Meaning and various definitions of education in kannada
Answers
1. instruction, schooling, learning. Education, training imply a discipline and development by means of study and learning. Education is the development of the abilities of the mind (learning to know): a liberal education. ... Education, culture are often used interchangeably to mean the results of schooling.
Definition of Kannada
: the major Dravidian language of Karnataka, southern India
First Known Use of Kannada
1856, in the meaning defined above
History and Etymology for Kannada
Kannada kannaḍa
ಅನೇಕ ದೇಶಗಳಲ್ಲಿ ಶಿಕ್ಷಕರು, ಪೋಷಕರನ್ನೇ ಗುಂಡಿಕ್ಕಿ ಕೊಂದ ಮಕ್ಕಳು, ದೆಹಲಿಯ ಪ್ರತಿಷ್ಠಿತ ಪ್ರೌಢಶಾಲೆಯೊಂದರ ಮಕ್ಕಳ ಲೈಂಗಿಕ ಪ್ರಕರಣ, ದೇಶವನ್ನು ಕಾಯುವ ಯೋಧರೇ ಹೆಣಗಳಿಗೆ ಟೊಮೆಟೋ ಸಾಸ್ ಹಚ್ಚಿ ಅದನ್ನು ಎನ್‍ಕೌಂಟರ್‍ನಂತೆ ಚಿತ್ರಿಸಿ ಪದಕ ಪಡೆದುಕೊಳ್ಳುವ ಹಪಾಹಪಿ, ನಮ್ಮನ್ನು ಕಾಯುವ ಸರ್ಕಾರವನ್ನೇ ಅವ್ಯವಸ್ಥೆಗೊಳಿಸುವಂತಹ ನಕಲೀ ನೋಟು, ಛಾಪಾಕಾಗದಗಳ ಪ್ರಕರಣಗಳು, ಪೂಜನೀಯ ಸ್ಥಾನದಲ್ಲಿರುವ ಅನೇಕ ಸ್ವಾಮಿಗಳ ಕಾಮಲೀಲೆಗಳು, ವೇಶ್ಯಾವಾಟಿಕೆಯ ದಂಧೆಗಳು... ಇವುಗಳೆಲ್ಲಾ ಇಂದಿನ ದಿನಪತ್ರಿಕೆಗಳಲ್ಲಿ ಆಗಾಗ (ಹೆಚ್ಚುಕಡಿಮೆ ಪ್ರತಿದಿನವೂ!) ಕಾಣಿಸಿಕೊಳ್ಳುವ ತಲೆಬರಹಗಳು. ಇದರ ಬಗ್ಗೆ ಚಿಂತನೆ ನೆಡೆಸಿದಾಗ ನಮ್ಮ ಸಮಾಜವು ಅಧಃಪತನಕ್ಕೀಡಾಗಿರುವ ಅಂಶವು ಗೋಚರಿಸಿ, ಗಾಂಧೀಜಿಯವರು ಕಂಡ "ರಾಮರಾಜ್ಯ"ದ ನಿರೀಕ್ಷೆಯಿಟ್ಟುಕೊಂಡಿರುವವರಿಗೆ ಭ್ರಮನಿರಸನವನ್ನುಂಟುಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ಇವುಗಳಿಗೆಲ್ಲಾ ಮೌಲ್ಯಗಳ ಬದಲಾಗಿ ಸ್ವಾರ್ಥಲಾಲಸೆಗೆ, ಭೋಗಜೀವನಕ್ಕೆ ಹಾಗೂ ಇದನ್ನು ಪೂರೈಸಲು ಬೇಕಾದ ಹಣಕ್ಕೆ ಬೆಲೆಕೊಡುತ್ತಿರುವ ಸಮಾಜ, ಅಂದರೆ ಈ ಸಿದ್ಧಾಂತದತ್ತ ವಾಲಿರುವ ನಾವುಗಳೇ ಕಾರಣವೆಂದರೆ ಕೆಲವರು ಸಿಟ್ಟಾಗಬಹುದು! ಈ ಪರಿಸ್ಥಿತಿಯು ಸುಧಾರಿಸಬೇಕಾದರೆ ನೈತಿಕ ಮೌಲ್ಯಗಳಿಗೆ ಗೌರವವನ್ನಿತ್ತು, ಪರಸ್ಪರರಿಗೆ ಸಹಕಾರ ನೀಡುವಂತಹ ಸಾರಯುತ ಸಮಾಜದ ನಿರ್ಮಾಣವಾಗಬೇಕು. "ಬೆಳೆಯುವ ಸಿರಿ ಮೊಳಕೆಯಲ್ಲಿಯೇ"; ಆದ್ದರಿಂದ ನೀತಿವಂತರಾದ ಯುವಜನತೆಯ ನಿರ್ಮಾಣವಾದರೆ, ಅದು ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಸುಭದ್ರ ಅಡಿಪಾಯವಾಗುತ್ತದೆ. ಇದೆಲ್ಲಾ ರಾತ್ರೋರಾತ್ರಿಯಾಗುವ ಕೆಲಸವಲ್ಲ. ಬಹುಕಾಲದಿಂದ ಭೋಗದೆಡೆಗೆ ಜಾರಿರುವ ಸಮಾಜವನ್ನು ನೀತಿಯ ಚೌಕಟ್ಟಿಗೆ ಒಳಪಡಿಸಲು ಅಪಾರ ಪರಿಶ್ರಮದ ಅಗತ್ಯವಿದೆ. “If wealth is lost, nothing is lost; If health is lost, something is lost; but, if the character is lost, everything is lost."