information about historical places in Karnataka in Kannada
Answers
Answer:
1.ಜೋಗ ಜಲಪಾತ-ಜೋಗ ಅಥವ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಅತಿ ಎತ್ತರದ ಜಲಪಾತ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸೀ ತಾಣ. ಇಲ್ಲಿ ಸುಮಾರು 292 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ದುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ.
2.ಗೋಲ ಗುಮ್ಮಟ -ಗೋಲ ಗುಮ್ಮಟ ಬಿಜಾಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (1627-1657) ಅವರ ಸಮಾಧಿ. ಬಿಜಾಪುರವಲ್ಲದೆ ಬಿದರ್, ಗೊಲ್ಕೊಂಡ, ಗುಲ್ಬರ್ಗಗಳನ್ನೊಳಗೊಳ್ಳುವ ‘ಬಹುಮನೀ' ದಾಯಾದಿಗಳಿಗೆ ಆವಾಜ಼ಿನ ಬಗ್ಗೆ ಒಂದು ಕಿವಿಯಷ್ಟು ಹೆಚ್ಚೇ ಮರ್ಜಿಯಿದ್ದಿರಬೇಕು. ಹೈದರಾಬಾದಿನ ಗೋಲ್ಕೊಂಡ ಕೋಟೆಯ ದ್ವಾರದಲ್ಲಿ ಚಪ್ಪಾಳೆಯಿಟ್ಟರೆ ಸಪ್ಪಳ ಮತ್ತೆ ಮತ್ತೆ ಆಚೀಚಿನ ಗೋಡೆಗಳನ್ನು ತಟ್ಟಿಕೊಂಡು ಗುಡ್ಡದ ಮೇಲಿನವರೆಗೆ ಸಾಗುವುದು ಕೇಳಿಸುತ್ತದೆ, ನೋಡಿ!
3.ಐಹೊಳೆ -ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ 483 ಕಿ. ಮೀ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ. ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ.ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು
4.ಮಧುಕೇಶ್ವರ ದೇವಾಲಯ, ಬನವಾಸಿ -ಬನವಾಸಿ ಪಟ್ಟಣ ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಶಿರಸಿ ತಾಲೂಕಿನಲ್ಲಿದೆ. ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಬನವಾಸಿಯು ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು 30 ಕಿ.ಮಿ.ಅಂತರದಲ್ಲಿದೆ. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದು ಹೇಳಿದ್ದಾನೆ.
5.ಬಂಡೀಪುರ ರಾಷ್ಟ್ರೀಯ ಉದ್ಯಾನವನ -ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ. ಪ್ರಾಜೆಕ್ಟ್ ಟೈಗರ್ ಕ್ರಿಯೆಗೆ ಈ ಅಭಯಾರಣ್ಯ ಸಂಬಂಧವನ್ನು ಹೊಂದಿದೆ. ಹುಲಿ, ಆನೆ, ಚಿರತೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
five is enough, I am tired
Explanation: