ದೀಪಾವಳಿ ಹಬ್ಬದ ಕುರಿತು ಸಣ್ಣದಾಗಿ ಪುಬಂಧ ಬರೆಯಿರಿ
in kannada
Answers
Answer:
ಸುಜ್ಞಾನದ ಪ್ರತೀಕ ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಮಹತ್ವ:-
ದೀಪಾವಳಿಯು ಭಾರತದ ವಿಶೇಷ ಹಬ್ಬವಾಗಿದ್ದು, ಸಾಮಾನ್ಯವಾಗಿ ಭಾರತಾದ್ಯಂತ ಈ ಹಬ್ಬವನ್ನು ಬಹಳ ಹರ್ಷೋಲ್ಲಾಸದಿಂದ ಆಚರಿಸುತ್ತಾರೆ. ಈ ದಿನದಂದು ಚಿಕ್ಕವರು ಮತ್ತು ದೊಡ್ಡವರು, ಬಡವರು ಮತ್ತು ಶ್ರೀಮಂತರು, ಗ್ರಾಮೀಣರು ಮತ್ತು ನಗರವಾಸಿಗಳ ಮುಖದಲ್ಲಿ ಖುಷಿ ಕಂಡು ಬರುತ್ತದೆ. ರಾತ್ರಿಯಂತೂ ದೀಪಗಳ ಅಲಂಕಾರವು ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತದೆ.
ಈ ಹಬ್ಬದ ಪ್ರಾರಂಭ ಯಾವಾಗ ಆಯಿತು? ಹೇಗೆ ಆಯಿತು? ಇದರ ಬಗ್ಗೆ ಅನೇಕ ವದಂತಿಗಳು ಅಥವಾ ಪೌರಾಣಿಕ ಕಥೆಗಳು ಪ್ರಚಲಿತವಾಗಿವೆ. ಒಂದು ಕಥೆಯ ಪ್ರಕಾರ - ಪ್ರಾಚೀನ ಕಾಲದಲ್ಲಿ ನರಕಾಸುರನೆಂಬ ರಾಕ್ಷಸನು ಇಡೀ ಸೃಷ್ಟಿಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿಕೊಂಡಿದ್ದನು. ಭಗವಂತನು ನರಕಾಸುರನನ್ನು ಕೊಂದು ಸೃಷ್ಟಿಯನ್ನು ಅವನ ಭಯದಿಂದ ಮುಕ್ತಗೊಳಿಸಿ ದೇವತೆಗಳನ್ನು ನರಕಾಸುರನ ಬಂಧನದಿಂದ ಬಿಡಿಸಿದನು.
ಆದ್ದರಿಂದ ದೀಪಾವಳಿಯ ಒಂದು ದಿನ ಮುಂಚಿನ ರಾತ್ರಿಯನ್ನು 'ನರಕ-ಚತುದರ್ಶಿ' ಎಂದು ಕರೆಯಲಾಗುತ್ತದೆ. ಇದನ್ನು ಚಿಕ್ಕ ದೀಪಾವಳಿ ಎಂದೂ ಸಹ ಕರೆಯುತ್ತಾರೆ. ಇದರ ಮುಂದಿನ ದಿನವನ್ನು ಅಂದರೆ 'ಕಾರ್ತಿಕ ಅಮಾವಾಸ್ಯೆ'ಯನ್ನು ದೊಡ್ಡ ದೀಪಾವಳಿ ಮಹೋತ್ಸವವಾಗಿ ಆಚರಿಸಲಾಗುತ್ತದೆ.
ಬಲಿ ಚಕ್ರವರ್ತಿಯ ಕತೆ
ದೈತ್ಯ ರಾಜನಾದ ಬಲಿಚಕ್ರವರ್ತಿಯು ಇಡೀ ಭೂಮಂಡಲದಲ್ಲಿ ತನ್ನ ರಾಜ್ಯವನ್ನು ಆಳುತ್ತಿದ್ದನು. ಆಗ ಭೂಮಿಯಲ್ಲಿ ರಾಕ್ಷಸೀತನವು ಹರಡುತ್ತಿತ್ತು. ಧರ್ಮನಿಷ್ಠೆಯು ಸಮಾಪ್ತಿಯಾಗುತ್ತಿತ್ತು. ಬಲಿಚಕ್ರವರ್ತಿಯು ಶ್ರೀಲಕ್ಷೀ ಸಮೇತವಾಗಿ ಎಲ್ಲಾ ದೇವಿ-ದೇವತೆಗಳನ್ನು ತನ್ನ ಕಾರಾಗೃಹದಲ್ಲಿ ಬಂಧಿಸಿದ್ದನು. ಆಗ ಭಗವಂತನು ಬಲಿಚಕ್ರವರ್ತಿಯ ಅಸುರಿ ಶಕ್ತಿಯ ಮೇಲೆ ವಿಜಯವನ್ನು ಸಾಧಿಸಿ ಶ್ರೀಲಕ್ಷೀ ಸಮೇತ ಎಲ್ಲಾ ದೇವಿ-ದೇವತೆಗಳನ್ನು ಕಾರಾಗೃಹದಿಂದ ಮುಕ್ತಗೊಳಿಸಿದ್ದನು.
ಈ ಮೇಲಿನ ಎರಡೂ ಕಥೆಗಳ ಅರ್ಥವು ಬೇರೆಯೇ ಇರಬೇಕು. ಏಕೆಂದರೆ ಒಬ್ಬ ವ್ಯಕ್ತಿಯಿಂದ ಶ್ರೀಲಕ್ಷ್ಮೀ ಸಮೇತ ಎಲ್ಲಾ ದೇವಿ-ದೇವತೆಗಳನ್ನು ಅಥವಾ ಇಡೀ ಸೃಷ್ಟಿಯನ್ನು ಬಂಧಿಸುವುದು ಅಸಾಧ್ಯದ ಮಾತು. ಆದ್ದರಿಂದ ಈ ಎರಡೂ ಕಥೆಗಳಲ್ಲಿ ಐತಿಹಾಸಿಕ ವೃತ್ತಾಂತವನ್ನು ಲಾಕ್ಷಣಿಕ ಭಾಷೆಯಲ್ಲಿ ಒಂದು ರೂಪಕವನ್ನಾಗಿ ವರ್ಣಿಸಲಾಗಿದೆ. ಜ್ಞಾನ-ದೃಷ್ಟಿಯಂತೆ ನರಕಾಸುರನು ಮಾಯೆ ಅಥವಾ ಮನೋವಿಕಾರಗಳ ಸಮಾನಾರ್ಥವಾಗಿದೆ. ಕಾಮ, ಕ್ರೋಧ, ಲೋಭ, ಮೋಹ ಮತ್ತು ಅಹಂಕಾರಗಳನ್ನು ಭಗವದ್ಗೀತೆಯಲ್ಲಿ ನರಕದ ಹೆಬ್ಬಾಗಿಲುಗಳೆಂದು ವರ್ಣಿಸಲಾಗಿದೆ. ಇವುಗಳನ್ನು ಅಸುರರ ಲಕ್ಷಣಗಳೆಂದು ಹೇಳಲಾಗಿದೆ.
ಈ ವಿಕಾರಿ ಗುಣಗಳ ಮೇಲೆ ಅಥವಾ ಅಸುರಿ ಲಕ್ಷಣಗಳ ಮೇಲೆ ವಿಜಯ ಪಡೆಯುವುದು ಬಹಳ ಕಷ್ಟಕರವಾಗಿದೆ. ಆದ್ದರಿಂದ ಇವುಗಳ ಹೆಸರೇ ರೂಪಕವಾಗಿ ‘ಬಲಿ' ಎಂದು ಬಳಸಲಾಗಿದೆ. ಭಗವದ್ಗೀತೆಯಲ್ಲಿ ಮಾಯೆಯನ್ನು ‘ಶತ್ರು' ಅಥವಾ ‘ಬಲಿ' ಎಂದು ಕರೆಯಲಾಗಿದೆ. ಕಲಿಯುಗದ ಅಂತ್ಯದ ಸಮಯದಲ್ಲಿ ಪ್ರತಿಯೊಬ್ಬ ನರ-ನಾರಿಯರ ಮನಸ್ಸಿನಲ್ಲಿ ಈ ವಿಕಾರಿ ಗುಣಗಳ ರಾಜ್ಯಭಾರವಿದೆ. ಹಾಗಾಗಿ ಇಡೀ ಸೃಷ್ಟಿಯು ನರಕವಾಗಿ ಬಿಟ್ಟಿದೆ. ನರಕಾಸುರ ಅಥವಾ ಬಲಿಚಕ್ರವರ್ತಿಯ ಅಧಿಪತ್ಯವಿತ್ತೆಂದು ಹೇಳಲಾಗುತ್ತದೆ.