Mahila sabalikaran essay in kannada wiki
Answers
ಮಹಿಳಾ ಸಬಲೀಕರಣ
ಮಹಿಯರಲ್ಲಿ ಬೌದ್ಧಿಕ, ರಾಜಕೀಯ,ಸಾಮಾಜಿಕ , ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ, ಸಶಕ್ತತೆ ಎನ್ನುತ್ತಾರೆ.ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ, ಅವರ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆಗಿರುತ್ತದೆ. ಸಬಲೀಕರಣ ಸಶಕ್ತತೆ ಎಂದರೆ, ಕೆಳಗೆ ಕಾಣಿಸಿದ ಅಂಶಗಳಲ್ಲಿ ಒಟ್ಟಾರೆಯಾಗಿ ಅವರ ಅರ್ಹತೆ ಸಾಮರ್ಥ್ಯವನ್ನು ಹೆಚ್ಚಿಸುವುದು.ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು.ಮಾಹಿತಿ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದುವುದು.ಅವರ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶಗಳನ್ನು ಹೊಂದುವುದು.( ಬರಿ ಹೌದು/ಇಲ್ಲ,ಎರಡರಲ್ಲಿ/ ಅಥವ) ಎನ್ನದಿರುವುದುಒಟ್ಟಿಗೇ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವುದರಲ್ಲಿ ವಿಶ್ವಾಸದಿಂದ ಧೃಡಪಡಿಸುವ ಸಾಮರ್ಥ್ಯವನ್ನು ಹೊಂದುವುದು.ಬದಲಾವಣೆಯನ್ನು ಮಾಡುವುದರಲ್ಲಿ ಧನಾತ್ಮಕ ಭಾವನೆಯನ್ನು ಹೊಂದುವುದು.ಸ್ವಯಂ ಮತ್ತು ಗುಂಪು ಪ್ರಾಬಲ್ಯವನ್ನು ಹೆಚ್ಚಿಸಲು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು.ಪ್ರಜಾ ಪ್ರಭುತ್ವದ ಮಾರ್ಗದಲ್ಲಿ ಇತರರ ಗ್ರಹಿಕೆ ಶಕ್ತಿಯನ್ನು ಬದಲಾಯಿಸುವಂತೆ ಮಾಡುವುದು.ಸ್ವಯಂ ಪ್ರೇರೇಪಿತರಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.ಆತ್ಮಾಭಿಮಾನ ಹೆಚ್ಚು ಮಾಡುವುದರಲ್ಲಿ ಹಾಗೂ ಕಳಂಕದಿಂದ ಪಾರಾಗುವುದರಲ್ಲಿ ತೊಡಗಿಕೊಳ್ಳುವುದು.
hope it helps u plz mark me as brainlist
Answer:
ಇಂದಿನ ಆರ್ಥಿಕ ಬಿಕ್ಕಟ್ಟಿನಲ್ಲಿ, ಮಕ್ಕಳ ಬೆಳವಣಿಗೆಗೆ ಅಗತ್ಶವಾದ ಹಣಕಾಸನ್ನು ಸಾಬೂನು ಅಥವಾ ಲೂದು ಬತ್ತಿಯ ಉತ್ಪಾದನೆಯಿಂದ ಗಳಿಸಲು ಮಹಿಳೆಯು ಅನೇಕ ಸಾಮಾಜಿಕ ಸವಾಲುಗಳನ್ನು ಈ ದಿನ ಎದುರಿಸಬೇಕಾಗಿದೆ. ಹಾಗಾಗಿ ಮಹಿಳೆಯು ತಾನು ವಹಿಸುತ್ತಿರುವ ಅನೇಕ ಪಾತ್ರಗಳಲ್ಲಿ ಬಹಳ ಕ್ರಿಯಾತ್ಮಕವಾಗಿರುವುದು ಕಂಡು ಬಂದಿದೆ. ಮಹಾರಾಷ್ಟ್ರದ ವಾರ್ವಾರ್ಹೆರೆ ಎಂಬ ಗ್ರಾಮದಲ್ಲಿ ಮಧ್ಯಪಾನ ಮತ್ತು ಮಾದಕ ದ್ರವ್ಶಗಳನ್ನು ಬಹಿಷ್ಕರಿಸಲು 400 (ನಾಲ್ಕು ನೂರು) ಮಹಿಳೆಯರು ತಮ್ಮ ಧ್ವನಿ ಏರಿಸಿ ಪ್ರತಿಭಟನೆ ನಡೆಸಿದರು. ಶೌಚಾಲಯಗಳ ಕೊರತೆಯಿಂದ ಮಹಿಳೆಯರು ವರ್ಷಗಟ್ಟಲೆ (ದೀರ್ಘಕಾಲದವರೆಗೆ) ಅನಾರೋಗ್ಶದಿಂದ ಬಳಲಬೇಕಾಗಿದೆ ಮತ್ತು ಕಡ್ಡಾಯವಾಗಿ ಹೊರಗಿನ ಮೈದಾನವನ್ನು, ಖಾಲೀ ಜಾಗಗಳನ್ನೂ ಬಳಸಬೇಕಾಗಿದೆ.
ಪ್ರಸ್ತುತ ಸಾಮಾಜಿಕ ಸವಾಲುಗಳನ್ನು ಎದುರಿಸಲು ಹಾಗೂ ಮನಸ್ಸಿನ ಒತ್ತಡವನ್ನು ನಿವಾರಿಸಲು ಅಗತ್ಯವಾದ ಸಾಧನಗಳು ಮತ್ತು ತಂತ್ರಗಳನ್ನು ಒದಗಿಸಿ, ಜೀವನಕಲಾಕೇಂದ್ರವು ಮಹಿಳೆಯರನ್ನು ಸಶಕ್ತಗೊಳಿಸುತ್ತಿದೆ. ಮಹಿಳೆಯರು ಎದುರಿಸುವ ಸವಾಲುಗಳಿಗೆ ಪ್ರಾಯೋಗಿಕವಾಗಿ ತಾವೇ ಪರಿಹಾರವನ್ನು ಕಂಡುಹಿಡಿಯಲು ಪ್ರೋತ್ಸಾಹ ಕೊಟ್ಟು ಪ್ರತಿಯೊಬ್ಬರೂ ತಮ್ಮದೇ ವಿವೇಚನಾಶಕ್ತಿಯಿಂದ ಸ್ವಾವಲಂಬಿಯಾಗುವಂತೆ ಮಾಡುತ್ತದೆ