l. ಈ ಕೆಳಗಿನ ವಿಷಯದ ಕುರಿತು ನಾಲ್ಕು ವಾಕ್ಯ ಬರೆಯಿರಿ:
೧. ಪರಿಸರದ ಬಗ್ಗೆ
೨. ನನ್ನ ನೆಚ್ಚಿನ ಪ್ರಾಣಿ
Answers
Answer:
ಯಾವುದೇ ದೇಶಾಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಪರಿಸರ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಒಂದು ದೇಶ ದೊಡ್ಡ ದೊಡ್ಡ ಕಾರ್ಖಾನೆಗಳನ್ನು, ಕಟ್ಟಡಗಳನ್ನು, ರಸ್ತೆಗಳನ್ನು ಹೊಂದಿದ ಮಾತ್ರಕ್ಕೆ ಅದನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನಲು ಸಾಧ್ಯವಿಲ್ಲ. ಜೊತೆಗೆ ಆರೋಗ್ಯಕರ ವಾತಾವರಣವನ್ನು ಹೊಂದಿರುವುದು ಅಷ್ಟೇ ಮುಖ್ಯವಾಗಿರುತ್ತದೆ.
ಆರೋಗ್ಯಕರ ಬದುಕಿಗೆ ಆರೋಗ್ಯಕರ ವಾತಾವರಣವು ಅವಶ್ಯವಾಗಿರುತ್ತದೆ. ಆದರೆ ಮನುಷ್ಯ ಅಭಿವೃದ್ಧಿಯ ನೆಪದಲ್ಲಿ ಪರಿಸರದ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ.
Explanation:
ನಾಯಿ ಎಂದರೆ ಸಾಕು, ನಿಯತ್ತಿಗೆ ಹೆಸರಾದ ಒಂದು ಪ್ರಾಣಿ ಎಂಬ ಕಲ್ಪನೆ ನಮ್ಮ ಮನದಲ್ಲಿ ಮೂಡುತ್ತದೆ. ಹೌದು, ನಾಯಿಗಳೆಂದರೆ ಹಾಗೆ, ಅವು ಪ್ರಾಮಾಣಿಕತೆಗೆ, ಪ್ರೀತಿಗೆ ಮತ್ತು ಶಿಸ್ತಿಗೆ ಹೆಸರಾದ ಪ್ರಾಣಿಗಳು. ಹಲವಾರು ಅಧ್ಯಯನಗಳು ನಾಯಿಗಳ ಮೇಲೆ ನಡೆದಿವೆ. ಅವುಗಳ ಪ್ರಕಾರ ಈ ನಾಯಿಗಳನ್ನು ಸಾಕು ಪ್ರಾಣಿಯಾಗಿ ಹೊಂದಿರುವವರು ತನ್ನ ಖಿನ್ನತೆ ಮತ್ತು ಒತ್ತಡವನ್ನು ನಾಯಿಗಳ ಪ್ರೀತಿಯಿಂದ ಕಳೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ. ಅವುಗಳು ನಿಮ್ಮ ಸಂತೋಷ ಮತ್ತು ದುಃಖಗಳನ್ನು ಸಹ ಹಂಚಿಕೊಳ್ಳುತ್ತವೆ ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ.