India Languages, asked by shashank7826, 2 months ago

importance of eye donation in Kannada​

Answers

Answered by vermanushka7487
1

Answer:

Donated eyes are used to restore vision in people suffering from corneal blindness. Cornea is the clear tissue covering the front of the eye. If it is impaired, vision is reduced or lost. In such cases, vision can be restored by a simple surgery called keratoplasty wherein the cornea is replaced.

Answered by sumalatha896
2

ವಿಶ್ವದ ಯಾವುದೇ ಧರ್ಮವೂ ನೇತ್ರದಾನವನ್ನು ನಿಷೇಧಿಸಿಲ್ಲ ಎನ್ನುವುದನ್ನು ಕೂಡ ನಾವೆಲ್ಲರೂ ತಿಳಿದುಕೊಳ್ಳಬೇಕು. ನೇತ್ರದಾನಕ್ಕೆ ಜನರು ಮುಂದಾಗುವುದು ಯಾವತ್ತಿಗೂ ಒಳ್ಳೆಯದೇ. ಆದರೆ, ಇದರ ಜತೆಯಲ್ಲೇ ನಾವು ನೇತ್ರದಾನದ ಬಗ್ಗೆ ನಮ್ಮ ಪರಿಚಿತರನ್ನು ಕೂಡ ಒಪ್ಪಿಸುವಂಥ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

-----

* ಡಾ.ಭುಜಂಗ ಶೆಟ್ಟಿ

ಪ್ರತಿ ವರ್ಷ ಆ.25ರಿಂದ ಸೆ.8ರ ತನಕ 'ನೇತ್ರದಾನ ಪಕ್ಷ'ವನ್ನು (ಐ ಡೊನೇಷನ್‌ ಫೋರ್ಟ್‌ನೈಟ್‌) ಇಡೀ ದೇಶದಲ್ಲಿ ಆಚರಿಸಲಾಗುತ್ತದೆ. ಇದು 10-12 ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ದೇಶದಲ್ಲಿ ಏನಿಲ್ಲವೆಂದರೂ 35 ಲಕ್ಷ ಜನರಿಗೆ ಕಾರ್ನಿಯ ಟ್ರಾನ್ಸ್‌ಪ್ಲಾಂಟ್‌ ಆಗಬೇಕಾಗಿದೆ. ಈ ಸಮಸ್ಯೆ ಇರುವವರಿಗೆ ಕಣ್ಣಿಲ್ಲಿರುವ ಕಾರ್ನಿಯ ಹಾನಿಗೊಳಗಾಗಿ, ಅವರು ಕುರುಡುತನವನ್ನು ಅನುಭವಿಸುತ್ತಿರುತ್ತಾರೆ. ಇಂಥವರಿಗೆ, ದೃಷ್ಟಿ ಬರಬೇಕೆಂದರೆ ಯಾರಾದರೊಬ್ಬರು ನೇತ್ರದಾನ ಮಾಡಿದರೆ ಮಾತ್ರ ಅದು ಸಾಧ್ಯವಷ್ಟೆ. ಇಲ್ಲದಿದ್ದರೆ, ಇವರು ಶಾಶ್ವತವಾಗಿ ಕತ್ತಲಿನಲ್ಲೇ ತಮ್ಮ ಬದುಕನ್ನು ಕಳೆಯಬೇಕಾಗುತ್ತದೆ. ದುರದೃಷ್ಟವಶಾತ್‌ ನಮ್ಮ ದೇಶದಲ್ಲಿ ಮೃತವ್ಯಕ್ತಿಗಳ ಪಾರ್ಥಿವ ಶರೀರವನ್ನು ಹಾಗೆಯೇ ಸುಟ್ಟು ಬಿಡುತ್ತಾರೆ ಅಥವಾ ಹೂಳಲಾಗುತ್ತಿದೆ. ನೇತ್ರದಾನದ ಕೊರತೆಗೆ ಇದೂ ಒಂದು ಪ್ರಮುಖ ಕಾರಣವಾಗಿದೆ. ಏಕೆಂದರೆ, ಕಳೆದ ಒಂದು ವರ್ಷದಲ್ಲಿ ಇಡೀ ದೇಶದಲ್ಲಿ ನೇತ್ರದಾನ ಮಾಡಿರುವವರ ಸಂಖ್ಯೆ ಕೇವಲ 25 ಸಾವಿರ ಮಾತ್ರ. ಒಂದು ಸ್ಥೂಲ ಅಂದಾಜಿನ ಪ್ರಕಾರ ಹೇಳುವುದಾದರೆ, ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ ಏನಿಲ್ಲವೆಂದರೂ 80ರಿಂದ 90 ಲಕ್ಷ ಜನ ನಿಧನರಾಗುತ್ತಾರೆ. ಇವರೆಲ್ಲರ ಕಣ್ಣುಗಳೂ ನೇತ್ರದಾನದ ಪರಿಧಿಗೆ ಬಂದರೆ, ನಮ್ಮ ದೇಶದಲ್ಲಿ ಕಾರ್ನಿಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸುಲಭವಾಗಿ ಪರಿಹಾರವನ್ನು ಒದಗಿಸಬಹುದು ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ನಮ್ಮ ದೇಶದಲ್ಲಿ ನೇತ್ರದಾನ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಏಕೆ ನಡೆಯುತ್ತಿದೆ ಎನ್ನುವುದಕ್ಕೆ ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದವೆಂದರೆ, ಮೊದಲನೆಯದಾಗಿ ಈ ಬಗ್ಗೆ ನಮ್ಮ ಜನರಿಗೆ ಹೆಚ್ಚಿನ ಅರಿವೇ ಇಲ್ಲ. ಎರಡನೆಯದಾಗಿ, ನೇತ್ರದಾನದ ಬಗ್ಗೆ ಇರುವ ಮೂಢನಂಬಿಕೆಗಳು. ಇದನ್ನೆಲ್ಲ ಹೋಗಲಾಡಿಸಲೆಂದೇ 'ನೇತ್ರದಾನ ಪಕ್ಷ'ವನ್ನು ಪ್ರತೀವರ್ಷ ಆಚರಿಸಲಾಗುತ್ತಿದೆ ಎನ್ನುವುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ನೇತ್ರದಾನಕ್ಕಿಂತ ಸುಲಭವಾದ ಕೆಲಸ ಇನ್ನೊಂದಿಲ್ಲ ಎಂದರೆ, ಅದರಲ್ಲಿ ಉತ್ಪೇಕ್ಷೆಯೇನೂ ಇಲ್ಲ. ಏಕೆಂದರೆ, ಇದು ವ್ಯಕ್ತಿಯೊಬ್ಬರು ನಿಧನರಾದ ನಂತರ ಅವರ ಕುಟುಂಬಸ್ಥರು ಮಾಡಬಹುದಾದ ಒಂದು ಅತ್ಯಂತ ಪವಿತ್ರವಾದ ಕೆಲಸವಾಗಿದೆ. ಇದಕ್ಕಾಗಿ ಮೃತವ್ಯಕ್ತಿಯು ತಾನು ಜೀವಂತವಾಗಿರುವಾಗಲೇ ನೇತ್ರದಾನವನ್ನು ಮಾಡುತ್ತೇನೆಂದು ಪ್ರತಿಜ್ಞೆಯನ್ನೇನೂ ಮಾಡಬೇಕಾದ ಅವಶ್ಯಕತೆ ಇಲ್ಲ. ಬದಲಿಗೆ, ನಿಧನರಾಗಿರುವ ವ್ಯಕ್ತಿಗಳ ವಾರಸುದಾರರು ಈ ಸಮಾಜಕ್ಕಿರುವ ಅಗತ್ಯವನ್ನು ಮನಗಂಡು, ಸ್ವಯಂಪ್ರೇರಿತರಾಗಿ ಮಾಡಬೇಕಾದ ಕೆಲಸವಿದು. ಆದರೆ, ಯಾವುದೇ ವ್ಯಕ್ತಿ ನಿಧನರಾದ ಆರು ಗಂಟೆಗಳ ಒಳಗೆ ನಡೆಯಬೇಕಾದ ಕೆಲಸವಿದು. ಅದಕ್ಕಿಂತ ಹೆಚ್ಚು ಹೊತ್ತಾದರೆ ಮೃತವ್ಯಕ್ತಿಯ ಕಣ್ಣುಗಳು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಇದಕ್ಕಾಗಿ ಮೃತ ವ್ಯಕ್ತಿಯ ಕುಟುಂಬಸ್ಥರು, ತಮ್ಮ ಮನೆಯಲ್ಲಿ ಸಾವು ಸಂಭವಿಸಿದ ಕೂಡಲೇ ನೇತ್ರದಾನ ಮಾಡುವ ಬಗ್ಗೆ ತೀರ್ಮಾನಿಸಿ, ತಮಗೆ ಹತ್ತಿರದಲ್ಲಿರುವ ನೇತ್ರದಾನ ಕೇಂದ್ರವನ್ನು ಸಂಪರ್ಕಿಸಿ, ಮಾಹಿತಿ ಕೊಟ್ಟರೆ ಸಾಕಾಗುತ್ತದೆ.

ಈ ಹಂತದಲ್ಲಿ ಕುಟುಂಬಸ್ಥರು ಒಂದು ಸಣ್ಣ ಎಚ್ಚರಿಕೆಯನ್ನು ತೆಗೆದುಕೊಂಡರೆ ಒಳ್ಳೆಯದು. ಅದೇನೆಂದರೆ, ಮೃತರ ಕಣ್ಣುಗಳ ರೆಪ್ಪೆಯನ್ನು ಸಂಪೂರ್ಣವಾಗಿ ಮುಚ್ಚಿ, ಅದರ ಮೇಲೊಂದು ಒದ್ದೆ ಬಟ್ಟೆಯನ್ನು ಹಾಕಬೇಕು. ಜತೆಗೆ, ಆ ಸಂದರ್ಭದಲ್ಲಿ ಫ್ಯಾನ್‌ ಗಾಳಿ ಬೀಸದಂತೆ ನೋಡಿಕೊಂಡರೆ ಆಯಿತು. ನಂತರ, ಸಾಮಾನ್ಯವಾಗಿ ನೇತ್ರದಾನ ಬ್ಯಾಂಕ್‌ನಿಂದ ಮುಂದಿನ ಅರ್ಧ ಗಂಟೆಯಲ್ಲಿ ಸೂಕ್ತ ಸಿಬ್ಬಂದಿ ಬಂದು, ಮೃತರ ಕಣ್ಣುಗಳನ್ನು ದಾನವಾಗಿ ಪಡೆಯುತ್ತಾರೆ. ಈ ಪ್ರಕ್ರಿಯೆಗೆ ಕೇವಲ 10-15 ನಿಮಿಷಗಳು ಸಾಕಾಗುತ್ತವೆ. ಈ ಸಂದರ್ಭದಲ್ಲಿ ಕುಟುಂಬಸ್ಥರು ಮರಣ ಪ್ರಮಾಣಪತ್ರವನ್ನು ತೋರಿಸಿ, ಕೆಲವು ದಾಖಲೆಗಳಿಗೆ ಸಹಿ ಹಾಕಬೇಕಾಗುತ್ತದಷ್ಟೆ. ಇದರಲ್ಲಿ ಯಾವುದೇ ಕುಟುಂಬದ ನಂಬಿಕೆಗಳಿಗೆ ಚ್ಯುತಿ ಬರುವ ಪ್ರಮೇಯವೂ ಇಲ್ಲ. ಈ ಸತ್ಯವನ್ನು ನಮ್ಮ ಜನರು ಮನಗಾಣಬೇಕು. ಜತೆಗೆ ಕೆಲವರಿಗೆ, ಮೃತರ ಕಂಗಳನ್ನು ತೆಗೆದುಕೊಂಡಮೇಲೆ ಮುಖವು ವಿಕಾರವಾಗಿ ಕಾಣುತ್ತಾದೆನ್ನುವ ಅನಗತ್ಯ ಭಯವಿದೆ. ಆದರೆ, ಇವೆಲ್ಲವೂ ಕಲ್ಪನೆಗಳಷ್ಟೆ.

ನೇತ್ರದಾನವು ಯಾವಾಗಲೂ ಬೇಷರತ್‌ ಆಗಿ ನಡೆಯುವಂಥ ಕ್ರಿಯೆ. ಇದರಲ್ಲಿ ಲಾಭದ ಆಸೆಯಾಗಲಿ, ಹೆಸರು ಮಾಡಬೇಕೆಂಬ ಬಯಕೆಯಾಗಲಿ ಸಲ್ಲದು. ಏಕೆಂದರೆ, ದಾನವಾಗಿ ಸ್ವೀಕರಿಸಿದ ಕಣ್ಣುಗಳನ್ನು ನಾವೂ ಸಹ ಅಗತ್ಯವಿರುವವರಿಗೆ ದಾನವಾಗಿಯೇ ನೀಡುತ್ತೇವೆ. ಜತೆಗೆ, ಇದರಲ್ಲಿ ಗೌಪ್ಯತೆಯನ್ನು ಕೂಡ ಕಟ್ಟುನಿಟ್ಟಾಗಿ ಕಾಪಾಡಲಾಗುವುದು. ಅಂದರೆ ನಾವು ದಾನ ಕೊಟ್ಟವರ ಮತ್ತು ಅದನ್ನು ಸ್ವೀಕರಿಸಿದವರ ಹೆಸರುಗಳನ್ನು ಯಾವ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ವಿಶ್ವದ ಯಾವುದೇ ಧರ್ಮವೂ ನೇತ್ರದಾನವನ್ನು ನಿಷೇಧಿಸಿಲ್ಲ ಎನ್ನುವುದನ್ನು ಕೂಡ ನಾವೆಲ್ಲರೂ ತಿಳಿದುಕೊಳ್ಳಬೇಕು. ನೇತ್ರದಾನಕ್ಕೆ ಜನರು ಮುಂದಾಗುವುದು ಯಾವತ್ತಿಗೂ ಒಳ್ಳೆಯದೇ. ಆದರೆ, ಇದರ ಜತೆಯಲ್ಲೇ ನಾವು ನೇತ್ರದಾನದ ಬಗ್ಗೆ ನಮ್ಮ ಪರಿಚಿತರನ್ನು ಕೂಡ ಒಪ್ಪಿಸುವಂಥ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದು ನಮ್ಮ ದೇಶದಲ್ಲಿ ತುಂಬಾ ಜರೂರಿನಿಂದ ನಡೆಯಬೇಕಾದ

Similar questions