i need conclusion for shale pravasa essay in kannada
Answers
Explanation:
ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಒಂದು ಪ್ರಮುಖವಾದ ಭಾಗವೆಂದೇ ಹೇಳಬಹುದು. ತಮ್ಮ ಸ್ವಂತ ಅನುಭವದ ಮೇಲೆ, ವೀಕ್ಷಣೆಯ ಮೇರೆಗೆ ಮಕ್ಕಳಿಗೆ ಕಲಿಯುವ ಒಂದು ಅವಕಾಶ. ಕೇವಲ ಪುಸ್ತಕದ ಬದನೇಕಾಯಿ ಆಗದೆ, ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆಯಲು ಮಾಡಬಹುದಾದಂತಹ ಒಂದು ಉತ್ತಮ ಪ್ರಯತ್ನವೇ ಶೈಕ್ಷಣಿಕ ಪ್ರವಾಸಗಳ ಕೈಗೊಳ್ಳುವಿಕೆ. ಶೈಕ್ಷಣಿಕ ಪ್ರವಾಸದ ಯೋಜನೆಯಿಂದ ಮಕ್ಕಳಲ್ಲಿ ಇತಿಹಾಸ, ವಾಸ್ತುಶಿಲ್ಪ, ಅಭಿವೃದ್ಧಿ, ಉದ್ಯಮ, ಜನ, ಧರ್ಮ, ಸಂಸ್ಕೃತಿ, ಹಾಡು, ನೃತ್ಯ ಹವಾಮಾನ, ನಿಸರ್ಗ, ಪ್ರಾಣಿ ಪಕ್ಷಿ ಸಂಕುಲ ಮತ್ತು ಪರಿಸರದ ಕುರಿತಾಗಿ ಸಾಕಷ್ಟು ವಿಷಯಗಳು ಅರಿವಿಗೆ ಬರುವುದಲ್ಲದೇ, ಕಲ್ಪನೆಗೂ ಮೀರಿ ಅವರ ಜ್ಞಾನಶಕ್ತಿ ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುರಿದುಂಬಿಸಲು ಅನೂಕೂಲವಾಗುತ್ತದೆ.
ಕೇವಲ ಪಾಠದ ವಿಷಯಕ್ಕಾಗಿ ಒಂದೇ ಅಲ್ಲದೇ, ಈ ರೀತಿಯ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಏಕತಾನತೆ, ಪರಸ್ಪರ ಸಹಕಾರ, ಸಂತೋಷ, ಹಂಚುವ ಭಾವನೆ, ತಮ್ಮ ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರ ವ್ಯಕ್ತಿಯೆಡೆಗೆ ಗೌರವ ಹೀಗೆ ಇನ್ನೂ ಹಲವು ಬಗೆಯ ಸೌಜನ್ಯ ನಡವಳಿಕೆಗಳನ್ನು ತುಂಬಲು ಮತ್ತು ಮಕ್ಕಳು ಮುಂದೆ ಸಂಭಾವಿತರಾಗಿ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಪಠ್ಯ ಪುಸ್ತಕದಲ್ಲಿ ಕೇಳಿ ಓದಿ ತಿಳಿಯುವುದಕ್ಕಿಂತಲೂ, ವಾಸ್ತವಿಕವಾಗಿ ನೋಡಿ ಅದರ ಅನುಭವ ಪಡೆಯುವುದು, ಆ ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮೌಲ್ಯವನ್ನು ಕೊಡುತ್ತದೆ.
ಇದರ ಜೊತೆಗೆ, ಈ ಹಿಂದೆ ನೋಡಿರದ, ಪರಿಚಯವಿಲ್ಲದ ಊರಿಗಳಿಗೆ ತಿರುಗಾಡಿ ಅಲ್ಲಿಯ ನೆಲ, ಜಲ, ಜನ, ಪರಿಸ್ಥಿತಿ ಪ್ರತಿಯೊಂದನ್ನೂ ಹತ್ತಿರದಿಂದ ನೋಡಲು ಮತ್ತು ಮಿತ್ರರೊಡನೆ, ಕಲಿಸುವ ಗುರುಗಳೊಂದಿಗೆ ಆತ್ಮೀಯತೆಯನ್ನು ಪಡೆಯಲು ಅವಕಾಶವಾಗುತ್ತದೆ.ಹೇಗಿರಬೇಕು ಶೈಕ್ಷಣಿಕ ಪ್ರವಾಸ :
. ಶೈಕ್ಷಣಿಕ ಪ್ರವಾಸ ಹೆಸರೇ ಹೇಳುವಂತೆ, ಮಕ್ಕಳಿಗೆ ನಿತ್ಯದ ಶಾಲಾ ವಾತಾವರಣದಿಂದ ಹೊರ ಕರೆತಂದು, ಅವರಿಗೆ ಒಂದು ಆಕರ್ಷಣೀಯ ರೀತಿಯಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಹಾಗೂ ಇನ್ನಿತರ ಹೆಚ್ಚಿನ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ತಾವು ನೋಡಿರದ ಬೇರೆ ಯಾವದೋ ಸ್ಥಳಕ್ಕೆ ತಮ್ಮ ನೆಚ್ಚಿನ ಸಹಪಾಠಿಗಳೊಂದಿಗೆ ಮೋಜು ಮಸ್ತಿ ಮಾಡುತ್ತಾ ಓಡಾಡಿಕೊಂಡು ಬರುವ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಮಕ್ಕಳೂ ಕೂಡ ಅಪೇಕ್ಷೆ ಪಡುತ್ತಾರೆ. ಆದರೆ ಇತ್ತೀಚಿಗೆ ನಾವು ನೋಡುವಂತೆ ಸಾಕಷ್ಟು ಶಾಲೆಗಳಲ್ಲಿ ತಮ್ಮ ಇಚ್ಛೆ ಹಾಗೂ ಅನುಕೂಲಕ್ಕೆ ತಕ್ಕಂತೆ ಪ್ರವಾಸದ ಸ್ಥಳವನ್ನು ತಾವೇ ಗೊತ್ತು ಮಾಡಿ, ಮಕ್ಕಳಿಗೆ ಪ್ರವಾಸ ಕಡ್ಡಾಯಗೊಳಿಸುವುದು ಶಾಲಾ ನಿರ್ವಾಹಕರಿಂದ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಶೈಕ್ಷಣಿಕ ಪ್ರವಾಸ ಎಂದರೆ ಕೇವಲ ಯಾವದೋ ದೂರದ ಒಂದು ಪ್ರಸಿದ್ಧ ಸ್ಥಳಕ್ಕೆ ಭೇಟಿ ಕೊಡಬೇಕೆಂದಲ್ಲ, ಆ ಸ್ಥಳವು ಕರೆದುಕೊಂಡು ಹೋಗುತ್ತಿರುವ ಮಕ್ಕಳ ಅರಿವಿನ ಮಟ್ಟಕ್ಕೆ ಇದೆಯೇ ಎಂಬುದರ ಪರಿಶೀಲನೆ ಅಗತ್ಯ. ಹೆಚ್ಚೆಚ್ಚು ಮೋಜು ಮಾಡುವ ಸ್ಥಳಗಳನ್ನು ಆಯ್ದುಕೊಂಡು ಮಕ್ಕಳ ಪೋಷಕರ ಮೇಲೆ ಅತಿಯಾದ ಪ್ರವಾಸದ ವೆಚ್ಚವನ್ನು ಹೇರುವುದೂ ಕೂಡ ಸರಿಯಲ್ಲ.