Geography, asked by rohankedia1769, 1 year ago

Kannada essays on Bharat bhavaykyate

Answers

Answered by divyagupta2
9
ನವದೆಹಲಿ, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡ ಸ್ವಚ್ಛ ಭಾರತ, ಸ್ವಸ್ಥ ಭಾರತ ಕನಸನ್ನು ನನಸಾಗಿಸೋಣ. ಸ್ವಚ್ಛ ಭಾರತ ಅಭಿಯಾನ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ದೇಶದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಅಭಿಯಾನಕ್ಕೆ ಮುನ್ನಡಿ ಹಾಡಿದ್ದಾರೆ.
2019ರಲ್ಲಿ ಗಾಂಧೀಜಿ ಅವರ 150ನೇ ಜಯಂತಿ ಆಚರಣೆಯನ್ನು ಭಾರತದ ಕಸಮುಕ್ತಗೊಳಿಸುವುದರ ಮೂಲಕ ಆಚರಿಸೋಣ ಎಂದು ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ನೀಡಿದ ಭಾಷಣದಲ್ಲಿ ಮೋದಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಯೋಜನಾ ವೆಚ್ಚ ಎಷ್ಟು?]

ಯಾರು ಪಾಲ್ಗೊಳ್ಳಬಹುದು: ಅ.2ರಂದು ಸರಿಸುಮಾರು 30.98 ಲಕ್ಷ ನೌಕರರು ಸ್ವಚ್ಛತೆಯ ಶಪಥ ಕೈಗೊಂಡಿದ್ದಾರೆ. ಈ ಅಭಿಯಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ಜತೆಗೆ ಎನ್‌ಜಿಒಗಳು, ಶೈಕ್ಷಣಿಕ ಹಾಗೂ ಆರೋಗ್ಯ ಸಂಸ್ಥೆಗಳು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳು, ಸ್ವಯಂ ಸೇವಾ ಸಂಸ್ಥೆಗಳು, ಯುವ ಸಂಘ-ಸಂಸ್ಥೆಗಳು, ಮಾರುಕಟ್ಟೆ ಒಕ್ಕೂಟಗಳು, ಕೈಗಾರಿಕೆ ಹಾಗೂ ವಾಣಿಜ್ಯ ಸಂಘ ಸಂಸ್ಥೆಗಳು ಪಾಲ್ಗೊಳ್ಳುವುದು ಅಗತ್ಯವಾಗಿದೆ. [ಗಾಂಧಿ ಹೇಳಿ ಕೊಟ್ಟ ಮಂತ್ರ ಬೋಧಿಸಿದ ಮೋದಿ]

ಗುರುವಾರ ಮುಂಜಾನೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿ ಸ್ಥಳ ರಾಜ್ ಘಾಟ್ ಗೆ ಭೇಟಿ ನೀಡಿ ಪುಷ್ಪಗಳನ್ನು ಅರ್ಪಿಸಿ ನಮನ ಸಲ್ಲಿಸಿದರು. ನಂತರ ದೆಹಲಿಯ ವಾಲ್ಮೀಕಿ ಬಸ್ತಿಗೆ ತೆರಳಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಇಂದು ದೇಶವ್ಯಾಪ್ತಿ ಸ್ಛಚ್ಛತಾ ಅಭಿಯಾನ ಜಾರಿಯಲ್ಲಿದೆ.

.
ವಾರಕ್ಕೆ ಎರಡು ಗಂಟೆ ಕಾಲ ಸಮಯ ಮೀಸಲಿಡಿ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಕಡ್ಡಾಯವಾಗಿ ಬುಟ್ಟಿಗೆ ಹಾಕಿ ಎಂದು ಮೋದಿ ಕರೆ ನೀಡಿದ್ದಾರೆ.

Similar questions