kannada prabandha health and food
Answers
ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.
ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.
ನಾವು ಶಕ್ತಿವಂತರಾಗುವಂತೆ ಹಾಗು ಬೆಳೆಯುವಂತೆ ಮಾಡುವ ಆಹಾರ ಹಾಗು ನಾವು ಕಾಂತಿಯುತರಾಗುವಂತೆ ಮಾಡುವ ಆಹಾರ, ಒಳ್ಳೆಯ ಆಹಾರವಾಗಿರುತ್ತದೆ, ಅದು ನಮ್ಮನ್ನು ಬಲಶಾಲಿಗಳನ್ನಾಗಿ ಮಾಡುತ್ತದೆ!
ಅಪೌಷ್ಟಿಕತೆಗೆ ಕಾರಣ ಅತೀ ಕಡಿಮೆ ತಿನ್ನುವುದು ಅಥವಾ ಅತಿಯಾದ ಕುರುಕು ತಿಂಡಿಗಳನ್ನು ತಿನ್ನುವುದು ಆಗಿರಬಹುದು. ಊಟದ ಸಮಯದಲ್ಲಿ ಒಳ್ಳೆಯ ಆಹಾರವನ್ನು ಬೇರೆಯವರೊಂದಿಗೆ ಹಂಚಿಕೊಂಡು, ಸರಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಇದನ್ನು ತಪ್ಪಿಸಬಹುದು.
2 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಚೆನ್ನಾಗಿ ಬೆಳೆಯುತ್ತಿದ್ದಾರೆಯೇ ಎಂದು ಪರಿಶೀಲಿಸಲು ಅವರ ತೂಕವನ್ನು ಪ್ರತಿ ತಿಂಗಳು 5 ವರ್ಷಕ್ಕಿಂತ ಕಡಿಮೆಯ ಮಕ್ಕಳಿಗಾಗಿನ ಚಿಕಿತ್ಸಾಲಯದಲ್ಲಿ ಪರೀಕ್ಷಿಸಬೇಕಾಗುತ್ತದೆ.
ಮಕ್ಕಳು ಅತಿಯಾಗಿ ಸಣಕಲಾದರೆ ಅಥವಾ ಅವರ ಮುಖ ಅಥವಾ ಪಾದ ಊದಿಕೊಂಡರೆ ಅಥವಾ ಅತಿಯಾಗಿ ಸುಮ್ಮನಿದ್ದರೆ, ಅವರು ಆರೋಗ್ಯ ಕಾರ್ಯಕರ್ತರನ್ನು ನೋಡಬೇಕು.
ಮಕ್ಕಳಿಗೆ ಕಾಯಿಲೆಯಾದರೆ ಹಸಿವೆ ಕಡಿಮೆಯಾಗಬಹುದು. ಅವರಿಗೆ ಕುಡಿಯಲು ಬಹಳಷ್ಟು ಪಾನೀಯ ಮತ್ತು ಸೂಪ್ ಅನ್ನು ನೀಡಿ ಹಾಗು ಗುಣಮುಖರಾಗುವಾಗ ಎಂದಿಗಿಂತ ಹೆಚ್ಚಿನ ಆಹಾರವನ್ನು ನೀಡಿ.
ಶಿಶುವು ಹುಟ್ಟಿದ ನಂತರ 6 ತಿಂಗಳವರೆಗೆ ಅದಕ್ಕೆ ಬೇಕಾಗುವ ಒಂದೇ ಒಂದು ಆಹಾರವೆಂದರೆ ಅದು ತಾಯಿಯ ಎದೆಹಾಲು. ಅದರಲ್ಲಿ ಶಕ್ತಿ, ಬೆಳವಣಿಗೆ ಮತ್ತು ಕಾಂತಿ ಎಲ್ಲವೂ ಇದೆ!
6 ತಿಂಗಳ ನಂತರ ಶಿಶುಗಳಿಗೆ ತಾಯಿಯ ಎದೆಹಾಲು ಮತ್ತು ಚೆನ್ನಾಗಿ ಕಲಸಿದ ಅಥವಾ ಮೆತ್ತಗೆ ಮಾಡಿದ ಕುಟುಂಬದ ಆಹಾರ, ದಿನಕ್ಕೆ 3ರಿಂದ 4 ಬಾರಿ ಹಾಗು ಪ್ರತಿ ಊಟದ ನಡುವೆ ಏನಾದರೂ ತಿಂಡಿ ಅಗತ್ಯವಾಗುತ್ತದೆ.
ಬೇರೆಬೇರೆ ಬಣ್ಣದ ಪ್ರಾಕೃತಿಕ ಆಹಾರಗಳನ್ನು ಪ್ರತಿ ವಾರ ಸೇವಿಸುವುದು ಆರೋಗ್ಯಪೂರ್ಣ, ಸಂತುಲಿತ ಆಹಾರಕ್ರಮಕ್ಕೆ ಅತ್ಯುತ್ತಮ ಮಾರ್ಗ.
ಕೆಂಪು, ಹಳದಿ ಮತ್ತು ಹಸಿರು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸೂಕ್ಷ್ಮಪೌಷ್ಟಿಕಾಂಶಗಳು ಸಮೃದ್ಧವಾಗಿರುತ್ತವೆ. ಇವುಗಳು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತವೆ, ಆದರೆ ನಮ್ಮ ದೇಹವನ್ನು ಬಲಶಾಲಿಯನ್ನಾಗಿಸುತ್ತವೆ.
ನೀವು ತಿನ್ನುವಂತಹ ಮತ್ತು ಅಡುಗೆ ಮಾಡುವಂತಹ ಆಹಾರ ಪದಾರ್ಥವನ್ನು ತೊಳೆಯುವ ಮೂಲಕ ಕಾಯಿಲೆ ಮತ್ತು ದುಃಖವನ್ನು ದೂರವಿರಿಸಿ. ಬೇಯಿಸಿದ ಆಹಾರವನ್ನು ಕೂಡಲೇ ತಿನ್ನಿ ಅಥವಾ ಅದನ್ನು ಸರಿಯಾಗಿ ಶೇಖರಿಸಿಡಿ.
ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ ದಲ್ಲಿಯೂ ಲಭ್ಯ.
ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.
Answer:
abc
Explanation:
sorry I don't know the answers.......I don't know the answer of that question.... really sorry for that