲಿ ಅವರುಗಳು ಶಾಲೆಗೇ ಹೋಗುವಾಗಿನ ಚೈತನ್ಯ, ಸೋಮವಾರ ಬೆಳಗಿನ ನಿದ್ದೆ ಮೊಗ, ಶುಕ್ರವಾರದ ಸಂಜೆಗೆ ನಲಿದಾಡೋ ಮುಖ, ಮಕ್ಕಳ ಮೊದಲ ದಿನದ ಖುಷಿ, ಅವರ ಕಡೆಯ ದಿನದ ಸಂತಸ ಹೀಗೆ ಹತ್ತುಹಲವು ವಿಷಯಗಳೆಲ್ಲವೂ ಅವರುಗಳು ಬಾಯಿಬಿಟ್ಟು ಹೇಳದೆ ನನಗೆ ಮಾಹಿತಿ ಕೊಡ್ತಾ ಹೋಗಿದ್ದಾರೆ. ಒಂದು ಖಂಡುಗ ಇರೋ ವಿಷಯ ಬರೆಯುತ್ತಾ ಸಾಗಿದರೆ ಒಂದು ಕಾದಂಬರಿಯೇ ಆಗುತ್ತೆ ಬಿಡಿ.

ಬೇಸಿಗೆ ರಜಾ ಆರಂಭಿಸಿದ ಮಕ್ಕಳನ್ನು ಕಂಡ ಮೇಲೆ ಮನಸ್ಸು ಹಿಂದಿನ ದಿನಗಳಿಗೆ ಹೋಗೋದಕ್ಕೆ ಎಷ್ಟು ಹೊತ್ತು ಬೇಕಾಗುತ್ತೆ?

I had wonderful summer holidays! how was yours?

ನಮ್ಮಲ್ಲಿ ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳು ಮುಗಿದ ಮೇಲೆ ಆಯಾ ತರಗತಿಯ ಟೀಚರುಗಳು ತಮ್ಮ ತಮ್ಮ ಕೈಲಾದಷ್ಟು assignments ಕೊಡುತ್ತಿದ್ದರು. ಎಲ್ಲರಿಂದಲೂ ಸಾಮಾನ್ಯವಾದ assignment ಎಂದರೆ ಫೈನಲ್ exams ಪತ್ರಿಕೆಯ ಪ್ರಶೆಗಳನ್ನು ಉತ್ತರಿಸಿ ಬರೆಯಬೇಕು ಅಂಬೋದು. ಆಂಗ್ಲ ಮತ್ತು ಕನ್ನಡ ಟೀಚರುಗಳು 'ಬೇಸಿಗೆ ರಜೆಯಲ್ಲಿ ನೀವೇನು ಮಾಡಿದಿರಿ' (ಅರ್ಥಾತ್ ಕಡೆದು ಕಟ್ಟೆ ಹಾಕಿದಿರಿ) ಎಂಬುದರ ಬಗ್ಗೆ ಬರೆದುಕೊಂಡು ಬನ್ನಿ ಅನ್ನೋದು ಸಾಮಾನ್ಯ ಶಿಕ್ಷೆ, ಅಲ್ಲಾ ಹೋಮ್ ವರ್ಕ್.

ಹಾಗಂತ ರಜೆಗೆ ಹೋಗಿ ಮತ್ತೆ ಶಾಲೆ ಆರಂಭವಾಗೋವರೆಗೂ ನೀವು ಇತ್ತ ಬಾರದಿರಿ ಅಂತ ಅಲ್ಲ. ಏಪ್ರಿಲ್ ಹತ್ತಕ್ಕೆ ರಿಸಲ್ಟ್ ಬೇರೆ ಇರುತ್ತಲ್ಲಾ! ಪರೀಕ್ಷೆ ಮುಗಿದಾ ನಂತರ ಅತೀವ ಶ್ರದ್ದೆಯಿಂದ homework ಮಾಡಿ ಮುಗಿಸಿದರೆ, ರಿಸಲ್ಟ್ ದಿನ ಚೆನ್ನಾಗಿ ಮಾರ್ಕ್ಸ್ ಬರುತ್ತೆ ಅನ್ನೋ ನಂಬಿಕೆಯೂ ಕೆಲವು ವರ್ಷ ಇತ್ತು. ಏನು ಲಾಜಿಕ್ ಅಂತ ತಲೆ ಕೆಡಿಸಿಕೊಳ್ಳಬೇಡಿ. ಈ ಶ್ರದ್ಧೆ ಪರೀಕ್ಷೆ ಮುಂಚೆ ಇದ್ದಿದ್ರೆ ಈಗ ನೆಮ್ಮದಿಯಾಗಿ ಇರಬಹುದಿತ್ತು ಅಂತ ಪ್ರತಿ ವರ್ಷ ಅನ್ನಿಸುತ್ತೆ!

ಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿ

ಈ ಶ್ರದ್ಧೆ ಬಗ್ಗೆ ಮತ್ತೊಂದು ಮಾತು. ರಜಾ ಆರಂಭವಾದ ಮೊದಲ ದಿನವೇ ಒಂದು ನೋಟ್ ಪುಸ್ತಕದಲ್ಲಿ ಪ್ರತಿದಿನ ಏನು ಮಾಡುತ್ತೇವೆ ಅಂತ ಬರೆದಿಡೋದು, ಆಗ ರಜಾ ಮುಗಿಯೋ ಹೊತ್ತಿಗೆ ಪ್ರಬಂಧ ಬರೆಯಲು ಸಹಾಯಕವಾಗುತ್ತದೆ ಎಂಬ ಅತಿಶಯವಾದ ಆಲೋಚನೆ ಮೂಡಿ, ಮೂರು ನಾಲ್ಕು ದಿನ ಕಟ್ಟುನಿಟ್ಟಾಗಿ ಬರೆದಿಡುತ್ತಿದ್ದೆ. ಐದನೇ ದಿನ ಪುಟ ತಿರುವಿ ನೋಡಿದರೆ ಬೆಳಿಗ್ಗೆ ಎದ್ದೆ, ಕಾಫಿ ಕುಡಿದೆ, ತಿಂಡಿ ತಿಂದೆ, ಊಟ ಮಾಡಿದೆ... ಅದು ಬಿಟ್ರೆ homework ಮಾಡಿದೆ... ಯಪ್ಪಾ ತಂದೆ! ಇವೆಲ್ಲಾ ಬಿಟ್ಟು ಮುಂದೆ ಹೋಗ್ತಾನೇ ಇರಲಿಲ್ಲ ಮಾತು. ಇದನ್ನೇನು ಬರೆಯೋದು ಅಂತ ಅಲ್ಲಿಗೆ ಅದು stop! ಆದರೆ ಪ್ರಬಂಧ ಬರೆಯಲು ಕೂತಾಗ ಮಾತ್ರ ಏನು ಮಾಡಿದೆ ಅಂತ ತಲೆ ಕೆರೆದುಕೊಂಡಿದ್ದಕ್ಕೆ ಇಂದು ತಲೆಗೂದಲು ಕಡಿಮೆಯಾಗಿರೋದು!

Answered by dackpower
6

Experience of summer holidays

Explanation:

ಬೇಸಿಗೆ ರಜಾದಿನಗಳು ನನ್ನ ತಾಯಿ ನನ್ನನ್ನು ಮತ್ತು ನನ್ನ ಸಹೋದರನನ್ನು ಮನೆಯಲ್ಲಿ ಮುದ್ದಿಸುವ ಸಮಯ. ಇದು ತುಂಬಾ ಬಿಸಿಯಾಗುತ್ತಿದ್ದಂತೆ, ತಾಪಮಾನವು ನಲವತ್ತೈದು ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುತ್ತದೆ, ನಾವು ಹಗಲಿನ ವೇಳೆಯಲ್ಲಿ ಮನೆಯೊಳಗೆ ಇರಲು ಬಯಸುತ್ತೇವೆ, ಮತ್ತು ನಮ್ಮ ತಾಯಿ ನಮಗೆ ತಿನ್ನಲು ಸುಂದರವಾದ ಗುಡಿಗಳನ್ನು ಮಾಡುತ್ತಾರೆ. ಅವಳು ಕೇಕ್ ತಯಾರಿಸಲು ಇಷ್ಟಪಡುತ್ತಾಳೆ. ಆದ್ದರಿಂದ ಅವರು ರುಚಿಕರವಾದ ಕೇಕ್ ಮತ್ತು ಇತರ ಮಿಠಾಯಿಗಳನ್ನು ತಯಾರಿಸಲು ವಿವಿಧ ಆರೋಗ್ಯಕರ ಮತ್ತು ಪೌಷ್ಟಿಕ ಪದಾರ್ಥಗಳನ್ನು ಬಳಸಲು ಪ್ರಯತ್ನಿಸುತ್ತಾರೆ. ಈ ಎಲ್ಲಾ ಸಿಹಿತಿಂಡಿಗಳ ಮೇಲೆ ನಾವು ಗೊರ್ಜಿಂಗ್ ಅನ್ನು ಇಷ್ಟಪಡುತ್ತೇವೆ. ನನ್ನ ತಾಯಿ ಕೂಡ ಮನೆಯಲ್ಲಿ ಐಸ್ ಕ್ರೀಮ್ ಅನ್ನು ಚಾವಟಿ ಮಾಡುತ್ತಾರೆ. ಅವರು ಏಪ್ರಿಕಾಟ್, ಪ್ಲಮ್ ಮತ್ತು ಚೆರ್ರಿಗಳೊಂದಿಗೆ ಆಸಕ್ತಿದಾಯಕ ಪಾನೀಯಗಳನ್ನು ಸಹ ಮಾಡುತ್ತಾರೆ.

ಬೇಸಿಗೆ ಕೂಡ ಅನೇಕ ಬಗೆಯ ರಸಭರಿತ ಮತ್ತು ಸಿಹಿ ಮಾವಿನಹಣ್ಣುಗಳು ಲಭ್ಯವಿರುವ ಸಮಯ, ಮತ್ತು ನನ್ನ ತಾಯಿ ಮಾವಿನಹಣ್ಣನ್ನು ಬಳಸಿ ವಿವಿಧ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಅವಳು ನಮ್ಮ ಎಲ್ಲ ಸ್ನೇಹಿತರಿಗಾಗಿ ಮಾವಿನ ಪಾರ್ಟಿಗಳನ್ನು ಸಹ ಆಯೋಜಿಸುತ್ತಾಳೆ. ಬೇಸಿಗೆ ರಜಾದಿನಗಳಲ್ಲಿ ನಮ್ಮ ಶಿಕ್ಷಕರು ಶಾಲೆಯಲ್ಲಿ ನಮಗೆ ನಿಯೋಜಿಸುವ ನನ್ನ ರಜಾದಿನದ ಮನೆಕೆಲಸವನ್ನು ಪೂರ್ಣಗೊಳಿಸುತ್ತೇನೆ. ರಜೆ ಮುಗಿದಾಗ ಹೊಸ ಸೆಮಿಸ್ಟರ್‌ಗೆ ಶಾಲೆಗೆ ಮರಳಲು ನನಗೆ ಉಲ್ಲಾಸ ಮತ್ತು ಶಕ್ತಿ ತುಂಬುತ್ತದೆ.

Learn more

Difference between summer training and summer internship

brainly.in/question/4535709

Similar questions