indena solu nalena gelavu
gade in kannada
Answers
Answered by
12
Explanation: ಜೀವನದ ಕಹಿ ಅನುಭವ ನಮ್ಮ, ನಡೆ, ನುಡಿ, ಬಾಳ್ವೆ ಎಲ್ಲವನು ತಿದ್ದಲು ಬಹಳ ಮಹತ್ವದ ಪಾತ್ರವಹಿಸಿದೆ. ಸಿರಿವಂತಿಕೆಯಲ್ಲೇ ಜೀವನ ಸಾಗಿಸಿದೊಡೆ ಬಡತನದ ಅರಿವು ಮೂಡುವುದೆಂತು, ಬಡತನದ ಬೇಗೆಯಲಿ ನೊಂದು ಬೆಂದವ ಸಿರಿವಂತನಾದೊಡೆ ತನ್ನ ಜೀವನದ ಏರುಪೇರಿನ ಮೆಟ್ಟಿಲುಗಳನ್ನು ಇಂಚಿಚಾಗಿ ಅರಿತಿರಬಲ್ಲ, ತನ್ನೆಲ್ಲಾ ಮಜಲುಗಳು ಸಿರಿತನಕ್ಕೆ ನಾಂದಿಯಾಗಿರುವುದೆಂದು ಬಯಸಿ ಸಿರಿತನದಲ್ಲೂ ಬಡತನದ ಸಂಪತ್ತನ್ನು ನೆನೆದು ಜೀವನದಲಿ ತಗ್ಗಿ ಬಗ್ಗಿ ನೆಡೆಯ ಬಲ್ಲ ಅಂತೆಯೇ ಸೋಲುಂಡವ ಎಂದೂ ಗೆಲುವು ಕಾಣಲಾರ, ಸೋಲೇ ತನ್ನ ಕಟ್ಟಿಟ್ಟ ಬುತ್ತಿ ಎಂದು ಮನನೋಯುವುದು ಸೂಕ್ತವಲ್ಲ ಇಂದಿನ ಸೋಲು ನಾಳೆಯ ಗೆಲುವು ಎಂಬುದು ಸೂಕ್ತವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಹಿರಿಯರು ಹೇಳಿದಂತೆ ವೇದ ಸುಳ್ಳಾದರು ಗಾದೆ ಸುಳ್ಳಾಗಲಾರದು ಎಂಬ ಮಾತು ನೂರಕ್ಕೆ ನೂರು ಸತ್ಯ ಅಂತೆಯೇ ಮೇಲೆ ಹೇಳಿದ ಗಾದೆ ಮಾತು "ಇಂದಿನ ಸೋಲು ನಾಳಿನ ಗೆಲುವು" ಇದು ಎಲ್ಲರ ಜೀವನದಲು ರೂಢಿಸಿಕೊಳ್ಳಬೇಕಾದ್ದು ಹಾಗು ಅರಿವನ್ನು ಮೂಡಿಸಬೇಕಾದ್ದು ಯಾವುದೇ ಸ್ಪರ್ಧೆ ಅಥವಾ ಸವಾಲುಗಳಲ್ಲಿ ನಾವು ಗೆಲ್ಲಲೇ ಬೇಕೆಂಬುದು ಮುಖ್ಯವಲ್ಲ ಗೆಲ್ಲುವ ಆತ್ಮಬಲವೊಂದೇ ಮುಖ್ಯ. ಆತ್ಮಬಲ ಎಲ್ಲ ಬಲಗಳಿಗಿಂತ ಶಕ್ತಿಯುತವಾದದ್ದು. ವಿದ್ಯೆ, ಐಶ್ವರ್ಯ, ಅಧಿಕಾರ, ಜಾತಿ, ಜನ, ದೇಹ ಇವೆಲ್ಲ ಆತ್ಮಬಲದ ಮುಂದೆ ನಿಸ್ತೇಜ, ನಿಶ್ಚಕ್ತಗಳು. ಗೆಲುವು ಸಾಧಿಸಲು ಆತ್ಮಬಲವೊಂದೇ ದಾರಿ. ಇಂದು ಸೋತರೂ ಮುಂದೆ ನಾವು ಗೆಲ್ಲುವ ಆತ್ಮವಿಶ್ವಾಸ ಮೂಡಿಸಿಕೊಂಡಿದ್ದರೇ ಗೆಲುವಿನ ಮೆಟ್ಟಿಲು ಕೈಗೆ ಎಟುಕದೆ ಇರುವಂತಹುದೇನಲ್ಲಾ.
ಭಾರತಕ್ಕೆ ಸ್ವಾತಂತ್ರ್ಯ ಬರಲು ಎಷ್ಟೋ ಜನ ತಮ್ಮ ದೇಹವನ್ನು ತೆತ್ತಿದ್ದಾರೆ ಅಂತೆಯೇ ನಮಗೆಲ್ಲಾ ಸ್ವಾತಂತ್ರ್ಯದ ಬಾಗಿಲು ತೋರಿಸಲು ಮಹಾತ್ಮಗಾಂಧಿಯವರು ಹಲವು ಭಾರಿ ಸೋತು ಕೊನೆಗೆ ತಮ್ಮ ಆತ್ಮಬಲ, ಅಹಿಂಸಾವಾದದಿಂದ ಗೆಲುವಿನ ಮೆಟ್ಟಿಲೇರಿದರು ಹಾಗೆಯೇ ನಾವು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಅಂದು ಅಲ್ಲಿ ಸೋತರೆ ಸೋಲಿನಲ್ಲೂ ಒಂದು ಹಿತವೆನಿಸುವ ಹಾಗು ಮುಂದಿನ ಗೆಲುವಿಗೆ ನಾಂದಿಯಾಡುವ ಹಸಿರ ಚಿಹ್ನೆಯ ಅನುಭವ ಮೂಡುತ್ತದೆ.
ಸಾಮಾನ್ಯ ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸಾಗಿದೆ ನನ್ನ ಚಿರಪರಿಚಿತ ಸ್ನೇಹಿತ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ನಗರದಲ್ಲಿ ಅಭಿಯಂತರ(ಇಂಜಿನಿಯರ್)ನಾಗಬೇಕೆಂಬ ಬಯಕೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಆದರೆ ಇಂಜಿನಿಯರ್ ಆಗುವುದು ನನ್ನ ಕೈಗೆ ಎಟುಕದ ಕನಸೆಂದು ಸೋಲುವತ್ತ ಬಂದಿದ್ದ ತನ್ನ ಪರೀಕ್ಷೆಯಲ್ಲಿ ಸೋಲು ಕಂಡಿದ್ದ ಕೂಡ, ಆ ಸೋಲು ಅವನ ಜೀವನದ ಮೊದಲ ಸೋಲು ಅದರಿಂದ ಚೇತರಿಸಿಕೊಳ್ಳಲು ಬಹಳ ಪ್ರಯತ್ನಪಟ್ಟು ಮಾನಸಿಕ ಹಿಂಸೆಯಲ್ಲಿ ಮುಳುಗಿದ್ದ ಇಂತಹ ಪರಿಸ್ಥಿತಿಯಲ್ಲಿ ಸ್ನೇಹಿತರು ಅವನ ಆತ್ಮಬಲವನ್ನು ಎಚ್ಚರಿಸಿದರು ಅಂತೆಯೇ ಅವನು ತನ್ನ ಸೋಲೂಂದು ಗೆಲುವಿನ ಪಾಠವೆಂದು ತಿಳಿದು ಸಾಧಿಸಿ ತೋರಿಸಿಯೇ ಬಿಟ್ಟ ಈಗ ಅವನು ಒಂದು ಅತ್ಯುನ್ನತ ಸ್ಥಾನದಲ್ಲಿದ್ದಾನೆ. ಹಲವಾರು ಜನ ಅವನ ಮಾರ್ಗದರ್ಶನದಿ ಸಾಗುತ್ತಿದ್ದಾರೆ. ಅಂದು ಅವನು ನಾ ಸೋತೆನೆಂದು ಕುಳಿತಿದ್ದರೇ ಇಂದು ಯಾರು ಅವನ ಮಾರ್ಗದರ್ಶನಕೆ ಬರುತ್ತಿರಲಿಲ್ಲ. ಹಿರಿಯರ ಮಾತಿನಂತೆ ಗಾದೆ ಸುಳ್ಳಾಗಲಿಲ್ಲ ಈ ಉದಾಹರಣೆಯಲ್ಲಿ.
ಅಂದು ತಾನು ಕನ್ನಡ ಮಾದ್ಯಮದಲ್ಲಿ ಓದಿದ್ದೇನೆ ನನಗೆ ಆಂಗ್ಲಭಾಷೆ ಭರಿಸುವುದು ಕಷ್ಟಕರವೆಂದು ಕೈಚೆಲ್ಲಿದ್ದರೆ ಆತ ಪ್ರಭುದ್ದಮಾನಕ್ಕೆ ಏರುವಂತಾಗುತ್ತಿರಲಿಲ್ಲ.
ಈ ಗಾದೆಯ ಮಾತಿನ ನೀತಿಯೇನೆಂದರೆ ಸೋಲುಂಡರು ಎದೆಗುಂದದೆ ಮುಂದೆ ಸಾಗಬೇಕು ಗೆಲುವು ಸ್ವೀಕರಿಸಿದ ಹಾಗೆ ಸೋಲನ್ನು ಸ್ವೀಕರಿಸಿ ಅನುಭವ ಪಡೆದುಕೊಳ್ಳಬೇಕು, ಮುಂದೂಂದು ದಿನ ಅತಿ ಹೆಗ್ಗಳಿಕೆಯ ಪ್ರೀತಿಪೂರ್ವಕದ ಗೆಲುವು ನಿಮ್ಮದಾಗಬಹುದೆಂದು. ಸೋತುಗೆದ್ದವನ ಕೀರ್ತಿ ಚಿರಕಾಲ.
(ಕುವೈಟ್ ಕನ್ನಡ ಕೊಟದ ಮರಳುಮಲ್ಲಿಗೆಯ ಸಂಚಿಕೆಯಲ್ಲಿ ಬಿತ್ತರವಾದ ಲೇಖನ)
Similar questions