India Languages, asked by abhayarungowda1, 2 months ago

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ meaning in kannada (ಹಚ್ಚೇವು ಕನ್ನಡದ ದೀಪ / Hacchevu kannadada deepa poem)

Answers

Answered by nishanikumari53
1

Answer:

ಹಚ್ಚೇವು ಕನ್ನಡದ ದೀಪ / Hacchevu kannadada deepa

ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ

ಕೂಡಿರುವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು

ಅಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ ಗಡಿನಾಡೆ ಇರಲಿ

ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರವ ತೆರೆದೇವು ಮನವ

ಎರೆದೇವು ಒಲವ ಹಿರಿನೆನಪಾ

ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು

ದೀಪಗಳ ಬೆಳಕ ಬೀರೇವು

ಹಚ್ಚಿರುವ ದೀಪದಲಿ ತಾಯರೂಪ

ಅಚ್ಚಳಿಯದಂತೆ ತೋರೇವು

ಒಡಲೊಳಲ ಕೆಚ್ಚಿನ ಕಿಡಿಗಳನ್ನು

ಗಡಿನಾಡಿನಾಚೆ ತೂರೇವು

ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ

ನಾಡೊಲವೆ ನೀತಿ ಹಿಡಿನೆನಪಾ

ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು

ಎಲ್ಲಾರು ಒಂದುಗೂಡೇವು

ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ

ಮಾತೆಯನು ಪೂಜೆಮಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ

ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ ಕಡೆದೇವು ಇರುಳ

ಪಡೆದೇವು ತಿರುಳ ಹಿರಿನೆನಪಾ

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

Explanation:

please mark me as brainlist

Similar questions