India Languages, asked by udaysinghus5530, 5 months ago

Mahileyara samakalina badhukina srigala kurithu prabhandha

Answers

Answered by Anonymous
2

Explanation:

ಈ ಹಿಂದಿಗಿಂತಲೂ ಮಹಿಳೆಯರು . ಹತ್ತು ವರ್ಷದಿಂದೀಚೆ (2004) ಭಾರತೀಯ ಉದ್ಯಮ ಕ್ಷೇತ್ರದಲ್ಲಿ, ರಾಜಕೀಯ, ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಗಣನೀಯವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಸಮಾಜದ ಜವಾಬ್ದಾರಿಯುತ ಸ್ಥಾನ ಗಳಲ್ಲಿ ಪಾತ್ರವಹಿಸುವ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಉದ್ಯಮಗಳಲ್ಲಿ ಇವರ ಪಾಲು ಅಧಿಕ. ಕಳೆದ ಆರು ವರ್ಷಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಶೇಕಡಾ 50ರಷ್ಟು ಹೆಚ್ಚಾಗಿದೆ ( ‘ಮಾರ್ಕೆಟ್‌ಕಾಲ್ಸ್‌ ಟೆಕ್ನಾಲಜಿ ಸಂಸ್ಥೆ’ ನಡೆಸಿರುವ ಅಧ್ಯಯನ). ಆದರೆ ಮಹಿಳೆಯರನ್ನು ಕುರಿತಂತೆ ಸಮಸ್ಯೆಗಳೂ ಇವೆಬಾಲ್ಯವಿವಾಹವೆಂಬ ತೊಡಕು

ವಿವಾಹವಾಗಲು ಕಾಯ್ದೆ ಪ್ರಕಾರ ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷ ತುಂಬಿರಬೇಕು.

ಮಕ್ಕಳ ಹಕ್ಕುಗಳ ಸಂಸ್ಥೆಯ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ಮಕ್ಕಳಲ್ಲಿ ಇಬ್ಬರು ಬಾಲ್ಯ ವಿವಾಹವಾಗುತ್ತಿದ್ದಾರೆ.

೨೦೧೧ರ ಜನಗಣತಿ

ರಾಜ್ಯದಲ್ಲಿರುವ 3.4 ಕೋಟಿ ವಿವಾಹಿತರಲ್ಲಿ 8.26 ಲಕ್ಷ ಮಂದಿ ಹತ್ತು ವರ್ಷ ತುಂಬುವ ಮುಂಚೆಯೇ ವಿವಾಹವಾಗಿರುವ ಸಂಗತಿ ಜನಗಣತಿಯಿಂದ ಬೆಳಕಿಗೆ ಬಂದಿದೆ.

18 ವರ್ಷ ತುಂಬುವ ಮುನ್ನ 23.3 ಲಕ್ಷ ಮಂದಿವಿವಾಹವಾಗಿದ್ದಾರೆ. ಜನಗಣತಿ ಆಯೋಗ ಈಚೆಗೆ ಬಿಡುಗಡೆ ಮಾಡಿರುವ 2011ರ ಜನಗಣತಿಗೆ ಸಂಬಂಧಿಸಿದ ‘ಕರ್ನಾಟಕದಲ್ಲಿ ವಿವಾಹಿತರ ಒಟ್ಟು ಸಂಖ್ಯೆ ಹಾಗೂ ಆ ಸಂದರ್ಭದಲ್ಲಿ ಅವರ ವಯಸ್ಸು’ ಎಂಬ ವರದಿಯಲ್ಲಿ ಈ ಅಂಶ ಗೊತ್ತಾಗಿದೆ.

1.86 ಕೋಟಿ ವಿವಾಹಿತ ಮಹಿಳೆಯರಲ್ಲಿ ಇನ್ನೂ 10 ವರ್ಷ ತುಂಬದ 5.75 ಲಕ್ಷ ಮಂದಿ ವಿವಾಹ ಜೀವನಕ್ಕೆ ಕಾಲಿಟ್ಟಿರುವುದು ವರದಿಯಲ್ಲಿ ನಮೂದಾಗಿದೆ. ಕಳೆದ ದಶಕವೊಂದರಲ್ಲೇ 3 ಸಾವಿರ ಬಾಲಕಿಯರು ವಿವಾಹವಾಗಿದ್ದಾರೆ. ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಪಿಡುಗು ಕ್ರಮೇಣ ಕಡಿಮೆಯಾಗುತ್ತಿದ್ದರೂ ಬಾಲ್ಯ ವಿವಾಹಿತರು ಹೆಚ್ಚಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜಸ್ತಾನ ಮೊದಲ ಸ್ಥಾನ ಹೊಂದಿದೆ.

ಮೈಸೂರು ಜಿಲ್ಲೆಯೊಂದರಲ್ಲಿ 12,600 ಸಾವಿರ ಪುರುಷರು ಹಾಗೂ 29,200 ಸಾವಿರ ಮಹಿಳೆಯರು 10 ವರ್ಷ ತುಂಬುವ ಮೊದಲೇ ಮದುವೆಯಾಗಿದ್ದಾರೆ. ಕಳೆದ ದಶಕದಲ್ಲಿ 66 ಬಾಲಕಿಯರು ಹಾಗೂ 8 ಬಾಲಕರು ಮದುವೆಯಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿಯೇ ಬಾಲ್ಯ ವಿವಾಹಿತರು ಅಧಿಕ. 2011ರ ವರೆಗಿನ ಜನಗಣತಿ ಪ್ರಕಾರ ಇಲ್ಲಿರುವ 55.1 ಲಕ್ಷ ವಿವಾಹಿತರಲ್ಲಿ 1.03 ಲಕ್ಷ ಮಂದಿ ಹತ್ತು ವರ್ಷ ತುಂಬುವ ಮುನ್ನವೇ ವಿವಾಹವಾಗಿರುವುದು ವರದಿಯಲ್ಲಿ ಉಲ್ಲೇಖ ವಾಗಿದೆ.ಉತ್ತರ ಪ್ರದೇಶ, ಕೇರಳ ಮತ್ತ ಗುಜರಾತು ರಾಜ್ಯಗಳಲ್ಲಿ ಮಹಿಳೆಯರ ಉದ್ಯಮ ಬಹಳ ಮುಂದಿದೆ. ಒಟ್ಟು ಉದ್ಯಮಗಳ ಸಂಖ್ಯಯೇ ಕಡಿಮೆ ಇದ್ದಾಗ ಶೇಕಡಾವಾರು ಹೆಚ್ಚು ಕಾಣುವುದು

Similar questions