Music, asked by ayshathmurshida9, 2 months ago

kannada poem on agriculture​

Answers

Answered by Anonymous
3

ಇವನೇ ನೋಡು

ಇವನೆ ನೋಡು ನಮ್ಮ ರೈತ

ಹೊಲದಿ ದಿನವಿಡಿ ದುಡಿಯುವನು

ಜನರ ಬದುಕು ಹಸನಾಗಿಸಲೆ೦ದು

ಧವಸಧಾನ್ಯ ಬೆಳೆದಿರುತಿದ್ದನು

ಮಳೆಯು ಇಲ್ಲ ನೀರು ಇಲ್ಲ

ಬರಡಾದ ಹೊಲ ನೋಡಿ ದುಃಖಿಸುವನು

ಬಿಸಿಲ ಧಗೆಗೆ ಬದುಕ ಬೇಗೆಗೆ

ಬೆದರಿ ಕ೦ಗಾಲಾಗಿರುವನು

ಎತ್ತು ಎರಡಿಡಲು ದುಡ್ಡು ಸಾಲದು

ಸಾಲ ಮನ್ನಾ ಮೊದಲೆ ಆಗದು

ಹೇಗೆ ಜೀವನ ಕಳೆಯುವುದೆ೦ದು

ದಿಕ್ಕು ತೋಚದೆ ಗೋಳುಪಡುತಾ ಇರುವನು

ರಾಜಕಾರಣಿಗಳ ಸುಳ್ಳು ಆಶ್ವಾಸನೆ

ವಿಶ್ವಾಸಘಾತಕ ಈ ನಯವ೦ಚನೆ

ನೋಡಿ ದಾರಿ ಕಾಣದೆ ವ್ಯಥೆಯ ಪಡುತಾ

ಮಣ್ಣಾಗುವೆನೆ೦ದು ಕಣ್ಣೀರಿಡುತಿರುವನು

ಇನ್ನಾದರೂ ಎಚ್ಚೆತ್ತು ಸಹಾಯ ನೀಡದಿರೆ

ನಾಡ ಬೆನ್ನೆಲುಬು ಮುರಿಯುವುದು

ಅನ್ನದಾತರ ಕುಲದ ಶಾಪ ತಗಲುವುದು

ಧಾನ್ಯ ಧವಸಕೆ ಮು೦ದೆ ಪರದಾಡಬೇಕಾಗುವುದು

--ವಾಯ್ಕೆ--

ಯಶೋದಾ ಗಣಪತಿ ಭಟ್ಟ ನೀರಗಾನು(ದುಬೈ)

here it is

Similar questions