English, asked by vijanga, 1 year ago

i want a good essay in kannada on parisara samatholana

Answers

Answered by xXHORIZONXx
1
Hiya fella I will help u go to this link


https://www.youtube.com/channel/UCwoE_W9nvIUy1roKJOV23bw/about?disable_polymer=1
Answered by nikkii1818
6
ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ
ದುಷ್ಪರಿಣಾಮ ಬೀರುವ, ಅದರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ
ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ, ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ
ತಂತ್ರಜ್ಞಾನದ ದೆಸೆಯಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ವಿಮುಖರಾಗಿ ವಿವಿಧ
ಅನೈಸರ್ಗಿಕ ವೃತ್ತಿಗಳಲ್ಲಿ, ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೆಲವೊಮ್ಮೆ ಇದು ಮನುಷ್ಯನ ಉದಾಸೀನತೆ, ತಿಳಿಗೇಡಿತನ ಎಂದು ಕಂಡುಬಂದರೆ ಅನೇಕ ಸಲ ಇದರಲ್ಲಿ ಜನಸಾಮಾನ್ಯನ
ದೈನಂದಿನ ಆದ್ಯತೆ, ಅನಿವಾರ್ಯತೆ ಹಾಗೂ ಅಸಹಾಯಕತೆಗಳು ಎದ್ದುಕಾಣುತ್ತವೆ. ಹೀಗಿರುವಾಗ ಬಹುಪಾಲು ಜನರಿಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮ
ಕಣ್ಣಮುಂದೆಯೂ, ತೆರೆಮರೆಯಲ್ಲಿಯೂ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ
ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ. 

ಮಾನವನು ಕಲ್ಪಿಸಲೂ ಅಸಾಧ್ಯವೆನಿಸಿದ ಅನೇಕ ಸಂಗತಿಗಳನ್ನು
ಈಗಾಗಲೇ ಸಾಧಿಸಿ ತೋರಿಸಿದ್ದಾನೆ. ಇಂಥಾದ್ದರಲ್ಲಿ ನಾವೇ ಹುಟ್ಟುಹಾಕಿದ ಸಮಸ್ಯೆಗಳನ್ನು
ಮೀರಿ ನಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ ಇದೆ ಎಂಬ ನಿಲುವಿನೊಂದಿಗೆ ಮುಂದಿನ ಹೆಜ್ಜೆ ಇಡಿ ಎಂದು
ನಿಮ್ಮಲ್ಲಿ ನನ್ನ ನಿವೇದನೆ. ನಮ್ಮ ಸುತ್ತಮುತ್ತಲೂ ಏನಿದೆ, ಏನು ನಡೆಯುತ್ತಿದೆ ಎಂಬುದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ
ಎಚ್ಚರದಿಂದ ಗಮನಿಸಿ ಜಾಗೃತರಾಗುವುದು ಮೊತ್ತಮೊದಲ ಹೆಜ್ಜೆ. ಇವೆಲ್ಲದರಲ್ಲಿ ಪರಿಸರದ ಹಿತಾಸಕ್ತಿಯನ್ನು ಕಾಪಾಡುವ ಅಂಶಗಳನ್ನು
ಎತ್ತಿಹಿಡಿದು, ಪರಿಸರವನ್ನು ಕಡೆಗಣಿಸುವ ಅಂಶಗಳನ್ನು ಕೆಳತಳ್ಳುವ ಪ್ರಾಮಾಣಿಕ
ಪ್ರಯತ್ನಗಳನ್ನು ಮಾಡುತ್ತೇನೆ ಎಂಬ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಂಡರೆ ನಿಧಾನವಾಗಿ ಈ
ಸಮಸ್ಯೆಗಳು ತೀವ್ರತೆಯನ್ನು ಕಳೆದುಕೊಂಡು ಕೊನೆಗೆ ಇಲ್ಲವಾಗುವವು.

ಮನುಷ್ಯನ ಜೀವನ, ಅಗತ್ಯಗಳು ಹಾಗೂ ಅವುಗಳ ಪೂರೈಕೆ – ಇದೊಂದು ಸಂಕೀರ್ಣವಾದ ಜಾಲ. ಇದನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಂಡಷ್ಟೂ ಪರಿಸರ ಸಂರಕ್ಷಣೆಯ ಕುರಿತಾದ ಚಿಂತನೆ, ವಿವರಣೆಗಳು ಸುಲಭವಾಗುತ್ತವೆ. ಈ ನಿಟ್ಟಿನಲ್ಲಿ ರಚಿಸಲಾದ ’ಮನುಷ್ಯನ ಅಗತ್ಯ-ಪೂರೈಕೆಗಳ ಸರಪಳಿ’ ಎಂಬ ಚಿತ್ರ ನಿರೂಪಣೆ ಸಹಾಯಕಾರಿಯಾಗಬಲ್ಲುದು ಎಂದು ನಂಬಿದ್ದೇನೆ.

ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ
ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು
ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ
ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ
ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ
ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ  ಪ್ರಕಟಣೆಯಲ್ಲಿ
ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ‍್‌ಬೈಜಾನ್, ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತು ಜಾಂಬಿಯಾ ಪ್ರದೇಶದಲ್ಲಿವೆ.

ಪ್ರಸ್ತುತ
ಪರಿಸರದಲ್ಲಿ ಮಾಲಿನ್ಯ ವಿಸ್ತಾರವಾಗಿ ಬೆಳೆದಿದೆ. ಹಾಗೂ ಅದರ ಮೇಲೆ ಅನೇಕ ಪರಿಣಾಮಗಳನ್ನು ಕೂಡ
ಬೀರುತ್ತದೆ.ಸಲ್ಪರ್ ಡೈಕ್ಸೈಡ್ ಹಾಗೂ ನೈಟ್ರೊಜನ್ ಆಕ್ಸೈಡ್ಸ್ ಗಳು ಆಸಿಡ್ ಮಳೆಗೆ
ಕಾರಣವಾಗುವುದು. ಇದು ಮಣ್ಣಿನಲ್ಲಿನ ಪಿಹೆಚ್ ಮೌಲ್ಯ ಕಡಿಮೆಯಾಗಲು
ಕಾರಣವಾಗುತ್ತದೆ.ವಾತಾವರಣದಲ್ಲಿರುವ ನೈಟ್ರೊಜನ್ ಆಕ್ಸೈಡ್ಸ್ಗಳು ಮಳೆಯಿಂದ ಬೇರ್ಪಡುತ್ತವೆ.
ಮಳೆಯಾಗವ ಪ್ರದೇಶದಲ್ಲಿ ಭೂಮಿಯ ಫಲವತ್ತತೆಯನ್ನು ಇದು ಹೆಚ್ಚಿಸುವುದರಿಂದ ಆ ಪರಿಸರ
ವ್ಯವಸ್ಥೆಯಲ್ಲಿಯ ಜೀವ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತದೆ.

ಮಣ್ಣು
ಫಲವತ್ತತೆಯನ್ನು ಕಳೆದುಕೊಂಡು ಸಸ್ಯಗಳು ಬೆಳೆಯಲು ಯೋಗ್ಯವಾಗಿರುವುದಿಲ್ಲ.ಇದು ಆಹಾರ
ಸರಪಳಿಯಲ್ಲಿರುವ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ.ಸ್ಮಾಗ್ ಮತ್ತು ಮಬ್ಬುನಿಂದ ಕಡಿಮೆಯಾದಂತಹ
ಸೂರ್ಯನ ಬೆಳಕಿನ ಪರಿಮಾಣದಲ್ಲೇ ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ. ಉತ್ಪಾದನೆಗೆ
ಮಾರ್ಗದರ್ಶಕವಾಗಬೇಕಾದ ಓಜೋನ್ ಕೊರತೆಯಿಂದಾಗಿ ಹಾಗೂ ಹೆಚ್ಚಿದ ಉಷ್ಣತೆಯಿಂದಾಗಿ ಸಸ್ಯವರ್ಗ
ನಾಶವಾಗುತ್ತದೆ.

ಸ್ವಾಭಾವಿಕ
ವರ್ಗಗಳೊಂದಿಗೆ ಸ್ಪರ್ಧಿಸುವ ಆಕ್ರಮಣ ಸಸ್ಯವರ್ಗಗಳಿಂದಾಗಿ ಜೈವಿಕ ವೈವಿದ್ಯತೆಯಲ್ಲಿ
ಕುಂಠಿತವಾಗುತ್ತದೆ. ಒಂದು ಪ್ರದೇಶದ ವಾತಾವರಣದ ಮೂಲ ಸಸ್ಯಗಳಲ್ಲದ ಕಳೆರೀತಿಯ ಸಸ್ಯಗಳು ಹೆಚ್ಚಾಗಿ
ಬೆಳೆಯುವುದರಿಂದ ಅಲ್ಲಿಯ ಜೈವಿಕ ಕಣಗಳ ವ್ಯುತ್ಪತ್ತಿ ಹೆಚ್ಚಾಗಿ ಮೂಲ ಸಸ್ಯಗಳ ಬೆಳವಣಿಗೆಯ
ಸ್ಪರ್ಧೆಗೆ ತಡೆಯಾಗುತ್ತವೆ.ಜೈವಿಕ ವರ್ಧನೆಯ ಕೆಲವು ಹಂತಗಳಲ್ಲಿ ಜೈವಿಕ ವೃದ್ಧಿಯಾಗುವಂತಹ
ಸಂದರ್ಭಗಳಲ್ಲಿ ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷ(ಕೆಲವು ಭಾರವಾದ ಲೋಹಗಳು), ಜೈವಿಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು
ಸಾಂದ್ರವಾಗಿರುತ್ತದೆ.

ಕಾರ್ಬನ್‌
ಡೈಆಕ್ಸೈಡ್ಸೂಸುವಿಕೆಯು ಸರೋವರದ ಆಮ್ಲೀಕರಣಕ್ಕೆ ಕಾರಣವಾಗುತ್ತದೆ ಹಾಗೂ ಭೂಮಿಯ ಪಿಹೆಚ್
ಕಡಿಮೆಯಾಗಿ ಸರೋವರ ದಲ್ಲಿ
ವಿಲೀನವಾಗುತ್ತಿದೆ.ಅನೇಕ ರೀತಿಯಲ್ಲಿ ಪರಿಸರ ವ್ಯವಸ್ಥೆಯಲ್ಲಿ ಹಸಿರುಮನೆ ಅನಿಲವು ಜಾಗತಿಕ
ತಾಪಮಾನದ ಮೇಲೆ ಪ್ರಭಾವ ಬೀರಿದೆ.

ಮಾಲಿನ್ಯ ಪ್ರಭಾವಗಳಿಂದ
ಪರಿಸರವನ್ನು ರಕ್ಷಿಸಲು, ಜಗತ್ತಿನಾದ್ಯಂತ ಅನೇಕ ದೇಶಗಳು ವಿವಿಧ ಮಾಲಿನ್ಯ
ನಿಯಂತ್ರಣ ಕಾಯ್ದೆಗಳನ್ನು ರೂಪಿಸಿ, ಮಾಲಿನ್ಯದ ಪ್ರಭಾವಗಳನ್ನು ತಗ್ಗಿಸಬೇಕಾಗಿದೆ. ಪರಿಸರ ನಿರ್ವಹಣಾ ಕಾರ್ಯದಲ್ಲಿ ಮಾಲಿನ್ಯ
ನಿಯಂತ್ರಣ ಶಬ್ಧವನ್ನು ಬಳಸಲಾಗುತ್ತದೆ. ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಅನುಪಯುಕ್ತ
ತ್ಯಾಜ್ಯಗಳುಮಣ್ಣು,
ನೀರು ಅಥವಾ ಗಾಳಿಯನ್ನು ಸೇರದಂತೆ ತಡೆಯುವುದು
ಎಂದು ಹೇಳಬಹುದು. ಮಾಲಿನ್ಯ ನಿಯಂತ್ರಣ ಮಾಡದೇ ಇದ್ದರೆ, ಅನುಭೋಗ,
ಉಷ್ಣತೆ, ಕೃಷಿ, ಗಣಿಗಾರಿಕೆ, ಉತ್ಪಾದನೆ,
ಸಾರಿಗೆ ಮತ್ತು ಮಾನವ ಚಟುವಟಿಕೆ ಇವೆಲ್ಲವುಗಳ
ಅನುಪಯುಕ್ತ ವಸ್ತುಗಳು ಒಂದೆಡೆ ಸೇರಿಕೊಂಡು ಅಥವಾ ಚದುರಿ ಪರಿಸರವನ್ನು ಕಲುಷಿತಗೊಳಿಸುತ್ತವೆ.
ನಿಯಂತ್ರಣದ ಅನುಕ್ರಮದಲ್ಲಿ, ಮಾಲಿನ್ಯ ಪ್ರತಿಬಂಧ
ಮತ್ತು ತ್ಯಾಜ್ಯವಸ್ತುಗಳ ಕಡಿತಗೊಳಿಸುವುದುಮಾಲಿನ್ಯ ನಿಯಂತ್ರಣಕ್ಕಿಂತ ಹೆಚ್ಚು
ಅಪೇಕ್ಷಣೀಯವಾಗಿದೆ.

Similar questions