History, asked by TArang3968, 1 year ago

Importance of history in kannada kannada

Answers

Answered by pooja22927
2

Answer:

I don't understand your question

Answered by yashubr12
2

Answer:

I hope this is the answer you required.

if not leave me a message so I can help you out.

Explanation:

ಪ್ರಸ್ತುತ ಸಂದರ್ಭದಲ್ಲಿ ಇತಿಹಾಸ ತಿಳಿಯುವುದಕ್ಕೆ ಜನರು ಹೆಚ್ಚಿನ ಮಹತ್ವ ನೀಡಬೇಕಿದ್ದು, ಹೀಗಾಗಿ ಇತಿಹಾಸದ ಘಟನೆಗಳನ್ನು ಗುರುತಿಸುವ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ.

ಇತಿಹಾಸವನ್ನು ತಿಳಿದವರು ಮಾತ್ರ ಇತಿಹಾಸ ಬರೆಯಲು ಸಾಧ್ಯವಿದ್ದು, ಆದ್ದರಿಂದ ಪ್ರಸ್ತುತದಲ್ಲಿ ಇತಿಹಾಸ ತಿಳಿಯಲು ಜನರು ಹೆಚ್ಚು ಮಹತ್ವ ನೀಡಬೇಕಿದೆ. ನಮ್ಮ ಸುತ್ತಮುತ್ತಲೂ ದಿನನಿತ್ಯ ಸಾಕಷ್ಟು ಘಟನಾವಳಿಗಳು ನಡೆಯುತ್ತಿದ್ದರೂ, ಈ ಹಿಂದೆ ನಮ್ಮನ್ನಾಳಿದ ಅನೇಕ ಮಹನೀಯರು ಬಿಟ್ಟು ಹೋಗಿರುವ ಇತಿಹಾಸದ ಕುರುಹುಗಳು,

ಆಡಳಿತ ಮಾರ್ಗಗಳು ಹಾಗೂ ನಾಗರೀಕತೆ ಇಂದಿಗೂ ಸಾರ್ವಜನಿಕರ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಅಭಿವೃದ್ಧಿಶೀಲ ಕಾರ್ಯಗಳು ಹಾಗೂ ಇತಿಹಾಸದ ಘಟನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.

ಈ ಸಂಶೋಧನೆಗಳು ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜತೆಗೆ ನಾಗರೀಕತೆಯ ವಿಧಾನಗಳನ್ನು ತಿಳಿಸಬೇಕಿದೆ. ಅಲ್ಲದೆ ಹಿಂದಿನಿಂದ ಕೊಡುಗೆಯಾಗಿ ಬಂದ ನಮ್ಮ ಪರಿಸರವನ್ನು ಅಭಿವೃದ್ಧಿ ಮಾಡುವ ಮೂಲಕ ಪರಿಸರ ಸಂರಕ್ಷಣೆಯಲ್ಲೂ ಕಾಳಜಿವಹಿಸಬೇಕಿದೆ.

ಅರಿವು ಇಲ್ಲದೆ ಇತಿಹಾಸದ ಪರಿಚಯ ಸಾಧ್ಯವಿಲ್ಲ. ಇತಿಹಾಸದ ಸಮಗ್ರ ಪರಿಚಯವಿದ್ದಾಗ ಮಾತ್ರ ಶಿಕ್ಷಕರು ವಿದ್ಯಾರ್ಥಿಗಳಿಗೆ ಪೂರಕವಾಗಿ ಪಾಠ ಮಾಡಲು ಸಾಧ್ಯವಾಗುತ್ತದೆ. ಶಿಕ್ಷ ಕರಲ್ಲಿ ಪೂರಕ ಮಾಹಿತಿಗಳಿದ್ದಾಗ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಇರುತ್ತದೆ.

Similar questions