lohagala lakshanagalu
Answers
Answer:
ವಿವಿಧ ರೀತಿಯ ವಸ್ತುಗಳ ತಯಾರಿಕೆಯಲ್ಲಿ ಮತ್ತು ವಿವಿಧ ಕ್ಷೇತ್ರಗಳ ಇಂಜಿನಿಯರಿಂಗ್ ಕೆಲಸಗಳಿಗಾಗಿ ಬಳಕೆಗೆ ತಕ್ಕಂತಹ ಗುಣಲಕ್ಷಣಗಳನ್ನು ಹೊಂದಿರುವ ಲೋಹಗಳ ಆಯ್ಕೆ ಮುಖ್ಯವಾದುದು. ಲೋಹಗಳ ಮೂಲಭೂತ ರಚನೆ, ವಿವಿಧ ಪರಿಸ್ಥಿತಿಗಳಲ್ಲಿ ಅವುಗಳ ಪ್ರತಿಕ್ರಿಯೆ ಮತ್ತು ಅವುಗಳ ಪ್ರತಿಭಟನಾ ಶಕ್ತಿ ಮುಂತಾದವುಗಳ ಆಧಾರದ ಮೇಲೆ ಲೋಹ ಗುಣಲಕ್ಷಣಗಳನ್ನು ಗುರುತಿಸಲಾಗುತ್ತದೆ. ಅಂತಹ ಗುಣಲಕ್ಷಣಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು.
ಬಣ್ಣ, ಗಾತ್ರ, ಆಕಾರ, ಸಾಂದ್ರತೆ, ವಿದ್ಯುತ್ ಮತ್ತು ಉಷ್ಣವಾಹಕತೆ, ಕರಗುವ ಬಿಂದು, ಹೊಳಪು ಈ ತರಹದ ಗುಣಲಕ್ಷಣಗಳು ಭೌತಿಕ ಗುಣಲಕ್ಷಣಗಳಾಗಿವೆ. ಇವುಗಳನ್ನು ವಿವಿಧ ಮಾಪನಗಳಲ್ಲಿ ಹೇಳಲಾಗುತ್ತದೆ. ಉದಾಹರಣೆಗೆ ಸಾಂದ್ರತೆಯನ್ನು kg/m3, ಕರಗುವ ಬಿಂದುವನ್ನು ೦C, ೦F ಇತ್ಯಾದಿ. ಇತರ ಕೆಲವು ಗುಣಲಕ್ಷಣಗಳು ಬರಿಗಣ್ಣಿಗೆ ಕಾಣುವಂತಿದ್ದು ನೇರವಾಗಿ ಅಳತೆ ಮಾಡಬಹುದಾಗಿರುತ್ತವೆ
ವಿವಿಧ ರೀತಿಯ ಬಲ ಮತ್ತು ಹೊರೆ(ಲೋಡ್)ಗಳನ್ನು ತಾಳಿಕೊಳ್ಳುವ ಸಾಮರ್ಥ್ಯದೊಂದಿಗೆ ಸಂಬಂಧಿಸಿದ ಗುಣಲಕ್ಷಣಗಳನ್ನು ಮೆಕ್ಯಾನಿಕಲ್ ಗುಣಲಕ್ಷಣಗಳು ಎನ್ನಲಾಗುತ್ತದೆ
ಸ್ಥಿತಿಸ್ಥಾಪಕತ್ವ(Elasticity) ಸಂಪಾದಿಸಿ
ವಸ್ತುವಿನ ಮೇಲೆ ಉಂಟಾಗುವ ಆಘಾತ ಅಥವಾ ಹೊರೆಯನ್ನು ಸಹಿಸಿಕೊಂಡು ತನ್ನ ರೂಪದಲ್ಲಿ ಬದಲಾವಣೆ ಹೊಂದಿ ಅನಂತರ ಆ ಆಘಾತ/ಹೊರೆಯನ್ನು ಹಿಂತೆಗೆದುಕೊಂಡಾಗ ಹಿಂದಿನಸ್ಥಿತಿಗೆ ಮರಳುವ ವಸ್ತುವಿನ ಗುಣಕ್ಕೆ ಸ್ಥಿತಿಸ್ಥಾಪಕತ್ವ ಎನ್ನಬಹುದು.
ಬಲ(Strength) ಸಂಪಾದಿಸಿ
ಮುರಿಯದೇ ಅಥವಾ ವಿರೂಪಗೊಳ್ಳದೇ ತನ್ನ ಮೇಲೆ ಬೀಳುವ ಹೊರ ಆಘಾತ ಅಥವಾ ಹೊರೆಯನ್ನು ಪ್ರತಿಭಟಿಸುವ ಗುಣಕ್ಕೆ ವಸ್ತುವಿನ ’ಬಲ’ ಎನ್ನಬಹುದು.
ಬಿಗಿತ(stiffness) ಸಂಪಾದಿಸಿ
ವಸ್ತುವಿನ ಮೇಲೆ ಒತ್ತಡ ಬಿದ್ದಾಗ ರೂಪಬದಲಾವಣೆಯನ್ನು ಪ್ರತಿಭಟಿಸುವ ಸಾಮರ್ಥ್ಯದ ಗುಣ stiffness.
ಮೆದುಸ್ಥಿತಿತ್ವ(Plasticity) ಸಂಪಾದಿಸಿ
ವಸ್ತುವಿನ ಮೇಲೆ ಉಂಟಾಗುವ ಆಘಾತ ಅಥವಾ ಹೊರೆಯನ್ನು ಸಹಿಸಿಕೊಂಡು ತನ್ನ ರೂಪದಲ್ಲಿ ಬದಲಾವಣೆ ಹೊಂದಿ ಅನಂತರ ಆ ಆಘಾತ/ಹೊರೆಯನ್ನು ಹಿಂತೆಗೆದುಕೊಂಡಾಗಲೂ ಹಾಗೇ ಉಳಿಯುವ ಗುಣಕ್ಕೆ ಮೆದುಸ್ಥಿತಿತ್ವ ಅನ್ನಬಹುದು. ಅನೇಕ ವಸ್ತುಗಳು ಹೊರೆಯನ್ನು ಹಿಂತೆಗೆದುಕೊಂಡಾಗಲೂ ಪೂರ್ತಿ ಹಿಂದಿನ ಸ್ಥಿತಿಗೆ ಮರಳದೇ ಸ್ಪಲ್ಪ ಅಥವಾ ಪೂರ್ಣವಾಗಿ ರೂಪ ಬದಲಾವಣೆ ಹೊಂದುತ್ತವೆ. ಕೆಲವು ವಸ್ತುಗಳು ಹೆಚ್ಚಿನ ಶಾಖದ ಪರಿಸ್ಥಿತಿಯಲ್ಲಿ ಈ ಗುಣವನ್ನು ಪಡೆದುಕೊಳ್ಳುತ್ತವೆ.
ಬಿರುಸುತನ(Toughness) ಸಂಪಾದಿಸಿ
ಒಮ್ಮೆಲೇ ಉಂಟಾಗುವ ದೊಡ್ಡಮಟ್ಟದ ಆಘಾತಕ್ಕೆ ವಿರುದ್ಧವಾದ ಪ್ರತಿಭಟನಾ ಶಕ್ತಿಗೆ ಜಿಗುಟುತನ ಎನ್ನಬಹುದು.
ಭಂಗುರತ್ವ (Brittleness) ಸಂಪಾದಿಸಿ
ವಸ್ತುವಿನ ಮೇಲೆ ಉಂಟಾಗುವ ಆಘಾತದಿಂದ ಸೂಚನೆಯಿಲ್ಲದೇ, ಆಕಸ್ಮಿಕವಾಗಿ ಮುರಿಯುವ ಗುಣ. ಸುಲಭವಾಗಿ ಒಡೆದುಹೋಗುವ ಲಕ್ಷಣ.
ಕಠಿಣತೆ(Hardness) ಸಂಪಾದಿಸಿ
ವಸ್ತುವಿನಲ್ಲಿ ರೂಪಬದಲಾವಣೆಗೆ ಪ್ರತಿಭಟಿಸುವ ಶಕ್ತಿಗೆ ಅದರ ಕಠಿಣತೆ ಎನ್ನಬಹುದು. ಉಜ್ಜಿವಿಕೆ, ಗೀರುವಿಕೆ, ಕಚ್ಚುಹಾಕುವಿಕೆ ಮುಂತಾದ ಕ್ರಿಯೆಗಳ ವಿರುದ್ಧವೂ ವಸ್ತು ಪ್ರತಿಭಟಿಸುತ್ತದೆ. ಹೆಚ್ಚು ಕಠಿಣತೆ ಇರುವ ವಸ್ತು ಸ್ಥಿರಬದಲಾವಣೆ ಇಲ್ಲದೆ ಹೆಚ್ಚು ಭಾರವನ್ನು ತಡೆದುಕೊಳ್ಳಬಹುದು.
ತನ್ಯತೆ(Ductility) ಸಂಪಾದಿಸಿ
ವಸ್ತುವನ್ನು ಎಳೆತದ ಶಕ್ತಿಯ ಮೂಲಕ ತಂತಿಗಳ ರೂಪಕ್ಕೆ ಎಳೆದು ತರಬಹುದಾದ ಗುಣಕ್ಕೆ ತನ್ಯತೆ ಎನ್ನಬಹುದು. ಇದು ವಸ್ತುವನ್ನು ಎಳೆದು ಬಿಟ್ಟಾಗ ಅದರ ರೂಪ ಬದಲಾವಣೆಯಾಗು ಗುಣ.
ಪತ್ರಶೀಲತ್ವ(Malleability)
Answer:
.......?......?........