KANNADA HOMEWORK : I. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:- ೧. ವ್ಯಂಜನಾಕ್ಷರಗಳಲ್ಲಿ ಎಷ್ಟು ವಿಧ? ಅವು ಯಾವುವು? ೨. ವ್ಯಂಜನಾಕ್ಷರಗಳನ್ನು ಬರೆಯಿರಿ.
Answers
Answer:
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪುರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ.
ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ.
ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ.
ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ.
ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.
ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ.
Answer:
- ವ್ಯಂಜನಗಳಲ್ಲಿ ಎರಡು ವಿಧ.
ವರ್ಗೀಯ ವ್ಯಂಜನ
ಅವರ್ಗೀಯ ವ್ಯಂಜನ
'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ.
'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು.
2.ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.[೧]
ಕನ್ನಡ ಅಕ್ಷರಮಾಲೆ
ಸ್ವರಗಳು
ಅ ಆ ಇ ಈ ಉ ಊ
ಋ ೠ ಌ ೡ ಎ ಏ ಐ
ಒ ಓ ಔ
ಯೋಗವಾಹಗಳು
ಅಂ ಅಃ
ವ್ಯಂಜನಗಳು
ಕ ಖ ಗ ಘ ಙ
ಚ ಛ ಜ ಝ ಞ ಜ಼
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ ಫ಼
ಅವರ್ಗೀಯ ವ್ಯಂಜನಗಳು
ಯ ರ ಱ ಲ ಳ ೞ ವ
ಶ ಷ ಸ ಹ