information about kannada mathe in kannada
it's urgent n important please
Answers
Answer:
ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವ ಪೂರ್ವದಲ್ಲೇ ಹಂಪಿಯಲ್ಲಿ ತಾಯಿ ಭುವನೇಶ್ವರಿಯ ದೇಗುಲವಿತ್ತು ಎಂಬುದನ್ನು ಪೌರಾಣಿಕ ಹಾಗೂ ಚಾರಿತ್ರಿಕ ದಾಖಲೆಗಳು ಸಾರುತ್ತವೆ. ಕನ್ನಡಾಭಿಮಾನ ಮೂಡಿಸಲು ಹಂಪಿಯ ಭುವನೇಶ್ವರಿ ದೇವಿಯನ್ನು ನಾಡದೇವತೆಯೆಂದೇ ಸ್ವೀಕರಿಸಲಾಗಿದೆ.
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ ಆವರಣದಲ್ಲಿರುವ ತಾಯಿ ಭುವನೇಶ್ವರಿ ದೇವಿ, ಕನ್ನಡಿಗರನ್ನು ವಿಶೇಷವಾಗಿ ಸೆಳೆಯುತ್ತಾಳೆ. ನಾಡಿನ ಜನರಲ್ಲಿ ಅಭಿಮಾನ ಮೂಡಿಸಲು ಶಾಂತಕವಿಗಳು ಹಾಗೂ ಆಲೂರು ವೆಂಕಟರಾಯರು ಮೊದಲ ಬಾರಿ ನಾಡದೇವತೆಯ ಪರಿಕಲ್ಪನೆಗೆ ಜೀವ ತುಂಬಿದರು. ಉಭಯ ಕವಿಗಳ ಜೊತೆಗೆ ಕರ್ನಾಟಕದ ಏಕೀಕರಣಕ್ಕೆ ಇತರ ಕವಿಗಳು ತಾಯಿ ಭುವನೇಶ್ವರಿಯನ್ನು ತಮ್ಮ ರಚನೆಗಳಲ್ಲಿ ಸ್ತುತಿಸಿದರು.
ಏಕೀಕರಣದ ಪೂರ್ವದಲ್ಲೇ ಕನ್ನಡಾಭಿಮಾನ ಎಲ್ಲೆಡೆ ಮೊಳಗಿಸಲು ಶಾಂತಕವಿಗಳು 'ಶ್ರೀ ವಿದ್ಯಾರಣ್ಯ ವಿಜಯ' ಎಂಬ ಕೃತಿ ರಚಿಸಿದರು. ಈ ಕೃತಿ ಹಂಪಿ, ತಾಯಿ ಭುವನೇಶ್ವರಿ ಹಾಗೂ ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹಾಗೇ ಚಳವಳಿಗಾರ ದೊಡ್ಡಮೇಟಿ ಅಂದಾನಪ್ಪನವರು ಭುವನೇಶ್ವರಿ ಸ್ತುತಿ ರಚಿಸಿದರು.
ಭುವನೇಶ್ವರಿ ತಾಯಿಯ ಪರಿಕಲ್ಪನೆ
ಆಲೂರ ವೆಂಕಟರಾಯರ 'ಕರ್ನಾಟಕ ಗತವೈಭವ' ಕೃತಿಯಿಂದ ಹಂಪಿಗೆ ಎಲ್ಲಿಲ್ಲದ ಮಹತ್ವ ಬಂತು. ಕರ್ನಾಟಕವನ್ನು ಒಂದುಗೂಡಿಸಲು ಭುವನೇಶ್ವರಿ ತಾಯಿಯ ಪರಿಕಲ್ಪನೆಯನ್ನು ಅವರು ಇನ್ನಷ್ಟು ಪೋಷಿಸಿದರು. ಹಂಪಿಯಲ್ಲಿ ಹಿಂದಿನಿಂದಲೂ ಪೂಜಿಸಲ್ಪಡುತ್ತಿದ್ದ ಭುವನೇಶ್ವರಿ ದೇವಿ ನಾಡದೇವತೆಯಾಗಿ ನೆಲೆಪಡೆದುಕೊಂಡಳು.
ಭುವನೇಶ್ವರಿ ದೇವಿಯನ್ನು ಜಪಿಸಿ ಮಾಧವರು (ವಿದ್ಯಾರಣ್ಯರ ಮೂಲ ಹೆಸರು) ತಪಸ್ಸು ಮಾಡಿದರು ಎಂಬ ಪ್ರತೀತಿಯಿದೆ. ಮಾಧವರು ಸನ್ಯಾಸ ಸ್ವೀಕರಿಸಿ, ಹಂಪಿಗೆ ಮರಳಿ ಹಕ್ಕ-ಬುಕ್ಕರೊಡಗೂಡಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು ಎಂದು ಹೇಳುತ್ತಾರೆ ಹಂಪಿಯ ವಿದ್ಯಾರಣ್ಯ ಮಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ.
ವಿಜಯನಗರ ಸಾಮ್ರಾಜ್ಯಕ್ಕಿಂತ ಪೂರ್ವದಲ್ಲೇ ಹಂಪಿಯಲ್ಲಿ ಭುವನೇಶ್ವರಿ ದೇವಿಯನ್ನು ಪೂಜಿಸಲಾಗುತ್ತಿತ್ತು. ದಶಮಹಾವಿದ್ಯೆಯಲ್ಲಿ ಭುವನೇಶ್ವರಿ ದೇವಿ ಬರುತ್ತಾಳೆ. ಹೀಗಾಗಿ ಪೌರಾಣಿಕ ಹಾಗೂ ಅಧ್ಯಾತ್ಮಿಕ ಹಿನ್ನೆಲೆಯನ್ನೂ ಭುವನೇಶ್ವರಿ ದೇವಿ ಹೊಂದಿದ್ದಾಳೆ. ರಾಜ್ಯೋತ್ಸವ ಸಂದರ್ಭದಲ್ಲಿ ಹಂಪಿಯಿಂದ ಜ್ಯೋತಿ ತೆಗೆದುಕೊಂಡು ಹೋಗುವ ಪರಂಪರೆಯನ್ನು ಈಗಲೂ ಪಾಲಿಸಲಾಗುತ್ತಿದೆ.
ತಾಯಿ ಭುವನೇಶ್ವರಿ ನಾಡದೇವತೆ. ಹಂಪಿ, ಉತ್ತರ ಕನ್ನಡ ಅಥವಾ ಇನ್ಯಾವುದೇ ಸ್ಥಳ ತಾಯಿಯ ಮೂಲನೆಲೆ ಎಂಬುದಕ್ಕಿಂತ ಭುವನೇಶ್ವರಿದೇವಿ ನಾಡದೇವತೆಯಾಗಿ, ಏಕೀಕರಣದ ಸಂದರ್ಭದಲ್ಲಿ ಕನ್ನಡಿಗರಲ್ಲಿ ಅಭಿಮಾನ ಮೂಡಿಸಿದ್ದಾಳೆ. ಬಂಗಾಳಿಗರು ಹಾಗೂ ಮರಾಠಿಗರ ಪ್ರಭಾವದಿಂದ ಕರ್ನಾಟದಲ್ಲೂ ನಾಡದೇವತೆಯ ಪರಿಕಲ್ಪನೆ ಹುಟ್ಟಿಕೊಂಡಿದೆ.
-ಡಾ.ಸಿ.ಆರ್.ಗೋವಿಂದರಾಜು, ಪ್ರಾಧ್ಯಾಪಕರು, ಚರಿತ್ರೆ ವಿಭಾಗ, ಕನ್ನಡ ವಿವಿ, ಹಂಪಿ
ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲೇ ಹಂಪಿಯಲ್ಲಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಾಣ ಮಾಡಲಾಗಿತ್ತು. ಈ ದೇವಿಗೆ ಈಗಲೂ ನಿತ್ಯ ಪೂಜೆ ನಡೆಯುತ್ತದೆ. ಇದೊಂದು ಐತಿಹಾಸಿಕ ದೇಗುಲವಾಗಿದೆ.
-ಡಾ.ಸಿ.ಎಸ್.ವಾಸುದೇವನ್, ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ, ಕನ್ನಡ ವಿವಿ, ಹಂಪಿ
ಭುವನದ ದೇವತೆ
- ಡಾ.ಚಿದಾನಂದಮೂರ್ತಿ
ಕನ್ನಡದ ತಾಯಿ ಭುವನೇಶ್ವರಿ ಎಂಬುದು ಒಂದು ಜನಪ್ರಿಯ ಪರಿಕಲ್ಪನೆ. ಇದು ನಾವೇ ಕನ್ನಡಿಗರು ಸೇರಿ ರೂಪಿಸಿಕೊಂಡದ್ದು. ಈ ಪರಿಕಲ್ಪನೆಯ ಮೂಲವನ್ನು ವಿಜಯನಗರ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಕಾಣಬಹುದು. ಅದಕ್ಕೂ ಮುನ್ನವೇ ಅಲ್ಲಲ್ಲಿ ಭುವನೇಶ್ವರಿ ಎಂಬ ದೇವಿಯ, ಶಕ್ತಿದೇವತೆಯ ಆರಾಧನೆ ನಡೆಯುತ್ತಿತ್ತು ಎಂಬುದು ತಿಳಿದುಬರುತ್ತದೆ. ಆದರೆ ಭುವನೇಶ್ವರಿ ನಾಡದೇವಿ ಎಂಬ ಪರಿಕಲ್ಪನೆ ಬರಬೇಕಾದರೆ ಮಹತ್ವದ ರಾಜಕೀಯ ಬದಲಾವಣೆ ಸಂಭವಿಸಬೇಕಾಯಿತು. 13ನೇ ಶತಮಾನದಲ್ಲಿ ಗುರು ವಿದ್ಯಾರಣ್ಯರು, ನಾಡನ್ನು ಅನ್ಯರ ಆಕ್ರಮಣದ ವಿರುದ್ಧ ಒಂದುಗೂಡಿಸುವ ಸಂಕಲ್ಪ ಮಾಡಿದರು. ಶಿಷ್ಯರಾದ ಹಕ್ಕ- ಬುಕ್ಕರಿಗೆ ಅದಕ್ಕಾಗಿ ದೀಕ್ಷೆ ನೀಡಿದರು.
ಆದರೆ ನಾಡಿನ ಜನರನ್ನು ಒಂದೇ ಮನಸ್ಸಂಕಲ್ಪದ ಅಡಿ ಸಜ್ಜಾಗಿಸಬೇಕಲ್ಲ? ಅದಕ್ಕಾಗಿ ಭುವನೇಶ್ವರಿ ದೇವಿಯನ್ನು ನಾಡಿನ ಒಳಿತಿಗಾಗಿ ಒಗ್ಗೂಡಿ ಪ್ರಾರ್ಥಿಸುವ ರೂಢಿ ಆರಂಭಿಸಲಾಯಿತು. ಇದನ್ನು ಮುಂದೆ ವಿಜಯನಗರದ ಅರಸರೂ ಮುಂದುವರಿಸಿದರು. ಯಾವುದೇ ಒಳ್ಳೆಯ ಕೆಲಸಕ್ಕೆ, ಯುದ್ಧಕ್ಕೆ ತೆರಳುವ ಮುನ್ನ, ನಾಡಹಬ್ಬಕ್ಕೆ ಮುನ್ನ ಭುವನೇಶ್ವರಿ ದೇವಿಯ ಪೂಜೆ ಮಾಡಿ ತೆರಳತೊಡಗಿದರು. ಇದು ಪರಂಪರೆಯಾಗಿ ಬೆಳೆಯಿತು. ಕಾಲಕ್ರಮೇಣ ಕನ್ನಡ ನಾಡು- ನುಡಿ ಹಾಗೂ ತಾಯಿ ಭುವನೇಶ್ವರಿ ಅವಿನಾಭಾವ ಎನಿಸಿದವು. ಭುವನಕ್ಕೆ ಈಶ್ವರಿಯಾದವಳು ಯಾರೋ ಅವಳು ಭುವನೇಶ್ವರಿ. ಅಂದರೆ ಈಕೆ ಬರೀ ನಮ್ಮ ನಾಡಿಗಲ್ಲ, ಇಡೀ ಭೂಮಮಡಲಕ್ಕೆ ತಾಯಿ ಎಂಬ ಭಕ್ತಿ.
ಮುಂದೆ ವಸಾಹತುಶಾಹಿಯ ಕಾಲದಲ್ಲಿ, ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ಅವರ ನಾಡು ನುಡಿಗಳ ಬಗ್ಗೆ ತೀವ್ರವಾದ ಅಭಿಮಾನ ಸ್ವಾಭಿಮಾನಗಳು ಹೊಮ್ಮಿದಾಗ, ಅವುಗಳನ್ನು ಮೂರ್ತೀಕರಿಸುವುದಕ್ಕೆ ತಮ್ಮ ನಾಡನ್ನು ತಾಯಿಯ ಸ್ವರೂಪದಲ್ಲಿ ಚಿತ್ರಿಸಿಕೊಳ್ಳತೊಡಗಿದರು. 'ವಂದೇ ಮಾತರಂ' ಮುಂತಾದ ಹಾಡುಗಳಲ್ಲಿ ಇದನ್ನು ನೋಡಬಹುದು. ಈ ರೂಢಿ ಮುಂದೆ ನಮ್ಮಲ್ಲಿಗೂ ಬಂತು. ನಮ್ಮ ಕವಿ- ಸಾಹಿತಿಗಳೂ ಇದಕ್ಕೆ ತಮ್ಮ ಕೊಡುಗೆ ನೀಡಿದರು. ಆಲೂರು ವೆಂಕಟರಾಯರು, ಬಿಎಂಶ್ರೀ, ಕುವೆಂಪು ಮೊದಲಾದವರು ತಮ್ಮ ಗದ್ಯ, ಕವನಗಳನ್ನು ಕನ್ನಡ ತಾಯಿ ಭುವನೇಶ್ವರಿಯನ್ನು ಸ್ತುತಿಸಿರುವುದನ್ನು ಕಾಣುತ್ತೇವೆ. ಮುಂದೆ ಕನ್ನಡ ಹೋರಾಟಗಾರರು ತಾಯಿ ಭುವನೇಶ್ವರಿಯನ್ನು ಸ್ಥಾಪಿತ ರೂಪಕವಾಗಿ ಸ್ವೀಕರಿಸಿದರು.