kouravendrana konde Neenu Kannada lesson summary
Answers
Answered by
5
Answered by
8
- ರಾಕ್ಷಸ ಸಂಹಾರಕನಾದ (ದನುಜ ರಿಪು) ಕೃಷ್ಣನು ಸೂರ್ಯನ ಮಗ(ಇನತನೂಜ) ನಾದ ಕರ್ಣನೊಡನೆ ಮೈದುನತನದ ಸರಸದಿಂದ (ಪ್ರೀತಿಯಿಂದ) ಬರಸೆಳೆದು ರಥದ ಪೀಠದಲ್ಲಿ ಕುಳ್ಳಿರಿಸಿದನು. ಆಗ ಅದನ್ನು ನಿರೀಕ್ಷಿಸದ ಕರ್ಣನು ''ನಿಮ್ಮೊಡನೆ ನಾನು ಸರಿಸಮಾನನಾಗಿ ಕುಳಿತುಕೊಳ್ಳಬಹುದೇ? ದೇವ ಮುರಾರಿ, ನನಗೇಕೋ ಭಯವಾಗುತ್ತಿದೆ'' ಎಂದು ಹೇಳಲು, ಶ್ರೀಕೃಷ್ಣನು(ಶೌರಿ) ಅವನ ಪಕ್ಕಕ್ಕೆ ತೊಡೆ ಸೋಕುವಂತೆ ಕುಳಿತು ಹೀಗೆಂದನು pyara 1
- ಕರ್ಣ, ಕೌರವರು ಯಾದವರಿಗೆ ಭೇದವಿಲ್ಲ. ವಿಚಾರ ಮಾಡಿ ನೋಡಿದರೆ ಇಬ್ಬರೂ ಒಂದೇ ವಂಶದವರು. (ಯಯಾತಿಯ ಮಕ್ಕಳು ಪುರು, ಯದು, ಪುರುವಿನ ವಂಶದವರು ಕೌರವರು. ಯದುವಿನ ವಂಶದವರು ಯಾದವರು) ನಿನ್ನಾಣೆಯಾಗಿಯೂ ನೀನೇ ರಾಜ (ಮೇದಿನಿಪತಿ) ಆದರೆ ನಿನಗೆ ಅದರ ಅರಿವಿಲ್ಲ ಎಂದು ಹೇಳುವ ಮೂಲಕ ದಾನವರ ವೈರಿಯಾದ ಶ್ರೀಕೃಷ್ಣನು ರವಿಸುತ (ಕರ್ಣ)ನ ಕಿವಿಯಲ್ಲಿ ಭಯವನ್ನು ಬಿತ್ತಿದನು.pyara2
- ಪಾಂಡವರ ತಾಯಿಯಾದ ಕುಂತಿಯು ದೂರ್ವಾಸ ಮುನಿಗಳಿಂದ ಪಡೆದ ಐದು ಮಂತ್ರಗಳಲ್ಲಿ ನೀನು ಮೊದಲನೆಯವನು, ನಿನ್ನ ನಂತರದಲ್ಲಿ ಜನಿಸಿದವನು ಯುಧಿಷ್ಠಿರ(ಧರ್ಮತರಾಯ), ಮೂರನೆಯವನು ಶೂರನಾದ ಭೀಮನು, ಅರ್ಜುನನು(ಫಲುಗುಣ) ನಾಲ್ಕನೆಯವನು ಆನಂತರದಲ್ಲಿ ಮಾದ್ರಿಯಲ್ಲಿ (ಪಾಂಡುವಿನ ಎರಡನೇ ಪತ್ನಿಗೆ ಮೊದಲ ಪತ್ನಿಯಾದ ಕುಂತಿಯು ದಯಪಾಲಿಸಿದ ಒಂದು ಮಂತ್ರದ ಕೃಪೆಯಿಂದ) ಒಂದು ಮಂತ್ರದಿಂದ ನಕುಲ ಸಹದೇವರು ಜನಿಸಿದರು ಎಂದು ಶ್ರೀ ಕೃಷ್ಣನು ಕರ್ಣನಿಗೆ ಅವನ ಜನ್ಮ ವೃತ್ತಾಂತವನ್ನು ಹೇಳಿದನು .pyara3
- ನಿನಗೆ ಹಸ್ತಿನಾಪುರದ(ಹಸ್ತನಾವತಿ) ರಾಜನ ಹಿರಿಮೆಯನ್ನುಕೊಡಿಸುವೆನು. ಪಾಂಡವ ಕೌರವ ರಾಜರೆಲ್ಲರೂ ನಿನ್ನನ್ನು ಓಲೈಸುವರು. ಈ ಎರಡೂ ಸಂತತಿಯವರೂ ನಿನಗೆ ಸೇವಕರೆನಿಸಿಕೊಳ್ಳುವ ಹಿರಿಮೆಯನ್ನು ತಿರಸ್ಕರಿಸಿ ನೀನು ದುರ್ಯೋಧನನ ಬಾಯ್ದಂಬುಲಕೆ(ಬಾಯಿಯಲ್ಲಿ ಅಗಿದು ಉಗುಳುವ ತಾಂಬೂಲ) ಕೈಯೊಡ್ಡುವುದು ಸರಿಯೇ ? ಹೇಳು ಎಂದು ಶ್ರೀಕೃಷ್ಣನು ಕರ್ಣನನ್ನು ಪ್ರಶ್ನಿಸುತ್ತಾನೆ.pyara4
- ನಿನ್ನ ಎಡ ಭಾಗದಲ್ಲಿ ಕೌರವನ ಸಮೂಹದವರು, ಬಲ ಭಾಗದಲ್ಲಿ ಪಾಂಡವರ ಸಮೂಹ (ಪಾಂಡು ರಾಜನ ಮಕ್ಕಳು), ಇದಿರಿನಲ್ಲಿ ಮಾದ್ರಿ, ಮಾಗಧ, ಯಾದವಾದಿಗಳು ಇವರೆಲ್ಲರ ನಡುವೆ ನೀನು ಓಲಗದಲ್ಲಿ ಶೋಭಿಸುವ ನೀನು ಇಂತಹ ಮಹಾಸೌಭಾಗ್ಯವನ್ನು ಅತ್ತ ಎಸೆದು ಕುರುಪತಿ (ಕೌರವ/ದುರ್ಯೋಧನ) ನಿನಗೇನಾದರೂ ಹೇಳಿದರೆ 'ಜೀಯಾ, ಮಹಾಪ್ರಸಾದ' ಎಂದು ಒಪ್ಪಿಕೊಳ್ಳುವುದು ನಿನಗೆ ಕಷ್ಟವಾಗುವುದು ಎಂದು ಶ್ರೀಕೃಷ್ಣನು ಕರ್ಣನಿಗೆ ಹೇಳಿದನು.pyara5
- ಕರ್ಣನ ಕೊರಳ ನರಗಳು ಹಿಗ್ಗಿದವು (ಗದ್ಗದ) ಕಣ್ಣಿರು ಧಾರೆಯಾಗಿ ಸುರಿಯಿತು. ಅವನು ಬಹಳವಾಗಿ ನೊಂದು ''ಅಯ್ಯೋ! ಕುರುಪತಿಗೆ ಕೇಡಾಯಿತು'' ಎಂದು ತನ್ನ ಮನದೊಳಗೆ ಅಂದುಕೊಂಡು ''ಕೃಷ್ಣನ ದ್ವೇಷದ ಬೆಂಕಿ ಹೊಗೆಯಾಡಿದ ಮೇಲೆ ಅದು ಪೂರ್ತಿಯಾಗಿ ಸುಡದೆ ಹಾಗೇ ಬಿಡುವುದೇ? ಬರಿದೆ ನನ್ನ ಜನ್ಮವೃತ್ತಾಂತವನ್ನು ಹೇಳಿ ಕೊಂದನು. ಹೆಚ್ಚು ಮಾತೇನು?'' ಎಂದು ಚಿಂತಿಸಿದನು.pyara6
- ಕರ್ಣನು ಮನಸ್ಸಿನಲ್ಲಿ ಚಿಂತಿಸುತ್ತಿರುವುದನ್ನು ನೋಡಿ) ಏನು ಹೇಳು ಕರ್ಣ? ನಿನ್ನ ಮನಸ್ಸಿನ ಜಡತ್ವಕ್ಕೆ, ವ್ಯಾಕುಲತೆಗೆ ಕಾರಣವೇನು? ಕುಂತಿಪುತ್ರರಿಂದ ಸೇವೆ ಮಾಡಿಸಿಕೊಳ್ಳುವುದು ನಿನಗೆ ಇಷ್ಟವಾಗುವುದಿಲ್ಲವೇ? ನನ್ನಾಣೆ, ಏನೂ ಹಾನಿ ಇಲ್ಲ, ಮಾತನಾಡು. ಮೌನವೇಕೆ? ಈ ದಡ್ಡತನ ಬೇಡ, ನಿನ್ನ ಹಾನಿಯನ್ನು(ಅಪದೆಸೆ, ಕೇಡು) ನಾನು ಬಯಸುವವನಲ್ಲ; ಕೇಳು.” ಎಂದು ಕೃಷ್ಣನು ಕರ್ಣನಿಗೆ ಸಾಂತ್ವನ ಹೇಳುತ್ತಾನೆ.pyara7
- ಅಯ್ಯೋ ಮರುಳು ಕೃಷ್ಣನೇ, ಈ ಭೂಮಿ ರಾಜ್ಯದ ಸಂಪತ್ತಿಗೆ ನಾನು ಸೋಲುವವನಲ್ಲ. ಕೌಂತೇಯರು(ಪಾಂಡವರು), ಕೌರವರು ನನಗೆ ಸೇವೆ ಮಾಡಬೇಕೆನ್ನುವುದರಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ(ಇಚ್ಛೆಯಿಲ್ಲ). ನನ್ನನ್ನು ಸಲಹಿದ ನನ್ನ ಒಡೆಯನಿಗೆ (ದಾತಾರ-ದಾತೃ) ‘ಶತ್ರುಗಳ ತಲೆಯನ್ನು ಕಡಿದು ಒಪ್ಪಿಸುವೆನು’ ಎನ್ನು ಆತುರದಲ್ಲಿದ್ದೆನು. ಆದರೆ ನೀನು ಕೌರವೇಂದ್ರನನ್ನು ಕೊಂದುಹಾಕಿದೆ” ಎಂದು ಕರ್ಣನು ನೋವಿನಿಂದ ಶ್ರೀಕೃಷ್ಣನಿಗೆ ಹೇಳಿದನು.pyara8
- ವೀರ ಕೌರವರಾಯನೇ(ದುರ್ಯೋಧನನೇ) ನನಗೆ ಒಡೆಯನು, ಆತನ ಶತ್ರುಗಳೇ ನನ್ನ ಶತ್ರುಗಳು, ಅವನ ಅಭಿಮಾನವೇ (ಹೊಗಳಿಕೆಯೇ) ನನಗೆ ಅಭಿಮಾನ. ಅವನಿಗೆ ಆಗುವುದೇ ನನಗೆ ಆಗಲಿ, ಕೃಷ್ಣನೇ ಕೇಳು, ನಾಳೆ ಯುದ್ಧಭೂಮಿಯಲ್ಲಿ ನನ್ನ ಭುಜಬಲಶೌರ್ಯದ ಪರಾಕ್ರಮವನ್ನು ಪಾಂಡುತನಯ(ಪಾಂಡವರು)ರ ಮೇಲೆ ತೋರುವೆನು ಎಂದು ಕರ್ಣನು ಹೇಳಿದನು.pyara9
- ನಾಳೆ ಬರಲಿರುವ ಭಾರತ(ಮಹಾಭಾರತ)ಯುದ್ಧವು ಮಾರಿಗೆ ಔತಣವಾಗುವುದು. ಆ ಯುದ್ಧದಲ್ಲಿ ಚತುರಂಗ ಬಲವನ್ನು ಸೋಲಿಸಿ, ಅಸಂಖ್ಯಾತ ಯೋಧರನ್ನು ಸಾಯಿಸಿ, ನನ್ನ ಒಡೆಯ ದುರ್ಯೋಧನನಿಗಾಗಿ (ಅವಸರಕ್ಕಾಗಿ=ಸಮಯಕ್ಕಾಗಿ) ನನ್ನ ದೇಹವನ್ನು ಅರ್ಪಿಸುವೆನು(ಪ್ರಾಣಬಿಡುವೆನು) ನಿನ್ನ ಧೀರರಾದ ಪಾಂಡವರನ್ನು ಸೂರ್ಯನಾಣೆಯಾಗಿಯೂ ಯಾವುದೇ ಕಾರಣಕ್ಕೂ ನೋಯಿಸುವುದಿಲ್ಲ ಎಂದು ಕರ್ಣನು ಶ್ರೀಕೃಷ್ಣನಿಗೆ ಹೇಳಿದನು.pyara10
Similar questions