Kannada gadegalu with example of a story
Answers
Answer:
ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ
Explanation:
ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.
ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲ ಪಾಕ ವೈವಿಧ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯು ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ. ಅದೇ ರೀತಿ ತಾಯಿ ಇರದಿದ್ದರೆ ಜೀವನವೇ ಅಂಧಕಾರವಾಗಿರುವುದು. ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿಧಮತೆ, ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ, ಮೆಂತ್ಯ, ಕೊತ್ತಂಬರಿ, ಮೆಣಸಿನ ಕಾಯಿ ಇತ್ಯಾದಿ ವಸ್ತುಗಳು ಬೇರೆ ಬೇರೆ ರುಚಿಯನ್ನು ಕೊಡುವದಿಲ್ಲ. ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ, ತಂಗಿ, ಮಾವ, ಅತ್ತೆ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯಷ್ಟು ಮಿಗಿಲಾದ ಬಂಧುಗಳಿಲ್ಲ. ಆದ್ದರಿಂದಲೇ ಜಾನಪದ ತ್ರಿಪದಿಯಲ್ಲಿ ಗರತಿ "ಯಾರು ಆದರೂ ಹೆತ್ತ ತಾಯಂತೆ ಅದಾರೋ ಸಾವಿರ ಸೌದೆ ಒಲೆಯಲ್ಲಿ ಉರಿದರೋ ದೀವಿಗೆಯಂತೆ ಬೆಳಕುಂಟೆ"ಎಂದು ತಾಯಿ ಹೊಗಳಿದ್ದಾರೆ.
ಹೆತ್ತತಾಯಿ ದೇವರು ನಮಗೆ ನೀಡಿರುವ ಅಮೂಲ್ಯ ಆಸ್ತಿ. ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಕಷ್ಟ ಬಂದರು ಇತರ ಬಂಧುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡಳು. ಆದ್ದರಿಂದ "ತಾಯಿಗಿಂತ ಬಂಧುವಿಲ್ಲ" ಎಂಬ ಮಾತು ಅಕ್ಷರಶಃ ಅರ್ಥವತ್ತಾದುದಾಗಿದೆ.