Environmental Sciences, asked by shankrayymathapati, 4 days ago

mangoes Information in Kannada ​

Answers

Answered by raskarsantosh240
0

Answer:

ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ, ಜೊತೆಯಲ್ಲಿಯೇ ಬರುತ್ತಿದೆ ಉಪ್ಪೂಕಾರ ಹಚ್ಚಿದ ಸೌತೇಕಾಯಿ, ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿದ ಮಜ್ಜಿಗೆ, ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನುವ ಗಿಳಿಮೂತಿ ಮಾವಿನ ಕಾಯಿ... ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ತರಕಾರಿ ಅಂಗಡಿಗಳಲ್ಲಿ ಹಸಿರು ತರಕಾರಿಯ ನಡುವೆ ಕಾಡುಮಾವು ಮತ್ತಿತರ ಹಸಿರು ಮಾವುಗಳೂ ಕಂಡುಬರುತ್ತವೆ.

ಇದನ್ನು ಕಂಡಾಕ್ಷಣ ಗರ್ಭಿಣಿಯರಿಗೆ ಕಡ್ಡಾಯವಾಗಿ ಹುಳಿ ಮಾವನ್ನು ತಿನ್ನಲೇಬೇಕೆಂಬ ಬಯಕೆಯಾಗುತ್ತದೆ. ಉಳಿದವರಿಗೂ ಹಸಿರಾದ ಹುಳಿಮಾವನ್ನು ಉಪ್ಪು ಖಾರ ಹಾಕಿ ತಿನ್ನುವ ಬಯಕೆಯಾಗುತ್ತದೆ. ಹಾದಿಬದಿಯಲ್ಲಿ ನಿಧಾನಕ್ಕೆ ಒಂದೊಂದಾಗಿ ಮಾವಿನ ಕಾಯಿಗಳ ಗಾಡಿಗಳು ಕಾಣಿಸಿಕೊಳ್ಳುತ್ತವೆ. ಅಗ್ಗವೂ, ಆರೋಗ್ಯಕರವೂ ಆಗಿರುವ ಈ ಹಸಿರು ಮಾವಿನ ಕಾಯಿಗಳು ಸಮಾಜದ ಎಲ್ಲರ ಅಚ್ಚುಮೆಚ್ಚಿನ ಅಹಾರವಾಗಿದೆ. ಹಣ್ಣುಗಳ ರಾಜ ಮಾವು. ಏಕೆಂದರೆ ಸಿಹಿಯಲ್ಲಿಯೂ, ಪೋಷಕಾಂಶಗಳಲ್ಲಿಯೂ ಮಾವಿಗೆ ಸರಿಸಾಟಿಯಾದ ಹಣ್ಣು ಇನ್ನೊಂದಿಲ್ಲ. ಆದ್ದರಿಂದ ಮಾವಿನ ಕಾಯಿ ಮತ್ತು ಹಣ್ಣಿನ ಆಯ್ಕೆ ಮಾಡಿಕೊಳ್ಳಬೇಕಾದರೆ ಆರೋಗ್ಯದ ಬಗ್ಗೆ ಕೊಂಚ ಗಮನವಿಡುವುದು ಅಗತ್ಯ. ಮಾವಿನ ಹಣ್ಣಿನಲ್ಲಿರುವ ಸಿಹಿಯ ಕಾರಣ ಮಧುಮೇಹಿಗಳಿಗೆ ತರವಲ್ಲ. ಆದರೆ ಮಧುಮೇಹಿಗಳು ಮಾವಿನಕಾಯಿಯನ್ನು ಸೇವಿಸಬಹುದು.ಮಾವಿನ ಹಣ್ಣುಗಳಲ್ಲಿರುವ ಪೋಷಕಾಂಶಗಳ ಕಾರಣ ತೂಕ ಹೆಚ್ಚುವ ಸಂಭವವಿರುವುದರಿಂದ ತೂಕ ಇಳಿಸಿಕೊಳ್ಳುವ ವ್ಯಾಯಾಮದ ಮತ್ತು ಆಹಾರದ ಅವಧಿಯಲ್ಲಿರುವವರು ಹಣ್ಣಿನ ಬದಲು ಕಾಯಿ ತಿನ್ನುವುದು ಒಳ್ಳೆಯದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಕಾಯಿಯನ್ನು ತಿಂದರೆ ಹುಳಿರಸದ ಪ್ರಮಾಣ ಹೆಚ್ಚಾಗುವ ಕಾರಣ ಗಂಟಲ ಕೆರೆತ, ಅಜೀರ್ಣ, ಅತಿಸಾರ, ಮಲಬದ್ದತೆ, ಹೊಟ್ಟೆನೋವು ಮೊದಲಾದ ತೊಂದರೆಗಳು ಎದುರಾಗಬಹುದು. ಇನ್ನೊಂದು ವಿಷಯವೆಂದರೆ ಮಾವಿನ ಕಾಯಿಯನ್ನು ಕತ್ತರಿಸಿದಾಗ ಒಸರುವ ಹಾಲಿನಂತಹ ರಸ (ವಿಶೇಷವಾಗಿ ತೊಟ್ಟಿನ ಬಳಿ) ಅತಿ ಆಮ್ಲೀಯವಾಗಿದ್ದು ಜೀರ್ಣಕ್ರಿಯೆಯಲ್ಲಿ ತೊಂದರೆಯುಂಟುಮಾಡುತ್ತದೆ. ಬಾಯಿಯಲ್ಲಿ ನೇರವಾಗಿ ಈ ರಸ ಬಿದ್ದರೆ ಬಾಯಿಯಲ್ಲಿಯೂ ಸೋಂಕು ಉಂಟುಮಾಡಬಹುದು. ಆದ್ದರಿಂದ ಈ ರಸ ಪೂರ್ಣವಾಗಿ ಸೋರಿ ಹೋಗುವುದನ್ನು ಖಚಿತಪಡಿಸಿದ ಬಳಿಕವೇ ತಿನ್ನುವುದು ಉತ್ತಮ. ಮಾವಿನ ಕಾಯಿಯ ಉತ್ತಮ ಗುಣಗಳನ್ನು ಈಗ ನೋಡೋಣ....ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಮಾವು ಅತಿ ಹೆಚ್ಚು ವಿಟಮಿನ್‍ಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ. ಅಲ್ಲದೆ ಮಾವಿನಲ್ಲಿ ರಂಜಕ (4% ಪ್ರತಿ 156 ಮಿ.ಗ್ರಾಂ) ಮತ್ತು ಮ್ಯಾಗ್ನಿಷಿಯಂ (2% ಪ್ರತಿ 9 ಮಿ.ಗ್ರಾಂ) ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ.ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ಮಾವಿನಲ್ಲಿ ಪೆಕ್ಟಿನ್ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೆಕ್ಟಿನ್ ಅಂಶ ಪ್ರೊಸ್ಟ್ರೇಟ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

Similar questions