World Languages, asked by tharun092005, 3 months ago

(I), ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ.
1. ವರದಕ್ಷಿಣೆಯ ಪಿಡುಗು
2.
ಬಾಲ ಕಾರ್ಮಿಕರು
3,
ಯೋಗ ಮತ್ತು ಆರೋಗ್ಯ​

Answers

Answered by yuvikamd18
1

Answer:

* ವರದಕ್ಷಿಣೆ ಕೊಡುವುದು, ಕೇಳುವುದು, ತೆಗೆದುಕೊಳ್ಳುವುದು ಮತ್ತು ವರದಕ್ಷಿಣೆ ಕೊಡುವುದಾಗಿ ಜಾಹೀರಾತು ಕೊಡುವುದು ಅಪರಾಧ.

* ವರದಕ್ಷಿಣೆ ನೀಡುವ ಮತ್ತು ತೆಗೆದುಕೊಳ್ಳುವ ಅಪರಾಧಕ್ಕೆ ಶಿಕ್ಷೆ-ಕನಿಷ್ಠ ಐದು ವರ್ಷಗಳ ಕಾರಾವಾಸ ಮತ್ತು 15,000 ರೂಗಳವರೆಗೆ ಜುಲ್ಮಾನೆ.

* ವರದಕ್ಷಿಣೆ ಕೇಳುವ ಅಪರಾಧಕ್ಕೆ ಶಿಕ್ಷೆ-ಕನಿಷ್ಠ ಎರಡು ವರ್ಷಗಳ ಕಾರಾವಾಸ ಮತ್ತು 10,000 ರೂಗಳ ವರೆಗೆ ಜುಲ್ಮಾನೆ.

ಈ ಪಿಡುಗು ತೊಲಗಬೇಕಾದರೆ ಜನ ಜಾಗೃತಿ ಹಾಗೂ ಸಹಕಾರ ಮುಖ್ಯ

ದೂರು:

* ದೂರು ನೀಡುವ ವ್ಯಕ್ತಿ: ವರದಕ್ಷಿಣೆ ಬೇಡಿಕೆಯಿಂದ ತೊಂದರೆಗೆ ಒಳಗಾದ ವ್ಯಕ್ತಿ, ಅಥವಾ ಅಂಥ ವ್ಯಕ್ತಿಯ ತಂದೆ, ತಾಯಿ ಅಥವಾ ಆ ವ್ಯಕ್ತಿಯ ಯಾರೇ ಸಂಬಂಧಿ ಅಥವಾ ಮಾನ್ಯತೆ ಪಡೆದ ಯಾವುದೇ ಸ್ವಯಂ ಸೇವಾ ಸಂಘ/ಸಂಸ್ಥೆ ಲಿಖಿತ ದೂರು ನೀಡಬಹುದು.

* ದೂರು ಸ್ವೀಕರಿಸುವ ಅಧಿಕಾರಿಗಳು: ಜಿಲ್ಲಾ ಮಟ್ಟದಲ್ಲಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರು/ಉಪ-ನಿರ್ದೇಶಕರು; ತಾಲೂಕುಗಳಲ್ಲಿ, ಆ ಇಲಾಖೆಯ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ತಹಸೀಲ್ದಾರರು. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಮುಖ್ಯ ವರದಕ್ಷಿಣೆ ನಿಷೇಧ ಅಧಿಕಾರಿಗಳಾಗಿರುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿನ ಪ್ರಮುಖ ಶಾಸನಾತ್ಮಕ ಬೆಳವಣಿಗೆಗಳು ಈ ಕೆಳ ಕಂಡ ಅಂಶಗಳನ್ನು ಒಳಗೊಂಡಿವೆ.

ಬಾಲ ಕಾರ್ಮಿಕ ಕಾಯಿದೆ,೧೯೪೮: ಈ ಕಾಯಿದೆಯು ೧೪ ವರ್ಷದೊಳಗಿನ ಮಕ್ಕಳನ್ನು ಅವರ ಜೀವ ಮತ್ತು ಆರೋಗ್ಯಕ್ಕೆ ಹಾನಿಕರವಾದ ೧೩ ವಿಧದ ವೃತ್ತಿಗಳಲ್ಲಿ ಮತ್ತು ೫೭ಕಾರ್ಯ ವಿಧಾನ ಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ಆ ವೃತ್ತಿಗಳು ಮತ್ತು ಕಾರ್ಯ ವಿಧಾನಗಳನ್ನು ಆ ಕಾಯ್ದೆಯ ಪರಿಶಿಷ್ಟದಲ್ಲಿ ನಮೂದಿಸಲಾಗಿದೆ.

ಕೈಗಾರಿಕೆಗಳ ಕಾನೂನು (ಫ್ಯಾಕ್ಟರೀಸ್ ಅ್ಯಾಕ್ಟ) ,೧೯೪೮. ಈ ಕಾಯ್ದೆಯು ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಕೆಲಸಕ್ಕೆ ನೇಮಿಸಿ ಕೊಳ್ಳುವುದನ್ನು ನಿಷೇಧಿಸಿದೆ ೧೫-೧೮ ವರ್ಷದ ಒಳಗಿರುವ ಹದಿ ಹರೆಯದವರನ್ನು ಕಾರ್ಖಾನೆಯ ಕೆಲಸಕ್ಕೆ ತೆಗೆದು ಕೊಳ್ಳಬೆಕಾದರೆ ಅವರು ವೈದ್ಯರಿಂದ ದೈಹಿಕ ಅರ್ಹತೆಯ ಪ್ರಮಾಣ ಪತ್ರ ಪಡೆದಿರಬೇಕು. ಕಾಯಿದೆಯು ೧೪ ರಂದ ೧೮ ವರ್ಷದೊಳಗಿನ ಕೆಲಸಗಾರರಿಗೆ ದಿನಕ್ಕೆ ನಾಲಕ್ಕೂವರೆ ಗಂಟೆಯ ಕೆಲಸದ ಅವಧಿಯನ್ನು ನಿಗದಿಪಡಿಸಿದೆ ಮತ್ತು ಅವರು ರಾತ್ರಿ ಪಾಳಿಯನ್ನು ಕೆಲಸ ಮಾಡುವುದನ್ನು ನಿಷೇಧಿಸಿದೆ.

ಮನುಷ್ಯನೋರ್ವ ಪೂರ್ಣ ಸ್ವಸ್ಥನೆಂದರೆ ಅವನಲ್ಲಿ ದೋಷಗಳು(ತ್ರಿದೋಷ), ಧಾತುಗಳು (ಸಪ್ತಧಾತುಗಳು), ಅಗ್ನಿ, ಮಲಕ್ರಿಯೆಗಳು ಸಮವಾಗಿದ್ದು ಇಂದ್ರಿಯಗಳು, ಮನಸ್ಸು ಮತ್ತು ಆತ್ಮವು ಪ್ರಸನ್ನವಾಗಿ ಅಂದರೆ ಸಂತೃಪ್ತವಾಗಿದ್ದರೆ ಆತನನ್ನು ಸ್ವಸ್ಥ ಎನ್ನಬಹುದಾಗಿದೆ.

ಅಂದರೆ ಮನುಷ್ಯನ ಆರೋಗ್ಯ ಎಂದರೆ ಕೇವಲ ದೇಹದ ಆರೋಗ್ಯವಲ್ಲದೆ, ಅದು ಮನಸ್ಸು ಇ‍ತ್ಯಾದಿಗಳನ್ನು ಒಳಗೊಂಡ ಒಂದು ಸ್ಥಿತಿಯಾಗಿದೆ. ಇದನ್ನೇ ವಿಶ‍್ವ ಆರೋಗ್ಯ ಸಂಸ್ಥೆ ತನ್ನ ಆರೋಗ್ಯದ ವ್ಯಾಖ್ಯಾನದಲ್ಲಿ ಹೀಗೆ ಹೇಳಿದೆ :-

“ಆರೋಗ್ಯ ಎಂದರೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಕವಾಗಿ ಸಂಪೂರ್ಣವಾಗಿ ಚೆನ್ನಾಗಿರುವುದೇ ಆಗಿದೆ. ಕೇವಲ ದೈಹಿಕ ರೋಗಗಳಿಂದ ಮುಕ್ತವಾಗಿರುವುದಲ್ಲ”.

ಯೋಗದ ದೃಷ್ಟಿಯಲ್ಲಿ ದೇಹವು ಐದು ಕೋಶಗಳನ್ನು ಒಳಗೊಂಡಿದೆ.

ಈ ಐದು ಕೋಶಗಳ ಬಗ್ಗೆ ಉಪನಿಷತ್ತಿನಲ್ಲಿ ಉಲ್ಲೇಖವಿದೆ.

ಇವುಗಳನ್ನು ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳೆಂದು ಹೆಸರಿಸಿದ್ದಾರೆ.

ಪಂಚಕೋಶಗಳ ಬಗ್ಗೆ ತೈತ್ತಿರೀಯ ಉಪನಿಷತ್ ವಿವರವಾಗಿ ತಿಳಿಸುತ್ತದೆ.

Explanation:

ಕನ್ನಡತಿ❤️

Similar questions