Jatraa bagge prabanda in kannada
Answers
Explanation:
ನೇತ್ರಾವತಿ ಕೃಷ್ಣಮೂರ್ತಿ
ಪರಿಷೆಗೆ ತೆರಳುವಾಗ ಒಂದಿಷ್ಟು ಎಚ್ಚರಿಕೆ ವಹಿಸದಿದ್ದರೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂಬುದಕ್ಕೆ ಎಕ್ಸ್‌ಪರ್ಟ್ಸ್ ಇಲ್ಲಿ ಒಂದಷ್ಟು ಟಿಫ್ಸ್ ನೀಡಿದ್ದಾರೆ.
* ಹೆಚ್ಚು ಜನರು ಸೇರುವ ಇಂಥ ಜಾತ್ರೆಗಳಲ್ಲಿ ಕಳ್ಳರು ಹೆಚ್ಚಾಗಿರುತ್ತಾರೆ. ಇಲ್ಲಿಗೆ ಹೋದಾಗ ಆದಷ್ಟು ಜಾಗೃತರಾಗಿರುವುದು ಒಳ್ಳೆಯದು. ಬೆಲೆ ಬಾಳುವ ಆಭರಣಗಳನ್ನು ಧರಿಸಿಕೊಂಡು ಹೋಗುವುದು ಬೇಡ. ಅಗತ್ಯಕ್ಕಿಂತ ಹೆಚ್ಚು ದುಡ್ಡನ್ನು ತೆಗೆದುಕೊಂಡು ಹೋಗದಿರುವುದು ಉತ್ತಮ. ಆಗಾಗ್ಗ ಪರ್ಸ್ ಹಾಗೂ ವ್ಯಾನಿಟಿ ಬ್ಯಾಗ್‌ನ್ನು ಪರೀಕ್ಷಿಸಿಕೊಳ್ಳಿ.
* ಪುಟ್ಟ ಮಕ್ಕಳನ್ನು ಕರೆದು ಕೊಂಡು ಹೋಗುವ ಮುನ್ನ ಕೆಲ ಮುನ್ನೆಚ್ಚರಿಕೆ ಕ್ರಮ ಅನುಸರಿಬೇಕು. ಮಕ್ಕಳನ್ನು ಒಂಟಿಯಾಗಿ ಬಿಡದೆ ಸದಾ ಜೊತೆಯಲ್ಲೇ ಇರುವಂತೆ ನೋಡಿಕೊಳ್ಳಿ. ಹೆಚ್ಚು ಜನಜಂಗುಳಿ ಇರುವ ಕಡೆ ಕರೆದುಕೊಂಡು ಹೋಗಬೇಡಿ. ಮನೆಯಿಂದಲೇ ಕುಡಿಯುವ ನೀರು ಇನ್ನಿತರ ಅಗತ್ಯ ವಸ್ತುಗಳನ್ನು ಕೊಂಡುಹೋಗಿ.
* ರಸ್ತೆ ಬದಿಯ ಗಾಡಿಗಳಲ್ಲಿ , ಕಲುಷಿತ ನೀರು, ಕಸದ ರಾಶಿ ಇರುವ ಕಡೆ ಮಾರಾಟಮಾಡುವ ತಿಂಡಿಗಳನ್ನು ಸೇವಿಸಬೇಡಿ. ಇಂಥ ಆಹಾರ ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಏಕೆಂದರೆ ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆ, ನೊಣಗಳು ಹೆಚ್ಚಾಗಿರುತ್ತವೆ. ಆದಷ್ಟು ಸ್ವಚ್ಛತೆ ಇರುವ ಕಡೆ ಆಹಾರ ಸೇವಿಸಿ.
* ಕಂಡ ಕಂಡದ್ದನ್ನೆಲ್ಲಾ ಕೊಂಡು ಅನಗತ್ಯ ದುಂದು ವೆಚ್ಚ ಮಾಡುವುದಕ್ಕಿಂತ ಯಾವುದು ಅಗತ್ಯವಾಗಿ ಬೇಕು ಯಾವುದು ಬೇಡ ಎಂಬುದನ್ನು ಮೊದಲೇ ಪಟ್ಟಿಮಾಡಿಕೊಂಡರೆ ಉತ್ತಮ.
* ಜಾತ್ರೆಯಲ್ಲಿ ಜನಜಂಗುಳಿ ಹೆಚ್ಚಿರುವುದರಿಂದ ಏನೇ ವ್ಯಾಪಾರ ಮಾಡಿದರೂ ತುಸು ಎಚ್ಚರ ವಹಿಸಿ. ಏಕೆಂದರೆ ಕೆಲವೆಡೆ ತೂಕ ಮತ್ತು ಅಳತೆ ಹಾಗೂ ಗುಣಮಟ್ಟದಲ್ಲಿ ಮೋಸ ಮಾಡಲಾಗುತ್ತದೆ. ಎಚ್ಚರಿಕೆಯಿಂದ ಗಮನಿಸಿ ವ್ಯಾಪಾರ ಮಾಡಿದರೆ ಉತ್ತಮ