Of class 8th in kannada text book poem -4 bharavase poems summary
Answers
Answer:
make me brainliest
Explanation:
which chapter
Answer:
Answer is in explanation
Explanation:
ಜಗತ್ತಿನ ತಲ್ಲಣಗಳನ್ನು ಮಲ್ಲಿಗೆ ಮತ್ತು ಕೋಗಿಲೆಯ ಸಂಭಾಷಣೆಯ ಮೂಲಕ ವ್ಯಕ್ತಪಡಿಸುವ ಕವನ ಭರವಸೆ.
ಲೋಕವಾರ್ತೆಯನ್ನು ನುಡಿಯುವ ಕೋಗಿಲೆಯ ಧ್ವನಿಯಲ್ಲಿರುವ ನಿರಾಸೆ, ಅವಾಸ್ತವಿಕ ಬದುಕಿನ ಬಗೆಗಿನ ವಿಷಾದ
ಈ ಕವನದ ಒಡಲು. ಇಲ್ಲಿ ಪ್ರಕೃತಿಯ ನೈಜತೆಗೆ ಮನುಷ್ಯನ ಸ್ವಾರ್ಥ ಹೇಗೆ ದಕ್ಕೆಯಾಗುತ್ತಿದೆ ಎಂಬ ಆತಂಕವಿದೆ. ಈ
ಮಣ್ಣಿನ ಗುಣವನ್ನು ಬಿಟ್ಟು ಭ್ರಮೆಯಲ್ಲಿ ಮುಳುಗಿರುವ ವ್ಯಕ್ತಿಯ ಬಗ್ಗೆ ಇಲ್ಲಿ ಸುಪ್ತ ಪ್ರತಿಭಟನೆ ಇದೆ. ಆದರೆ ಅದೇ
ಪ್ರತಿಭಟನೆಯ ಕೊನೆಯಲ್ಲಿ ಆಶಾವಾದದ ಸಾಂತ್ವನವಿದೆ. ಈ ಭೂಮಿ ಬರಡಲ್ಲ. ಅಮರ ಪ್ರೇಮದ ಒರತೆ ಎನ್ನುವ
ಮೂಲಕ ಭೂಮಿಯ ಸಂಜೀವಿನೀ ಗುಣವನ್ನು ಪ್ರಕೃತ ಕವಿತೆಯಲ್ಲಿ ಎತ್ತಿ ಹಿಡಿಯಲಾಗಿದೆ. ಅದೇ ಕವಿತೆಯ ಆಶಯ.
ಅರಳಿ ಮಲ್ಲಿಗೆ ಮೊಗ್ಗು ತನ್ನ ಸುತ್ತಮತ್ತಲಿನ ವಾತಾವರಣದಲ್ಲಿ ಗಂಧವ ಚೆಲ್ಲಿ, ವಸಂತನಾಗಮನ ಸಾರಿದಾಗ
ಮಾಮರದ ರೆಂಬೆಯಲಿ ಕುಳಿತಿದ್ದ ಕೋಗಿಲೆಯು ಬೆರೆಸಿತದರೊಳಗೊಂದು ಕುಕಿಲರಾಗ. ಮಲ್ಲಿ ಗೆಯು ಕೋಗಿಲೆಯ
ಕರೆದಿತ್ತು; “ಪ್ರಿಯ ಗೆಳತಿ ಹಾಡೊಂದ ಹಾಡೇ” ಎಂದು ಕೇಳುತ್ತದೆ. ಏಕೆಂದರೆ ಕೋಗಿಲೆಯು ತನ್ನ ರೆಕ್ಕೆಗಳಿಂದ ಒಂದು
ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ. ಅದರಿಂದ ಅನುಭವದ ಹೊನ್ಗಣಿಯಾಗಿ ಲೋಕವಾರ್ತೆ ಎಲ್ಲವನ್ನೂ
ತಿಳಿದುಕೊಂಡು ಇರುತ್ತದೆ. ಅದರಿಂದ ಮಲ್ಲಿಗೆಯು ಕೇಳುವುದು ಅರ್ಥವಂತಿಕೆಯಾಗಿದೆ. ಆಗ ಕೋಗಿಲೆಯು
“ಏನೆಂದು ಹಾಡಲಿ ನಾನು ಏನ ಅರುಹಲಿ ಚೆಲುವೆ ಬಣ್ಣ ಬೆಡಗಿನ ಮಾತನರಿಯೆ ಕೃತಕತೆಯ ಜಾಲದಲಿ ಸಿಲುಕಿಕೊಂಡಿದೆ
ಜಗವು ನೈಜತೆಗೆ ಇಲ್ಲ ಬೆಲೆಯು” ಎಂದು ಹೇಳುತ್ತದೆ. ಅಂದರೆ ಮನುಷ್ಯನು ನೈಜತೆಗೆ ಬೆಲೆಯನ್ನು ಕೊಡುವುದಿಲ್ಲ
ಕೃತಕತೆಗೆ ಬೆಲೆಕೊಡುತ್ತಿದ್ದಾನೆ. ಗಿಡಮರಗಳನ್ನು ಕೊಡಲಿ ಇಂದ ಕಡಿದು ಗೋಡೆಯ ಮೇಲೆ ಪ್ರಕೃತಿಯ ಸುಂದರ
ಚಿತ್ರಗಳನ್ನು ಬಿಡಿಸುತ್ತಿದ್ದಾನೆ. ಆದರೂ ಈ ಭೂಮಿಯು ಬರಡಲ್ಲ ಗಿಡಮರಗಳನ್ನು ಬೆಳೆಸಿದರೇ ಬೆಳೆಯುತ್ತದೆ. ಎಂದು
ಹೇಳಿದ್ದಾರೆ.
ಪ್ರಸ್ತುತ ಕವನವನ್ನು ಬಿ. ಟಿ. ಲಲಿತಾ ನಾಯಕ್ ಅವರ ಬಿದಿರು ಮೆಳೆ ಕಂಟಿಯಲಿ ಕವನ ಸಂಕಲನ (ಪುಟ121-22) ದಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ
Make me as brilant