Naanu mukhyamantri yadare speech
Answers
ನಾನು ಪ್ರಧಾನ ಮಂತ್ರಿಯಾಗಿದ್ದರೆ ನೋಟ್ ಬ್ಯಾನ್ ಪ್ರಸ್ತಾಪವೇನಾದರೂ ನನ್ನ ಮುಂದಿದ್ದರೆ ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂದು ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನೋಟು ರದ್ಧತಿ ನಿರ್ಧಾರ ನಿಮ್ಮ ಮುಂದಿದ್ದರೆ ಯಾವ ರೀತಿ ಅದನ್ನು ಅನುಷ್ಠಾನಕ್ಕೆ ತರುತ್ತಿದ್ದಿರಿ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನಾನು ನೋಟು ರದ್ಧತಿ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆ ಪ್ರಸ್ತಾವನೆಯನ್ನು ಯಾರಾದರೂ ನನ್ನ ಮುಂದಿಟ್ಟಿದ್ದರೆ ಅದನ್ನು ಬಾಗಿಲಿನಿಂದ ಆಚೆಗೆ ಎಸೆಯುತ್ತಿದ್ದೆ ಎಂದು ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೆ ತಂದಿದ್ದ ನೋಟು ಬ್ಯಾನ್ ನಿರ್ಧಾರವನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಅದನ್ನು ವಿರೋಧಿಸಿತ್ತು. ನೋಟು ನಿಷೇಧದ ಮೊದಲನೇ ವರ್ಷಾಚರಣೆಯನ್ನು ಬ್ಲಾಕ್ ಡೇ ಎಂದು ಕೂಡ ಆಚರಿಸಿತ್ತು.
ನವೆಂಬರ್ 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗರಿಷ್ಠ ಮುಖಬೆಲೆಯ 500 ಮತ್ತು 100 ರೂಪಾಯಿ ನೋಟುಗಳನ್ನು ನಿಷೇಧಿಸಿದ್ದರು. (ಏಜೆನ್ಸೀಸ್)