Jhansi rani lakshmi bai in kannada language
Answers
ರಾಣಿ ಲಕ್ಷ್ಮೀಬಾಯಿಯವರು ೧೯ ನವೆಂಬರ್ ೧೮೨೯ರಲ್ಲಿ ಕಾಶಿ (ವಾರಣಾಸಿ)ಯಲ್ಲಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಣಿಕರ್ಣಿಕ ಅವರ ನಿಜವಾದ ಹೆಸರಾಗಿದ್ದು ಅವರನ್ನು ಮನು ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅವರ ತಾಯಿ ಲಕ್ಷ್ಮೀಬಾಯಿ ೪ ವರ್ಷದವರಾಗಿರುವಾಗ ಮರಣಹೊಂದಿದರು. ಅವರ ಶಿಕ್ಷಣ ಮನೆಯಲ್ಲಿ ನಡೆಯಿತು. ತಂದೆ ಮೊರೋಪಂತ್ ತಂಬೆಯವರು ಪೆಶ್ವೆಯವರ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರು ಹಾಗು ಮುಂದೆ ಲಕ್ಷ್ಮೀಬಾಯಿಯವರಿಗೆ ೧೩ ವರ್ಷದವರಾಗಿರುವಾಗ ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರ ಆಸ್ಥಾನದಲ್ಲಿ ಸೇರಿದರು. ಮುಂದೆ ಲಕ್ಷ್ಮೀಬಾಯಿಯವರಿಗೆ ೧೪ ವರ್ಷವಾದಾಗ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರನ್ನು ಮದುವೆಯಾದರು[೧] ಹಾಗು ಅವರ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿಸಲಾಯಿತು. ಲಕ್ಷ್ಮೀಬಾಯಿ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆ ಯನ್ನು ತನ್ನ ಸ್ವಂತಿಕೆಯಿಂದ ಕಲಿತರು ಹಾಗು ಆಸ್ಥಾನದ ತನ್ನ ಸ್ತ್ರೀಮಿತ್ರರನ್ನು ಸೇರಿಸಿ ಚಿಕ್ಕ ಸೈನ್ಯವನ್ನು ಕಟ್ಟಿದರು ಲಕ್ಷ್ಮೀಬಾಯಿ.
೧೮೫೧ರಲ್ಲಿ ಲಕ್ಷ್ಮೀಬಾಯಿಯವರು ಗಂಡುಮಗುವಿಗೆ ಜನ್ಮವಿತ್ತರು. ಆದರೆ ಆ ಮಗು ೪ ತಿಂಗಳಿರುವಾಗ ಮರಣವಪ್ಪಿತು[೨]. ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ಅವರನ್ನು ದತ್ತು ಪಡೆದರು. ಆದರೆ ತನ್ನ ಮಗನ ಸಾವಿನ ದುಃಖದಿಂದ ಹೊರಬರಲಾರದ ಮಹಾರಾಜ ರಾಜ ಬಾಲಗಂಗಾಧರ ರಾವ್ ೨೧, ನವೆಂಬರ್ ೧೮೫೩ ರಲ್ಲಿ ಹೃದಯಾಘಾತದಿಂದ ಸಾವಿಗೀಡಾದರು.
ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿಅಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಲಾರ್ಡ್ ಡಾಲ್‌ಹೌಸಿಯು ದಾಮೋದರ ರಾವ್ ಅವರಿಗೆ ರಾಜಾಭಿಶೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್‌ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಜವಾಬ್ಡಾರಿಯೆಂದು ರಾಣಿ ಲಕ್ಷ್ಮೀಬಾಯಿಯವರಿಗೆ ರುಪಾಯಿ ೬೦,೦೦೦ ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೊಟೆಯನ್ನು ಬಿಟ್ಟು ಹೊಗಲು ಆಜ್ಞೆ ಮಾಡಿದನು.
Few Indians may know that the British, who fought the plucky Rani Lakshmi Bai of Jhansi during the Great Indian Mutiny of 1857-58, also admired her greatly. ... Not pretty and pock marked with small pox, but beautiful eyes and figure," noted Lord Canning, India's first Viceroy, in his private papers.