Koodi balidare swarga suki gade in kannada
Answers
Answer:
ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುತ್ತಾರೆ ಹಿರಿಯರು. ಹೌದು ಕೂಡಿ ಬಾಳುವುದರಲ್ಲಿ ಇರುವ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಯಾವುದರಲ್ಲಿಯೂ ಸಿಗುವುದಿಲ್ಲ. ಸುಖಿ ಕುಟುಂಬಗಳು ತಮ್ಮ ಕುಟುಂಬದ ಸದಸ್ಯರ ನಡುವೆ ಅನ್ಯೋನ್ಯವಾದ ಬಾಂಧವ್ಯವನ್ನು ಹೊಂದಿರುತ್ತವೆ. ಜೊತೆಗೆ ಇದು ತಲೆಮಾರುಗಳ ಕಾಲ ತಪ್ಪದೆ ಮುಂದೆ ಸಾಗುತ್ತವೆ. ಕುಟುಂಬದ ಹಿರಿಯರು ಅಂದರೆ ನಮ್ಮ ಪೋಷಕರು ತಮ್ಮ ಕುಟುಂಬದ ಬಾಂಧವ್ಯವನ್ನು ಕಾಪಾಡುವ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ಇಡೀ ಕುಟುಂಬವು ಒಟ್ಟಿಗೆ ಕುಳಿತು ಹಬ್ಬ ಹರಿದಿನಗಳನ್ನು ಆಚರಿಸುವುದು ಈ ಕುಟುಂಬಗಳ ವಿಶೇಷ. ತಜ್ಞರು ಸಹ ಕುಟುಂಬಗಳು ಅನ್ಯೋನ್ಯವಾಗಿ ಒಟ್ಟಿಗೆ ಬದುಕವೇಕು ಇದರಿಂದ ಕೌಟುಂಬಿಕ ಬಾಂಧವ್ಯವು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೆ. ಸರಳವಾಗಿ ಹೇಳಬೇಕೆಂದರೆ, ಕೌಟುಂಬಿಕ ಬಾಂಧ್ಯವ್ಯವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಸುಧಾರಿಸುವುದು ಕಷ್ಟವಲ್ಲ. ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವುದರಿಂದ ನೀವು ಕುಟುಂಬದ ಸದಸ್ಯರಲ್ಲಿ ಸುರಕ್ಷಿತವಾದ ಭಾವನೆ ಉಂಟಾಗಲು ಸಹಾಯ ಮಾಡುತ್ತೀರಿ. ಮನೆಯೇ ಮೊದಲ ಪಾಠಶಾಲೆ, ಮಕ್ಕಳು ನಿಮ್ಮ ಅನ್ಯೋನ್ಯತೆಯನ್ನು ನೋಡಿ ತಾವು ಸಹ ಒಟ್ಟಿಗೆ ಇರಬೇಕು ಎಂಬ ಅಂಶವನ್ನು ಕಲಿಯುತ್ತಾರೆ. ಕೌಟುಂಬಿಕ ಬಾಂಧವ್ಯವನ್ನು ನೀವು ಹೆಚ್ಚಿಸಿದರೆ ನಿಮ್ಮ ಕುಟುಂಬದಲ್ಲಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಮತ್ತು ನೀವು ಒಂದು ಬೆಂಬಲವನ್ನು ನೀಡುವ ಕುಟುಂಬದ ರಕ್ಷಣೆಯಲ್ಲಿ ಜೀವಿಸುತ್ತೀರಿ. ಬನ್ನಿ ನಿಮ್ಮ ಕುಟುಂಬದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುವಂತಹ ಸಲಹೆಗಳ ಕುರಿತು ನಾವು ಇಂದು ತಿಳಿದುಕೊಳ್ಳೋಣ... ಒಟ್ಟಿಗೆ ಊಟ ಮಾಡುವುದು ಕುಟುಂಬದ ಎಲ್ಲಾರೂ ಒಟ್ಟಿಗೆ ಇದ್ದಲ್ಲಿ ಊಟ ಮಾಡುವಾಗ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಆಗ ಎಲ್ಲರೂ ನಾವು ಒಂದು ಎಂಬ ಭಾವನೆ ಬರುತ್ತದೆ. ಅವರಿಗೆ ಇಷ್ಟವಾದುದನ್ನು ಇವರು, ಇವರಿಗೆ ಇಷ್ಟವಾದುದನ್ನು ಅವರು ಬಡಿಸುವುದು, ಆ ತಿಂಡಿಯ ಕುರಿತಾಗಿ ನೆನಪುಗಳನ್ನು ಮೆಲುಕು ಹಾಕುವುದು ಹೀಗೆ ಸಾಗುತ್ತದೆ ಊಟ. ಹಾಗಾಗಿ ನಿಮಗೆ ಎಷ್ಟೇ ಕೆಲಸ ಕಾರ್ಯಗಳು ಇದ್ದರೂ ಸಹ ಊಟವನ್ನು ಕುಟುಂಬದ ಸದಸ್ಯರ ಜೊತೆಗೆ ಸೇರಿ ಮಾಡಿ. ಇದರಿಂದ ನಿಮ್ಮ ಮನೆಯವರ ಸುಖ ದುಃಖಗಳನ್ನು ಆಲಿಸಬಹುದು. ಒಟ್ಟಿಗೆ ಜವಾಬ್ದಾರಿಗಳನ್ನು ಹೊರುವುದು ಕುಟುಂಬ ಎಂದರೆ ಜವಾಬ್ದಾರಿಗಳನ್ನು ಒಟ್ಟಿಗೆ ಎಲ್ಲರೂ ಹಂಚಿಕೊಳ್ಳುವುದು ಎಂದರ್ಥ. ಇಡೀ ಮನೆಯ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡುವುದರಿಂದ ನಿಮ್ಮ ನಿಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಲು ನೆರವಾಗುತ್ತದೆ. ಮನೆ ಕೆಲಸವನ್ನು ಹಂಚಿಕೊಳ್ಳುವುದರಿಂದ ನಿಮ್ಮ ನಡುವಿನ ಬಾಂಧವ್ಯವು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಮತ್ತು ಕುಟುಂಬದ ಸದಸ್ಯರ ನಡುವೆ ಪರಸ್ಪರ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಒಟ್ಟಿಗೆ ಹಬ್ಬಗಳನ್ನು ಆಚರಿಸಿಕೊಳ್ಳುವುದು ಟಿವಿ ನೋಡಿಕೊಂಡು ನಿಮ್ಮ ಸ್ನೇಹಿತರ ಜೊತೆಗೆ ಸಂಭ್ರಮಗಳನ್ನು ಆಚರಿಸಿಕೊಳ್ಳುವುದರಿಂದ ಅಥವಾ ಮಾತನಾಡುವುದರಿಂದ ಯಾವ ಪ್ರಯೋಜನ ಬರುತ್ತದೆ. ಇದರಿಂದ ನಿಮ್ಮ ಕುಟುಂಬದ ಅನ್ಯೋನ್ಯತೆ ಹೆಚ್ಚಾಗುವುದಿಲ್ಲ. ಹಬ್ಬ ಹರಿದಿನಗಳನ್ನು ಕುಟುಂಬದ ಸದಸ್ಯರ ಜೊತೆಗೆ ಕಲೆತು ಆಚರಿಸಿ. ಇದರಿಂದ ನಿಮಗೆ ಎಂದೆಂದಿಗೂ ಮರೆಯಲಾಗದ ನೆನಪುಗಳು ದೊರೆಯುತ್ತವೆ. ಜೊತೆಗೆ ಮುಂದಿನ ಹಬ್ಬ ಹರಿದಿನಗಳಿಗಾಗಿ ನೀವು ಸಹ ಕಾಯುತ್ತೀರಿ. ಹೊಗಳಿಕೆ ಪ್ರತಿಯೊಬ್ಬರಿಗೂ ಹೊಗಳಿಕೆ ಎಂದರೆ ಇಷ್ಟ. ಅದರಲ್ಲಿಯೂ ಕುಟುಂಬದ ಸದಸ್ಯರಿಂದ ಯಾರಿಗೇ ಆಗಲಿ ಹೊಗಳಿಕೆ ಬಂದರೆ, ಅದರಿಂದ ಅವರ ಹುಮ್ಮಸ್ಸು ಅಧಿಕವಾಗುತ್ತದೆ. ಜೊತೆಗೆ ಕುಟುಂಬದ ಒಳಗೆಯೇ ತಮ್ಮ ಪ್ರತಿಭೆಯನ್ನು ಗುರುತಿಸುವವರು ಇದ್ದಾರೆ ಎಂಬ ಆತ್ಮ ವಿಶ್ವಾಸ ಬೆಳೆಯುತ್ತದೆ. ಆದ್ದರಿಂದ ನಿಮ್ಮ ಕುಟುಂಬದಲ್ಲಿರುವ ಸದಸ್ಯರು ಮಾಡುವ ಸಣ್ಣ ಸಾಧನೆಗಳನ್ನು ಸಹ ಸಂತೋಷದಿಂದ ಅಭಿನಂದಿಸಿ, ಕುಟುಂಬದ ಸದಸ್ಯರ ಜೊತೆಗೆ ಅವರ ಸಂತೋಷದಲ್ಲಿ ಭಾಗಿಯಾಗಿ. ಸಾಧ್ಯವಾದರೆ ಸಣ್ಣ ಉಡುಗೊರೆ, ಎಲ್ಲರಿಗೂ ಒಂದು ಸಿಹಿ ತಿಂಡಿ ತಿನಿಸುವುದು ಇತ್ಯಾದಿ ಮಾಡಿ. ಇದರಿಂದ ಪವಾಡಗಳನ್ನೇ ಸೃಷ್ಟಿಸಬಹುದು.