Sociology, asked by imkgowda, 1 day ago

Kannada essay on Nepal

Answers

Answered by kk0023928
0

Explanation:

ಇತಿಹಾಸ ಸಂಪಾದಿಸಿ

ಕ್ರಿ.ಪೂ.೬ ಮತ್ತು ೫ನಯೆ ಶತಮಾನದಲ್ಲಿ ಈ ಪ್ರದೇಶವು ಶಾಕ್ಯ ಆಡಳಿತಕ್ಕೊಳಪಟ್ಟಿತ್ಥು. ಶಾಕ್ಯ ರಾಜಕುಮಾರರಲ್ಲೊಬ್ಬನಾದ ಸಿದ್ಧಾರ್ಥ ಗೌತಮನು ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಬುದ್ಧನೆನಿಸಿಕೊಂಡನು. ಸುಮಾರು ಕ್ರಿ.ಪೂ. ೨೫೦ರ ಸಮಯಕ್ಕೆ ಈ ಪ್ರದೇಶವು ಉತ್ತರಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು. ತರುವಾಯ ಗುಪ್ತ ಸಾಮ್ರಾಟರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು. ೧೭೬೫ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ , ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು ಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಸತ್ತೆಗಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ೧೯೯೧ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆಗಳು ನಡೆದವು

Similar questions