long essay on ಅರಣ್ಯ ಸಂರಕ್ಷನೆ in kannada
Answers
Answer:
ಕಾಡಿನ ವಿಸ್ತೀರ್ಣ ಗಿಡ , ಮರ , ಬಳ್ಳಿ ಮುಂತಾದ ಸಸ್ಯ ಸಮುದಾಯವಿರುವ ಪ್ರದೇಶವನ್ನು ಕಾಡು ಅಥವಾ ಅರಣ್ಯ ಎನ್ನುತ್ತೇವೆ . ಸಸ್ಯಗಳೊಂದಿಗೆ ಸಹಬಾಳ್ವೆ ನಡೆಸುವ ಕ್ರಿಮಿ , ಕೀಟ , ಪಕ್ಷಿ , ಪ್ರಾಣಿ - ಎಲ್ಲವೂ ಕಾಡಿಗೆ ಸೇರಿದವು . ನಾಗರಿಕತೆ ಬೆಳೆದಂತೆ ಕಾಡುಗಳು ನಾಶವಾಗತೊಡಗಿದವು . ಇಂದು ಭೂನೆಲದ ಸುಮಾರು ಮೂರರಲ್ಲಿ ಒಂದು ಪಾಲು ವಿಸ್ತೀರ್ಣ ಕಾಡು ಹರಡಿದೆ . ಭಾರತದಲ್ಲಿ ಒಟ್ಟು ವಿಸ್ತೀರ್ಣದ ಶೇಕಡ ಇಪ್ಪತ್ತೆರಡರಷ್ಟು ಕಾಡು ಪ್ರದೇಶವಿದೆ . ಕರ್ನಾಟಕದಲ್ಲಿ ಶೇಕಡ ಹದಿನೆಂಟರಷ್ಟು ಇದೆ . ಕಾಡುಗಳ ವರ್ಗಿಕರಣ ಭೌಗೋಳಿಕ ಸ್ಥಿತಿ , ಮಣ್ಣು ಮತ್ತು ಋತುಭೇದ ಇತ್ಯಾದಿ ಕಾರಣಗಳಿಂದ ಉಂಟಾಗುವ ಹವಾಗುಣಗಳು ಅರಣ್ಯದ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ . ಪ್ರಪಂಚದ ಕಾಡುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು . 1 ) ಶಂಕು ವೃಕ್ಷಗಳ ಕಾಡುಗಳು . ಇವು ತುಂದ್ರಾ ಪ್ರದೇಶದಿಂದ ದಕ್ಷಿಣಕ್ಕೆ ತಂಪು ಹವೆ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ . ಫರ್ , ಪೈನ್ ಮರಗಳು ಈ ಅರಣ್ಯದಲ್ಲಿವೆ . 2 ) ಸಮಶೀತೋಷ್ಣ ಪ್ರದೇಶದಲ್ಲಿರುವ ಕಾಲ ಕಾಲಕ್ಕೆ ಎಲೆಯುದುರುವ ಮರಗಳಿರುವ ಕಾಡುಗಳು ಓಕ್ , ಎಲ್ಫ್ ದೇವದಾರು ಮೊದಲಾದ ಮರಗಳು ಇಲ್ಲಿ ಬೆಳೆಯುತ್ತವೆ 3 ) ಉಷ್ಣವಲಯದಲ್ಲಿ ಹಬ್ಬಿರುವ ಕಾಲಕಾಲಕ್ಕೆ ಎಲೆ ಉದುರುವ ಮರಗಳಿರುವ ಕಾಡುಗಳು ಭಾರತ , ಬರ್ಮಗಳಲ್ಲಿ ಇಂಥ ಕಾಡುಗಳಿವೆ . ಉತ್ತರ ಅಮೆರಿಕಾದಲ್ಲಿ ಶಂಕು ವೃಕ್ಷಗಳ ಆಕರ್ಷಕ ಕಾಡುಗಳಿವೆ . ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ನದಿ ಪ್ರದೇಶಗಳಲ್ಲಿ ಅತಿ ನಿಬಿಡವಾದ ಉಷ್ಣವಲಯದ ಕಾಡುಗಳಿವೆ . ಅರಣ್ಯಗಳ ಉಪಯೋಗ ಕಾಡುಗಳು ಮಳೆ ಬೀಳಲು ಸಹಾಯಕವಾಗಿವೆ . ಗಾಳಿಯ ಹೊಡೆತ , ನೀರಿನ ಕೊರತೆಗಳಿಂದ ರಕ್ಷಿಸಿ ರಕ್ಷಿಸಿ ಮಣ್ಣಿನ ಫಲವತ್ತತೆಯನ್ನು ಅರಣ್ಯಗಳು ರಕ್ಷಿಸುತ್ತವೆ . ನೆಲದಲ್ಲಿ ನೀರಿನ ತೇವ ಬೇಗ ಆರದಂತೆ ಮಾಡುತ್ತವೆ . ಸುತ್ತಲಿನ ಪ್ರದೇಶದ ಹವಾಗುಣದ ಮೇಲೆ ಪ್ರಭಾವ ಬೀರುತ್ತವೆ . ಬೇರೆ ಬೇರೆ ಕಾರಣಗಳಿಂದ ಭೂಮಿಯಲ್ಲಿ ಹುದುಗಿಹೋದ ಅರಣ್ಯಗಳು ಕಾಲಾಂತರದಲ್ಲಿ ಕಲ್ಲಿದ್ದಲು , ಕಲ್ಲೆಣ್ಣೆಗಳಂಥ ಇಂಧನವಾಗಿ ಮಾರ್ಪಡುತ್ತವೆ . ಅನೇಕ ಸಸ್ಯಜನ್ಯ ತೈಲಗಳು ಅರಣ್ಯದಿಂದ ದೊರೆಯುತ್ತವೆ . ಕಾಗದ , ಗಂಧದ ಎಣ್ಣೆ ಅರಗು , ಕರ್ಪೂರದಂತಹ ದ್ರವ್ಯಗಳ ಕೈಗಾರಿಕೆಗಳಿಗೆ ಕಾಡುಗಳು ಅತ್ಯಗತ್ಯ . ಬಿದಿರು , ಮರಮುಟ್ಟು , ಗೋಂದು , ರಾಳ , ಸಾಂಬಾರ ಜಿನಿಸು ಇತ್ಯಾದಿ ಜೀವನೋಪಯೋಗಿ ವಸ್ತುಗಳು , ಚರ್ಮ ದಂತ , ಮಾಂಸ ಇತ್ಯಾದಿ ಅರಣ್ಯವಾಸಿ ಪ್ರಾಣಿಗಳಿಂದ ದೊರೆಯುತ್ತವೆ himಅರಣ್ಯ ಸಂರಕ್ಷಣೆ ಅರಣ್ಯಗಳ ಸಂರಕ್ಷಣೆ ಅತಿ ಮುಖ್ಯವಾದುದು . ಬೀಳಬಹುದಾದ ಮರಗಳನ್ನು ಗುರುತಿಸಿ ಅದನ್ನು ಕಡಿದು ಅದರ ಜಾಗದಲ್ಲಿ ಉಪಯೋಗಿ ಹೊಸ ಗಿಡಗಳನ್ನು ನೆಡಬೇಕು . ಆರಿಸಿದ ಗಿಡಗಳಿಲ್ಲದಿದ್ದರೆ ಆರಿಸಿದ ಬೀಜಗಳನ್ನಾದರೂ ಬಿತ್ತಬೇಕು . ಅರಣ್ಯದಲ್ಲಿ ವಾಸಿಸುವ ಪ್ರಾಣಿಪಕ್ಷಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ . ಬೇಟೆಯಾಡಲು ನಿರ್ದಿಷ್ಟ ಜಾಗವನ್ನು ಗೊತ್ತು ಮಾಡುವುದರಿಂದ ಪ್ರಾಣಿಪಕ್ಷಿ ಸಂರಕ್ಷಣೆ ಸಾಧ್ಯವಾಗುತ್ತದೆ . ಕಾಡುಗಳಲ್ಲಿ ಸಸ್ಯಗಳು ಚೆನ್ನಾಗಿ ಬೆಳೆಯುವಂತೆ , ಸುರಕ್ಷಿತವಾಗಿ ಉಳಿಯುವಂತೆ ನೋಡಿಕೊಳ್ಳಬೇಕು . ಕಾಡಿಚ್ಚು ಹರಡದಂತೆ , ಮರಗಳಿಗೆ ರೋಗಗಳು ತಗುಲದಂತೆ ಎಚ್ಚರ ವಹಿಸಬೇಕು . ಉಪಸಂಹಾರ ಹೊಸ ಸಸಿಗಳನ್ನು ಸರಿಯಾಗಿ ನೆಡುವುದು , ಗುಡ್ಡ , ದಿನ್ನೆಗಳಲ್ಲಿ ಹೊಸದಾಗಿ ಅರಣ್ಯಗಳನ್ನು ಹಬ್ಬಿಸುವುದು , ಅರಣ್ಯ ಸಂರಕ್ಷಣೆಯ ಕೆಲವು ವಿಧಾನಗಳು.ದನ , ಕುರಿ , ಆಡು , ಚಿಗರೆ ಇತ್ಯಾದಿ ಪ್ರಾಣಿಗಳು ಚಿಕ್ಕ ಗಿಡಗಳ ಎಲೆಗಳನ್ನು ತಿನ್ನದಂತೆ ಕಾಪಾಡಬೇಕು . ಆನೆಗಳು ಗಿಡಗಳನ್ನು ತುಳಿದು ಹಾಳು ಮಾಡಬಹುದು . ಅದರಿಂದ ರಕ್ಷಿಸಲು ಗಿಡಗಳಿಗೆ ಬೇಲಿ , ಇತ್ಯಾದಿ ಕಟ್ಟುವುದು ಒಳ್ಳೆಯದು .