I want Guna nodi geletana madu gade explain
Answers
Answer:
ಗುಣ ನೋಡಿ ಗೆಳೆತನ ಮಾಡು
ಈ ಗಾದೆಯು ಸಜ್ಜನರ ಗೆಳೆತನ ಹಾಗೆ ಸಹವಾಸ ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ.
ಸದ್ಗುಣ ಇರುವಂತಹ ಸ್ನೇಹಿತರು ದೊರೆಯುವುದು ನಮ್ಮ ಸೌಭಾಗ್ಯ ಎಂಬುದು ಈ ಗಾದೆಯ ವಿವರಣೆ.
Explanation:
ಧನ್ಯವಾದಗಳು!!
ಗುಣ ನೋಡಿ ಗೆಳೆತನ ಮಾಡು
ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ನಾವು ಯಾವಾಗಲೂ ಸಜ್ಜನರ ಸಂಗ ಮಾಡಬೇಕು’ ಎಂಬುದನ್ನು ತಿಳಿಸುತ್ತದೆ.
ಜೀವನದ ಎಲ್ಲಾ ಸುಖ-ದುಃಖಗಳನ್ನು ಹಂಚಿಕೊಳ್ಳಲು ನಮಗೆ ಒಳ್ಳೆಯ ಗೆಳೆಯರು ಬೇಕು.
ನಾವು ಸಂತೋಷವಾಗಿದ್ದಾಗ ಮಾತ್ರ ನಮ್ಮ ಜೊತೆ
ಇದ್ದು, ನಮಗೆ ಕಷ್ಟ ಬಂದಾಗ ಹತ್ತಿರ ಸುಳಿಯದ
ಗೆಳೆಯರು ನಿಜವಾದ ಗೆಳೆಯರಲ್ಲ. ಪ್ರಾಣ
ಕೊಡಲೂ ಸಿದ್ಧರಾದ ಗೆಳೆಯರಾಗಬೇಕು. ನಮ್ಮ
ತಪ್ಪುಗಳನ್ನು ತಿದ್ದಿ ನಡೆಸುವುದರ ಜೊತೆಗೆ, ಯಾವುದೇ ಕಷ್ಟ ಬಂದರೂ ಜೊತೆಯಲ್ಲಿದ್ದು ಧೈರ್ಯ ತುಂಬಬೇಕು. ಆದ್ದರಿಂದ ಗೆಳೆತನ
ಮಾಡುವ ಮೊದಲು ಆ ವ್ಯಕ್ತಿಯ ಗುಣವನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ’ಅಲ್ಪರ ಸಂಗ;
ಅಭಿಮಾನ ಭಂಗ’ ಎಂಬಂತಾಗುತ್ತದೆ. ಎಂಬುದು ಈ ಗಾದೆಯ ಆಶಯವಾಗಿದೆ.