morel stories
in kannada
Answers
Answer:
ಹರೀಶ್ ಕುಮಾರ್
ಒಮ್ಮೆ ವಿತಂಡವಾದಿಯೊಬ್ಬ ಗುರುವಿನ ಬಳಿಗೆ ಬಂದು ವಿಷಯವೊಂದರ ಬಗ್ಗೆ ಅನವಶ್ಯಕ ವಾದಕ್ಕಿಳಿದ. ಗುರು ಸಾವಧಾನಚಿತ್ತದಿಂದ ಎಷ್ಟೇ ಸರಳವಾಗಿ ಬಿಡಿಸಿ ಹೇಳುತ್ತಿದ್ದರೂ ಅವನು ಒಪ್ಪದೆ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿ ವಿತಂಡವಾಗಿ ವಾದ ಮಾಡುತ್ತಿದ್ದ.
ಅವನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ ಗುರುಗಳು ಒಳಗೆ ಹೋಗಿ ಚಹಾ ಸಿದ್ಧಪಡಿಸಿ ತಂದು ಅವನ ಮುಂದೆ ಒಂದು ಖಾಲಿ ಲೋಟವನ್ನಿಟ್ಟು ಅದರೊಳಗೆ ಚಹಾ ಸುರಿಯಲಾರಂಭಿಸಿದರು. ಲೋಟ ತುಂಬಿ ಚಹಾ ಹೊರಗೆ ಚೆಲ್ಲುತ್ತಿದ್ದರೂ ಗುರುಗಳು ಮಾತ್ರ ಚಹಾವನ್ನು ಲೋಟಕ್ಕೆ ಸುರಿಯುತ್ತಲೇ ಇದ್ದರು. ಗಲಿಬಿಲಿಗೊಂಡ ವಿತಂಡವಾದಿ 'ಇದೇನು ಗುರುಗಳೇ ಲೋಟ ತುಂಬಿದ್ದರೂ ಸುರಿಯುತ್ತಲೇ ಇದ್ದೀರಲ್ಲಾ?' ಎಂದು ಪ್ರಶ್ನಿಸಿದ. ಆಗ ಗುರು 'ಅದರಲ್ಲೇನು ತಪ್ಪಿದೆ?' ಎಂದು ಮರುಪ್ರಶ್ನಿಸಿದರು.
ಅದಕ್ಕೆ ವಿತಂಡವಾದಿಯು 'ತುಂಬಿರುವ ಲೋಟ ಖಾಲಿಮಾಡದ ಹೊರತು ಚಹಾ ಹೇಗೆ ಪುನಃ ಲೋಟದೊಳಗೆ ಹೋದೀತು' ಎಂದು ಕೇಳಿದ. ಅದಕ್ಕೆ ಗುರು 'ನೀನೂ ಅಷ್ಟೇ. ಈ ಚಹಾ ಲೋಟದಂತೆಯೇ ಆಗಿದ್ದೀಯಾ. ನಿನ್ನದೇ ಅಭಿಪ್ರಾಯ, ಆಲೋಚನೆಗಳಿಂದ ತುಂಬಿ ಹೋಗಿದ್ದೀಯಾ. ಹಾಗಾಗಿ ನಾನು ಹೇಳುವುದು ನಿನ್ನ ತಲೆಯೊಳಗೆ ಇಳಿಯುತ್ತಿಲ್ಲ. ಮೊದಲು ಬೇಡವಾದದ್ದನ್ನೆಲ್ಲಾಹೊರಹಾಕು. ನಂತರ ನಾನು ಹೇಳುವ ಮಾತು ನಿನ್ನ ತಲೆಯ ಒಳಗೆ ಹೋಗುತ್ತದೆ' ಎಂದು ಬುದ್ಧಿ ಹೇಳಿದರು. ತನ್ನ ತಪ್ಪಿನ ಅರಿವಾದ ವಿತಂಡವಾದಿಯು ಅಂದಿನಿಂದ ವಾದ ಮಾಡುವುದನ್ನೇ ನಿಲ್ಲಿಸಿದ.