I want essay on communication in Kannada
Answers
Answer:
ಉತ್ತಮ ಸಂವನ ಕೌಶಲ್ಯವು ಸಮಾಜದಲ್ಲಿ ನಮಗೆ ಒಳ್ಳೆಯ ಬೆಲೆಯನ್ನು ತಂದುಕೊಡುತ್ತದೆ. ನಾವು ನಮ್ಮ ಸುತ್ತಲಿರುವ ಪರಿಸರ ಕೂಡ ಈ ಸಂವಹನವನ್ನು ಆಧರಿಸಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಉಕ್ತಿಯಂತೆ ಉತ್ತಮ ಸಂವಹನವು ಸಮಾಜದಲ್ಲಿ ನಮ್ಮ ಬೆಲೆಯನ್ನು ಎತ್ತಿ ತೋರಿಸುತ್ತದೆ. ಆದರೆ ತಮ್ಮಲ್ಲಿ ಉತ್ತಮ ಸಂವಹನ ಕೌಶಲ್ಯವಿಲ್ಲ ಎಂದು ಕೊರಗುವವರು ತೀರಾ ಕೀಳರಿಮೆಗೆ ಗುರಿಯಾದೇ ಇರುವುದಿಲ್ಲ.
ಈ ಸಂದರ್ಭದಲ್ಲಿ ನಮ್ಮಲ್ಲಿನ ಮಾತಿನ ಕೌಶಲ್ಯವನ್ನು ಸಾಣೆ ಹಿಡಿಯುವುದು ಹೇಗೆಂಬುದು ನಮಗೆ ತಿಳಿದಿರಬೇಕು. ನಿಮ್ಮ ಸಂವಹನ ಸುಧಾರಣೆಯಾದಲ್ಲಿ ಮಾತ್ರವೇ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಗುರಿ ನಿಮಗೆ ಕಾಣುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಸಂವಹನವನ್ನು ಉತ್ತಮಗೊಳಿಸುವ ಕೆಲ ಅಂಶಗಳತ್ತ ಗಮನ ಹರಿಸೋಣ. ಕೆಲವೊಂದು ಮುಖ್ಯ ಅಂಶಗಳನ್ನು ನಮ್ಮಲ್ಲಿ ರೂಢಿಸಿಕೊಂಡಾಗ ಸಂವಹನ ನಮಗೆ ತೀರಾ ಕಷ್ಟ ಎಂದೆನಿಸುವುದಿಲ್ಲ. ಹಾಗಿದ್ದರೆ ನಿಮ್ಮ ಬದುಕಿನ ಭವಿಷ್ಯದ ಭದ್ರ ಕೀಲಿ ಕೈ ಎಂದೆನಿಸಿರುವ ಸಂವಹನವನ್ನು ಸುಧಾರಿಸಿಕೊಳ್ಳುವುದು ಹೇಗೆಂಬುದನ್ನು ಈ ಕೆಳಗಿನ ಸ್ಲೈಡ್‌ಗಳಿಂದ ತಿಳಿದುಕೊಳ್ಳೋಣ.