Social Sciences, asked by shivarajhullal, 3 months ago

ಸ್ವತಂತ್ರ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ವಿವರಿಸಿ ಕನ್ನಡದಲ್ಲಿ ವಿವರಿಸಿ ಕನ್ನಡ no English only Kannada​

Answers

Answered by chinthan59
25

Answer:

ಭಾರತವು ಸ್ವರಾಜ್ಯ (ಸ್ವಯಂ ಆಡಳಿತ , ಕೆಲವೊಮ್ಮೆ ಹೋಂ-ರೂಲ್ ಎಂದೂ, ಸ್ವಾತಂತ್ರ್ಯ ಎಂದೂ ಅನುವಾದಿಸಲಾಗುತ್ತದೆ) ವನ್ನು ಗಳಿಸುವಲ್ಲಿ ಸಂಪೂರ್ಣವಾಗಿ ತನ್ನದೇ ಆದ ಮಾರ್ಗದ ಆಯ್ಕೆಗೆ ಬಹುಮಟ್ಟಿಗೆ ಮಹಾತ್ಮಾ ಗಾಂಧಿ ( ಮಹಾತ್ಮಾ ಎಂದರೆ ಮಹಾನ್ ಆತ್ಮವುಳ್ಳವನು ಎಂದರ್ಥ) ಯವರು ಕಾರಣ. ಗುಜರಾತಿನ ನಿವಾಸಿಯಾದ ಅವರು ಯುನೈಟೆಡ್ ಕಿಂಗ್‍ಡಂ ನಲ್ಲಿ ಶಿಕ್ಷಣ ಪಡೆದರು. ಅವರು ಕಡಿಮೆ ಕಕ್ಷಿಗಾರರನ್ನು ಹೊಂದಿದ್ದ ಹಿಂಜರಿಕೆ ಸ್ವಭಾವದ ವಕೀಲರಾಗಿದ್ದರು. ಬಹುಬೇಗನೆ ಅವರು ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಸಮಾಜದ ಪರವಾಗಿ ನ್ಯಾಯಬದ್ಧ ಕಾರಣಗಳಿಗಾಗಿ ಹೋರಾಟವನ್ನು ಕೈಗೆತ್ತಿಕೊಂಡುದರಿಂದ ಅವರ ವಕೀಲಿ ವೃತ್ತಿಯು ಅತಿ ಕಡಿಮೆ ಅವಧಿಯದ್ದಾಗಿತ್ತು. ೧೮೯೩ರಲ್ಲಿ ಗಾಂಧಿ ದಕ್ಷಿಣ ಆಫ್ರಿಕೆಯಲ್ಲಿ ಒಪ್ಪಂದಕ್ಕೊಳಪಟ್ಟು ಕೆಲಸಮಾಡುವ ಭಾರತೀಯ ಕಾರ್ಮಿಕರನ್ನು ಪ್ರತಿನಿಧಿಸಲು ಬಂದ ಆಹ್ವಾನವನ್ನು ಒಪ್ಪಿಕೊಂಡರು. ಅಲ್ಲಿ ಅವರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜನಾಂಗೀಯ ಪಕ್ಷಪಾತ ವನ್ನು ವಿರೋಧಿಸುತ್ತ ವಾಸ ಮಾಡಿದರು. ಗಾಂಧಿಯವರ ಹೋರಾಟವು ಕೇವಲ ಮೂಲಭೂತ ಪಕ್ಷಪಾತ ಮತ್ತು ಕಾರ್ಮಿಕರ ಜತೆ ದುರ್ವ್ಯವಹಾರಗಳ ವಿರುದ್ಧ ಅಷ್ಟೇ ಆಗಿರದೆ ರೌಲತ್ ಕಾಯ್ದೆಗಳಂತಹ ದಮನಕಾರೀ ಪೋಲೀಸು ಕ್ರಮಗಳ ವಿರುದ್ಧವೂ ಆಗಿತ್ತು. ಅನೇಕ ತಿಂಗಳುಗಳ ಅಹಿಂಸಾತ್ಮಕ ಪ್ರತಿಭಟನೆ ಮತ್ತು ಸಾವಿರಾರು ಕರಾರುಕೂಲಿಗಳ ಬಂಧನದ ನಂತರ ದಕ್ಷಿಣ ಆಫ್ರಿಕೆಯ ಆಡಳಿತಗಾರನಾದ ಜನರಲ್ ಜನ್ ಸ್ಮಟ್ಸ್ ನು ಎಲ್ಲ ಕೈದಿಗಳನ್ನು ಬಿಡುಗಡೆ ಮಾಡಿ ದಮನಕಾರಿ ಕಾನೂನನ್ನು ರದ್ದು ಮಾಡಿದನು. ಇದು ಪುಕ್ಕಲುತನವನ್ನು ಒದ್ದೋಡಿಸಿ, ಧೈರ್ಯವನ್ನು ತುಂಬಿದ ಘಟನೆಯಾಗಿ ಪರಿಣಮಿಸಿ, ಈ ಯುವ ಭಾರತೀಯನಲ್ಲಿ ಕ್ರಾಂತಿಕಲೆಯ ರಕ್ತವನ್ನೂ ಮುಂದೆ ಮಹಾನ್ ಎಂದು ವಿಖ್ಯಾತವಾಗುವ ಆತ್ಮವನ್ನೂ ತುಂಬಿತು. ಈತನ ದಕ್ಷಿಣ ಆಫ್ರಿಕಾದ ಈ ವಿಜಯ, ತಾಯ್ನಾಡಿನ ಜನಗಳಲ್ಲಿ ಸಂತಸ ತುಂಬಿತು.

೧೯೧೫ರಲ್ಲಿ ಭಾರತಕ್ಕೆ ಹಿಂದಿರುಗಿದ ಈತ ಜನಕ್ಕೆ ಅಪರಿಚಿತನಾದರೂ, ದೇಶಭಕ್ತಿಯ ನವಭಾರತದ ಕನಸೊಂದನ್ನು ಕಟ್ಟಿಕೊಂಡಿದ್ದರು. ಆದರೆ, ಇಲ್ಲಿ ಗಮನಿಸತಕ್ಕ ವಿಷಯವೆಂದರೆ ಗಾಂಧಿಯವರು ಭಾರತದ ಜನತೆಯ ಸಮಸ್ಯೆಗಳಿಗೆ ಬ್ರಿಟಿಷ್ ಸಾಮ್ರಾಜ್ಯದಿಂದ ರಾಜಕೀಯ ಸ್ವಾತಂತ್ರ್ಯವೊಂದೇ ಉತ್ತರ ಎಂದು ಇನ್ನೂ ನಂಬಿರಲಿಲ್ಲ. ಹಿಂದಿರುಗಿದ ನಂತರ, ಸಾಮ್ರಾಜ್ಯದ ಪ್ರಜೆಯಾಗಿ, ಸ್ವಾತಂತ್ರ್ಯ ಹಾಗೂ ರಕ್ಷಣೆಯನ್ನು ಬಯಸುವವನು ದ್ವಿತೀಯ ವಿಶ್ವಯುದ್ಧದಲ್ಲಿ ಸಾಮ್ರಾಜ್ಯದ ರಕ್ಷಣೆಯಲ್ಲಿ ಭಾಗವಹಿಸದೆ ಇರುವುದು ಸರಿಯಲ್ಲ ಎಂದು ನೇರವಾಗಿಯೇ ಹೇಳಿದ್ದರು.

ಕಾಂಗ್ರೆಸ್ ಧುರೀಣರೂ ಹಿರಿಯ ನಾಯಕರೂ ಆಗಿದ್ದ ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯವರ ಗುರುವಾದ ನಂತರ ಗಾಂಧಿಯವರು ವರ್ಷಗಟ್ಟಲೆ ದೇಶದ ಉದ್ದಗಲಕ್ಕೂ ಸಂಚರಿಸಿ, ಭಾರತದ ರಾಜ್ಯ-ನಗರ-ಹಳ್ಳಿಗಳೆಲ್ಲವನ್ನೂ ಸುತ್ತುತ್ತಾ ದೇಶದ ಹಾಗೂ ಜನರ ಸಂಸ್ಕೃತಿ, ರೀತಿ-ನೀತಿ, ಅವರ ಕುಂದು-ಕೊರತೆಗಳ ಬಗ್ಗೆ ತಿಳಿಯಲಾರಂಭಿಸಿದರು. ಗಾಂಧಿಯವರ ಅಹಿಂಸಾತ್ಮಕ ನಾಗರಿಕ ಅಸಹಕಾರದ ತತ್ವಾದರ್ಶಗಳು ಮೊದಮೊದಲು ಕೆಲ ಭಾರತೀಯರಿಗೆ ಹಾಗೂ ಧೀಮಂತ ಕಾಂಗ್ರೆಸ್ ನಾಯಕರಿಗೆ ಅಪ್ರಾಯೋಗಿಕವೆನಿಸಿದವು. ಗಾಂಧಿಯವರ ಮಾತಿನಲ್ಲೇ ಹೇಳುವುದಾದರೆ, "ನಾಗರಿಕ ಅಸಹಕಾರವೆಂದರೆ ಅನೈತಿಕ ಶಾಸನಾದೇಶಗಳ ಸಭ್ಯ ಖಂಡನೆ". ಆದರೆ ಅವರ ಯೋಚನೆಯಂತೆಯೇ ಅದನ್ನು ಅಹಿಂಸಾತ್ಮಕವಾಗಿ ಪಾಲಿಸಲು, ಭ್ರಷ್ಟ ಆಡಳಿತಕ್ಕೆ ಕೊಟ್ಟ ಸಹಕಾರವನ್ನು ಹಿಂಪಡೆಯಬೇಕಿತ್ತು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವಲ್ಲಿ ಗಾಂಧಿಯವರು ಸಫಲರಾಗಿದ್ದು ರೌಲತ್ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ನಡೆಸಿದ ಸತ್ಯಾಗ್ರಹ ಚಳುವಳಿಯ ಮೂಲಕ.

Similar questions