English, asked by keshavgargritu8624, 11 months ago

Mahatma Gandhi in the kannada

Answers

Answered by Anonymous
8

Answer:

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ[೧] ಯವರು ೧೮೬೯ರ ಅಕ್ಟೋಬರ್ ೨ ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು.

ಅವರ ತಂದೆ ಕರಮ್‌ಚಂದ್ ಗಾಂಧಿ(೧೮೨೨-೧೮೮೫)ಯವರು, ಹಿಂದೂ ಮೋಧ್‌ ಸಮುದಾಯದವರಾಗಿದ್ದು, ಬ್ರಿಟಿಷ್‌ ಭಾರತದ ಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದ ದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು.[೨]

ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ ವೈಷ್ಣವ ಸಮುದಯದವರಾಗಿದ್ದು, ಕರಮ್‌ಚಂದ್‌ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು.[೩] ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು;

ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, ಸಸ್ಯಾಹಾರ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.

ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ.

ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.[೪][೫] ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು ವ್ಯವಸ್ಥೆಗೊಳಿಸಲಾದ ಒಂದು ಬಾಲ್ಯ ವಿವಾಹಸಮಾರಂಭದಲ್ಲಿ, ೧೩ ವರ್ಷದ ಮೋಹನ್‌ದಾಸ್‌ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು)[೬]

Similar questions