Science, asked by mahalakshmi201084, 4 months ago

importance and sources of water in kannada language​

Answers

Answered by Anonymous
2

Answer:

ನೀರಿನ ಸಂಪನ್ಮೂಲಗಳು ನೀರಿನ ಮೂಲಗಳಾಗಿವೆ, ಅದು ಮಾನವರಿಗೆ ಉಪಯುಕ್ತ ಅಥವಾ ಉಪಯುಕ್ತವಾಗಿದೆ. ಇದು ಮುಖ್ಯವಾದುದು ಏಕೆಂದರೆ ಜೀವನವು ಅಸ್ತಿತ್ವದಲ್ಲಿರಲು ಇದು ಅಗತ್ಯವಾಗಿರುತ್ತದೆ. ನೀರಿನ ಅನೇಕ ಉಪಯೋಗಗಳು ಕೃಷಿ, ಕೈಗಾರಿಕಾ, ಮನೆ, ಮನರಂಜನೆ ಮತ್ತು ಪರಿಸರ ಚಟುವಟಿಕೆಗಳನ್ನು ಒಳಗೊಂಡಿವೆ. ವಾಸ್ತವಿಕವಾಗಿ ಈ ಎಲ್ಲಾ ಮಾನವ ಬಳಕೆಗಳಿಗೆ ಶುದ್ಧ ನೀರು ಬೇಕಾಗುತ್ತದೆ.

ನೀರಿನ ಮೂಲದ ವಿಧಗಳು. ಸ್ಟಡಿ ಸೆಷನ್ 1 ರಲ್ಲಿ ನೀವು ಮೂರು ಪ್ರಮುಖ ನೀರಿನ ಮೂಲಗಳಿಗೆ ಪರಿಚಯಿಸಲ್ಪಟ್ಟಿದ್ದೀರಿ: ಅಂತರ್ಜಲ, ಮೇಲ್ಮೈ ನೀರು ಮತ್ತು ಮಳೆನೀರು. ಸಮುದ್ರದ ನೀರನ್ನು ಪ್ರವೇಶಿಸಬಹುದಾದ ಶುಷ್ಕ ಪ್ರದೇಶಗಳಲ್ಲಿ (ಮಧ್ಯಪ್ರಾಚ್ಯದಲ್ಲಿ), ಕುಡಿಯುವ ನೀರನ್ನು ಉತ್ಪಾದಿಸಲು ಡಸಲೀಕರಣ (ನೀರಿನಿಂದ ಲವಣಗಳನ್ನು ತೆಗೆಯುವುದು) ಬಳಸಲಾಗುತ್ತದೆ.

Answered by NAVE234
0

Answer:

ನೀರು:

ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ವಸ್ತು. ಇದು ಭೂಮಿಯ ಮೇಲ್ಮೈಯ ಶೇ. ೭೦ ಭಾಗಗಳಲ್ಲಿ ಕಂಡುಬರುತ್ತದೆ. ಅದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.೩ ರಷ್ಟು ಮಾತ್ರವೇ ಲಭ್ಯವಿರುತ್ತದೆ. ಪ್ರಪಂಚದಲ್ಲಿ ಒಟ್ಟು ೧೪೦ ಕೋಟಿ ಘನ ಕಿಮೀ ಗಳಷ್ಟು ನೀರು ವಿವಿಧ ರೂಪಗಳಲ್ಲಿ ಇದೆಯೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ, ಧ್ರುವ ಪ್ರದೇಶಗಳಲ್ಲಿ ಘನ ರೂಪದಲ್ಲಿ, ಹಾಗೂ ಮೋಡ, ನೀರಾವಿ ಮೊದಲಾದ ರೂಪಗಳಲ್ಲಿದೆ.

ನೀರಿನ ರಾಸಾಯನಿಕ ಸೂತ್ರ H2O - ಎಂದರೆ ಒಂದು ಅಣು ನೀರಿನಲ್ಲಿ ಎರಡು ಜಲಜನಕ ಅಣುಗಳು ಹಾಗೂ ಒಂದು ಆಮ್ಲಜನಕದ ಅಣು ಇರುತ್ತವೆ. ಹೆಚ್ಚಿನ ಪ್ರಮಾಣದ ನೀರು ಒಟ್ಟಿಗೆ ಇರುವಾಗ ತಿಳಿನೀಲಿ ಬಣ್ಣ ಪಡೆಯುತ್ತದೆ. ಇದಕ್ಕೆ ಕಾರಣ ನೀರು ಕೆಂಪು ಬಣ್ಣದ ಬೆಳಕನ್ನು ಅಲ್ಪ ಪ್ರಮಾಣದಲ್ಲಿ ಹೀರಿಕೊಂಡು ನೀಲಿ ಬೆಳಕನ್ನು ಹೆಚ್ಚಾಗಿ ಚದುರಿಸುವುದೇ ಆಗಿದೆ.

ನೈಸರ್ಗಿಕವಾಗಿ, ನೀರು ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಸಾಗರದಲ್ಲಿ ನೀರು ಮತ್ತು ಮಂಜು ಗಡ್ಡೆಗಳ ರೂಪದಲ್ಲಿ, ಆಕಾಶದಲ್ಲಿ ನೀರಾವಿ ಮತ್ತು ಮೋಡಗಳ ರೂಪದಲ್ಲಿ, ಭೂಮಿಯ ಮೇಲೆ ನದಿಗಳು ಮತ್ತು ಮಂಜು-ಹಿಮಗಳ ರೂಪದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಕರಗುವಿಕೆ, ಆವಿಯಾಗುವಿಕೆ, ಮಳೆ ಮತ್ತು ಹರಿಯುವಿಕೆಗಳ ಕಡೆಯಿಂದ ನೀರು ಒಂದು ರೂಪದಿಂದ ಇನ್ನೊಂದಕ್ಕೆ ರೂಪಾಂತರ ಪಡೆಯುತ್ತಾ ಇರುತ್ತದೆ

x. x. x.

ಜಲ ಮೂಲಗಳು:

ಭೂಮಿಯ ಮೇಲಿರುವ ಒಟ್ಟು ನೀರಿನಲ್ಲಿ 97% ಉಪ್ಪು ನೀರು, ಮಿಕ್ಕ 3% ಮಾತ್ರ ಸಿಹಿ ನೀರಾಗಿದ್ದು ಇದರಲ್ಲಿನ ಮೂರನೆ ಎರಡರಷ್ಟು ಭಾಗ ಧ್ರುವ ಪ್ರದೇಶದಲ್ಲಿ ಹೆಪ್ಪುಗಟ್ಟಿರುವ ನೀರ್ಗಲ್ಲಾಗಿದೆ.[೧] ಮಿಕ್ಕದ್ದು ದ್ರವ ರೂಪದಲ್ಲಿರುವ ಅಂತರ್ಜಲ ವಾಗಿದ್ದು ಇದರಲ್ಲಿನ ಅತ್ಯಲ್ಪ ಪ್ರಮಾಣದ ನೀರು ಭೂಮಿಯ ಮೇಲೆ ಹಾಗೂ ವಾತಾವರಣದಲ್ಲಿ ಕಾಣಬರುತ್ತದೆ.[೨]

ಸಿಹಿ ನೀರಿನ ಮೂಲ ಮರುಪೂರಣ ಗುಣವುಳ್ಳದ್ದಾದರೂ, ಜಗತ್ತಿಗೆ ಪೂರೈಕೆಯಾಗುತ್ತಿರುವ ಶುದ್ಧ ಸಿಹಿ ನೀರಿನ ಪ್ರಮಾಣ ಕ್ರಮೇಣ ಕುಸಿಯುತ್ತಿದೆ. ಜಗತ್ತಿನ ಅನೇಕ ಭಾಗಗಳಲ್ಲಿ ನೀರಿನ ಬೇಡಿಕೆ ಈಗಾಗಲೇ ಪೂರೈಕೆಯನ್ನು ಮೀರಿದ್ದು; ಪ್ರಪಂಚದ ಜನ ಸಂಖ್ಯೆ ಏರಿದಂತೆಲ್ಲಾ ನೀರಿನ ಬೇಡಿಕೆ ಹೆಚ್ಚುತ್ತಿದೆ. ಜಗತ್ತಿನ ಅರ್ಧ ಭಾಗದಷ್ಟು ನೀರ್ಬಸಿಯುವ (=ಜೌಗು ಭೂಮಿ) ಜಮೀನು ಮತ್ತು ಪರಿಸರ ವ್ಯವಸ್ಥೆ 20ನೇ ಶತಮಾನದಲ್ಲಿ ಇಲ್ಲವಾಯಿತು. ಇದಾದ ನಂತರ ಪರಿಸರ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಜಲ ಸಂರಕ್ಷಣೆಯ ಜಾಗೃತಿ ಹೊಮ್ಮಿದ್ದು ತೀರಾ ಇತ್ತೀಚಿನ ಸಂಗತಿ.

ಕಡಲು ಅಥವಾ ಭೂಮಿಯಲ್ಲಿನ ಪರಿಸರ ವ್ಯವಸ್ಥೆಗಿಂತಲೂ ಸಿಹಿ ನೀರಿನ ಜೀವ ವೈವಿಧ್ಯ ಪರಿಸರ ವ್ಯವಸ್ಥೆ ಈಗ ಶೀಘ್ರ ಗತಿಯಲ್ಲಿ ಕ್ಷೀಣಿಸುತ್ತಿದೆ. ಹೊಯೆಕ್ಸತ್ರ, A.Y. 2006. ನೀರು ಆಡಳಿತದ ಬಗ್ಗೆ ಜಾಗತಿಕ ಆಯಾಮ: ಸ್ಥಳೀಯ ಸಮಸ್ಯೆಗಳನ್ನು ನಿಭಾಯಿ ಸುವ ನಿಟ್ಟಿನ ಜಾಗತಿಕ ವ್ಯವಸ್ಥೆಗೆ ಒಂಭತ್ತು ಕಾರಣಗಳು ವ್ಯಾಲ್ಯೂ ಆಫ್ ವಾಟರ್ ರಿಸರ್ಚ್ ರಿಪೋರ್ಟ್ ಸೀರಿಸ್ ನಂ. 20 UNESCO-IHE ಇನ್ಸ್‌ಟಿಟ್ಯೂಟ್ ಫಾರ್ ವಾಟರ್ ಎಜುಕೇಷನ್.</ref> ನೀರನ್ನು ಬಳಕೆ ಮಾಡುವವರಿಗಾಗಿ ನಿಯಮಾವಳಿಯನ್ನು ರೂಪಿಸಿ(ನಿಯಮಾವಳಿ ಇದ್ದಲ್ಲಿ) ಅದನ್ನು ನೀರಿನ ಹಕ್ಕು ಎಂದು ಕರೆದಿದ್ದೇವೆ.

Similar questions