History, asked by Micey4275, 10 months ago

olympic jyoti essay in Kannada

Answers

Answered by lipikaprajapati15919
1

Answer:

Explanation:

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು.https://www.penn.museum/sites/olympics/olympicorigins.shtml ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಅತ್ಯಂತ ಇತ್ತೀಚಿನ ಬೇಸಗೆಯ ಒಲಿಂಪಿಕ್ ಕ್ರೀಡಾಕೂಟ ೨೦೧೨ರಲ್ಲಿ ಲಂಡನ್ ನಗರದಲ್ಲಿ ಹಾಗೂ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ೨೦೧೦ರಲ್ಲಿ ಕೆನಡಾ ದ ವೆನ್‌ಕೂವರ್ ನಗರದಲ್ಲಿ ಆಯೂಜಿಸಲ್ಪಟ್ಟಿದ್ದವು. ಮುಂದಿನ ಬೇಸಗೆ ಕ್ರೀಡಾಕೂಟ ೨೦೧೬ ರಲ್ಲಿ ಬ್ರೆಜಿಲ್ ದೇಶದ ರಿಯೊ ಡಿ ಜನೈರೊ ನಲ್ಲಿ ನಡೆಯಲಿದೆ. ಮುಂದಿನ ಚಳಿಗಾಲದ ಕ್ರೀಡಾಕೂಟ ರಷ್ಯಾ ದೇಶದ ಸೋಚಿ ಯಲ್ಲಿ ೨೦೧೪ ರಲ್ಲಿ ನಡೆಯಲಿದೆ..ಪ್ರಾಚೀನ ಒಲಿಂಪಿಕ್ಸ್

ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಹಲವಷ್ಟು ದಂತಕಥೆಗಳು ಹಾಗೂ ಊಹಾಪೋಹಗಳಿವೆ. ಇವುಗಳ ಪೈಕಿ ಅತಿ ಜನಪ್ರಿಯವಾದ ಕತೆಯೊಂದರ ಪ್ರಕಾರ - ಹೆರಾಕ್ಲಿಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸೃಷ್ಟಿಕರ್ತನು[೧]. ಇವನು ತನ್ನ ತಂದೆ ಸ್ಯೂಸ್ ನ ಗೌರವಾರ್ಥವಾಗಿ ೧೨ ಕ್ರೀಡಾಂಗಣಗಳನ್ನು ನಿರ್ಮಿಸಿ ಕೂಟವನ್ನು ನಡೆಸಿದನು. ಈ ಕತೆಯ ಪ್ರಕಾರ ಈತನು ನೇರದಾರಿಯಲ್ಲಿ ೪೦೦ ಬಾರಿ ದಾಪುಗಾಲನ್ನಿಟ್ಟು ಕ್ರಮಿಸಿ ಆ ದೂರವನ್ನು ಒಂದು ಸ್ಟೇಡಿಯಸ್ ಎಂದು ಕರೆದನು. ಈ ದೂರವನ್ನೇ ರೋಮನ್ನರು ಸ್ಟೇಡಿಯಮ್ ಹಾಗೂ ಆಂಗ್ಲರು ಸ್ಟೇಜ್ ಎಂದು ಹೆಸರಿಸಿದರು. ಇಂದು ಕೂಡಾ ಆಧುನಿಕ ಕ್ರೀಡಾಂಗಣದ ಟ್ರ್ಯಾಕ್ ನ ಸುತ್ತಳತೆ ೪೦೦ ಮೀ. ಇರುವುದು. ಕ್ರಿ. ಪೂ. ೭೭೬ರ ಮೊದಲನೆಯ ಕ್ರೀಡಾಕೂಟದ ನಂತರ ಗ್ರೀಸ್ ದೇಶದಲ್ಲಿ ಒಲಿಂಪಿಕ್ಸ್ ಜನಪ್ರಿಯತೆ ಹೆಚ್ಚಿಸಿಕೊಂಡು ಕ್ರಿ.ಪೂ. ೬ ನೆಯ ಹಾಗೂ ೫ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದ್ದಿತು. ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು. ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ಸ್ಪರ್ಧಾಳುಗಳನ್ನು ನಾಡು ಅತ್ಯಭಿಮಾನ ಹಾಗೂ ಆದರದಿಂದ ಕಾಣುತ್ತಿತ್ತು. ಕವನಗಳ ಮತ್ತು ಪ್ರತಿಮೆಗಳ ಮೂಲಕ ಇವರನ್ನು ಅಮರರನ್ನಾಗಿಸಲಾಗುತ್ತಿತ್ತು. ಕ್ರಿ.ಪೂ. ೬ನೆಯ ಶತಮಾನದಲ್ಲಿದ್ದ ಮಿಲೋ ಎಂಬ ಕುಸ್ತಿಪಟುವು ಸತತ ೬ ಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ವಿಜಯ ಸಾಧಿಸಿದ್ದನು. ಈ ದಾಖಲೆಯನ್ನು ಇಂದಿನವರೆಗೂ ಸರಿಗಟ್ಟಲಾಗಿಲ್ಲ. ಗ್ರೀಸ್ ದೇಶದ ಮೇಲೆ ರೋಮನ್ನರ ಅಧಿಪತ್ಯವುಂಟಾದ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಕ್ರಮೇಣ ಅವನತಿಯತ್ತ ಸಾಗಲಾರಂಭಿಸಿತು. ಕ್ರಿಶ್ಚಿಯನ್ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಲ್ಪಟ್ಟ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಆ ಧರ್ಮದ ನಡವಳಿಕೆಗಳಿಗೆ ಅನುಗುಣವಾಗಿಲ್ಲವೆಂದು ಪರಿಗಣಿಸಲ್ಪಟ್ಟಿತು. ತರುವಾಯ ಕ್ರಿ.ಶ. ೩೯೩ರಲ್ಲಿ ರೋಮನ್ ಸಮ್ರಾಟ ಮೊದಲನೆಯ ಥಿಯೋಡೋರಸ್ ಒಲಿಂಪಿಕ್ ಕ್ರೀಡಾಕೂಟವನ್ನು ಧರ್ಮಬಾಹಿರವೆಂದು ಘೋಷಿಸಿದನು. ಹೀಗೆ ಸುಮಾರು ೧೦೦೦ ವರ್ಷಗಳ ಪರಂಪರೆಯೊಂದು ಕೊನೆಗೊಂಡಿತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕೇವಲ ಯುವಕರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದಿತು. ಕ್ರೀಡಾಕೂಟವು ಮಾನವಶರೀರದ ಸಾಧನೆಯ ದ್ಯೋತಕವೆಂದು ಪರಿಗಣಿಸಲಾಗುತ್ತಿದ್ದುದರಿಂದ ಸ್ಪರ್ಧಾಳುಗಳು ನಗ್ನರಾಗಿಯೇ ಪಾಲ್ಗೊಳ್ಳುತ್ತಿದ್ದರು. ವಿಜಯೀ ಸ್ಪರ್ಧಾಳುಗಳಿಗೆ ಆಲಿವ್ ಎಲೆಗಳಿಂದ ಮಾಡಿದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ ಜ್ಯೋತಿಯಾಗಲೀ ಒಲಿಂಪಿಕ್ ವರ್ತುಲಗಳಾಗಲೀ ಬಳಕೆಯಲ್ಲಿರಲಿಲ್ಲ. ಇವು ಮುಂದೆ ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸೇರಿಕೊಂಡವು.

Similar questions