Paragraph on teachers day in kannada... Please anyone as fast as u can help me... please.
Answers
ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕರು ಮಾತ್ರ. ವಿದ್ಯೆ, ಜ್ಞಾನ, ಮಾಹಿತಿ ಪಡೆಯುವುದು ಈಗ ಸುಲಭವಾದರೂ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿ ಹೇಳಲು ಗುರುವೊಬ್ಬರ ಅಗತ್ಯ ಇದ್ದೇ ಇರುತ್ತದೆ. ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ನಾನು ಕಾಣುತ್ತೇನೆ. ಶಿಕ್ಷಕರೇ ನಿಜವಾದ ಅನುಕರಣೀಯ ವ್ಯಕ್ತಿಗಳು. ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸರಿ ಮಾರ್ಗವನ್ನು ತೋರುವವರು ಅವರೇ. ಶಾಲಾ ದಿನಗಳಲ್ಲಿ ಶಿಕ್ಷಕರ ದಿನಾಚರಣೆ ತುಂಬಾ ಸಂಭ್ರಮ ದಿನವಾಗಿರುತ್ತಿತ್ತು. ವರ್ಷವಿಡಿ ಶಿಕ್ಷಕರ ಮಾತು ಕೇಳಿಸಿಕೊಳ್ಳುತ್ತಿದ್ದ ನಾವು, ಟೀಚರ್ಸ್ ಡೇ ದಿನ ಶಿಕ್ಷಕರನ್ನು ನಮ್ಮ ಪ್ರೀತಿಯಿಂದ ಕಟ್ಟಿ ಹಾಕುತ್ತಿದ್ದೆವು. ಕೇಕ್ ಕತ್ತರಿಸಿ, ಉಡುಗೊರೆಗಳನ್ನು ನೀಡುತ್ತಿದ್ದೆವು. ಟೀಚರ್ಸ್ ಜತೆ ಹಾಡಿ ನಲಿದು ಖುಷಿ ಪಡುತ್ತಿದ್ದೆವು.
ಮರ್ವಾಡಿ ಸಮುದಾಯದಿಂದ ಬಂದಿರುವ ನನಗೆ ಬೆಂಗಳೂರಿನಲ್ಲಿ ಕನ್ನಡ ಎಷ್ಟು ಮುಖ್ಯ ಎಂಬುದನ್ನು ಹೇಳಿಕೊಟ್ಟ ಗುರು ಮಿಸ್ ಶೀಲಾ. ನನ್ನ ಕನ್ನಡ ಟೀಚರ್. ನಾನು ಸದಾ ಕಾಲ ತಪ್ಪು ತಪ್ಪು ಕನ್ನಡ ಮಾತನಾಡುತ್ತಿದೆ. ಆದರೂ ಅದನ್ನು ತಿದ್ದಿ ಭಾಷೆ ಬಳಕೆ ಹೆಚ್ಚಿದರೆ ಮಾತ್ರ ಉಳಿಯಲು ಸಾಧ್ಯ. ನಿನ್ನ ಸುತ್ತಮುತ್ತಲಿನ ಜನರ ಜತೆ ಆತ್ಮೀಯವಾಗಿ ಬೆರೆಯಲು ಅವರ ಭಾಷೆಯಲ್ಲೇ ಮಾತನಾಡುವುದು ಒಳ್ಳೆ ವಿಧಾನ ಎಂದರು. ಹಾಗಾಗಿ ನಾನು ತಪ್ಪು ತಪ್ಪಾದರೂ ಕನ್ನಡ ಭಾಷೆ ಮಾತನಾಡಲು ಕಲಿತೆ. ಈಗ ಕನ್ನಡಿಗಳಾಗಿಬಿಟ್ಟಿದ್ದೇನೆ. ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಶೀಲಾ ಟೀಚರ್ಸ್ ಗೆ ನಮನಗಳು. ಒಟ್ಟಾರೆ, ಶಾಲಾ ದಿನಗಳಲ್ಲಿ ಗುರುಗಳು ಕಲಿಸಿದ ಪಾಠಗಳು ನನಗೆ ಶಾಲಾ ಮಟ್ಟದಲ್ಲಷ್ಟೇ ಅಲ್ಲದೆ ನನ್ನ ಜೀವನದಲ್ಲಿ ಅಭಿವೃದ್ಧಿ ಕಾಣಲು ಕಾರಣವಾಗಿದೆ. ನನ್ನ ಎಲ್ಲಾ ಗುರುಗಳಿಗೆ ಅನಂತಾನಂತ ವಂದನೆಗಳು.
Hope this helps...!!!
^_^
"ಶಿಕ್ಷಕ" ಪದಕ್ಕೆ ವಿಶೇಷ ಅರ್ಥವಿದೆ. "ಗು" ಎಂದರೆ ಕತ್ತಲೆ. "ರು" ತೆಗೆದುಹಾಕಲು ಅರ್ಥ. ಕತ್ತಲೆಯು ಅಜ್ಞಾನ ಎಂದು ಆದ್ದರಿಂದ ಶಿಕ್ಷಕರ ಹೆಸರು ನೆಲೆಸಿದೆ.
ಸರ್ವೆಪಳ‍್ಳಿ ರಾಧಾಕೃಷ್ಣನ್ 5 ಸೆಪ್ಟೆಂಬರ್ (1888 - 17 ಏಪ್ರಿಲ್ 1975) ಒಬ್ಬ ಭಾರತೀಯ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದು, ಅವರು ಭಾರತದ ಮೊದಲ ಉಪಾಧ್ಯಕ್ಷರಾಗಿದ್ದರು (1952-1962) ಮತ್ತು 1962 ರಿಂದ 1967 ರವರೆಗಿನ ಭಾರತದ ಎರಡನೇ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾದಾಗ, ಅವರ ಹಲವು ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಅವರನ್ನು ತಮ್ಮ ಜನ್ಮದಿನವನ್ನು ಆಚರಿಸಲು ಸೆಪ್ಟೆಂಬರ್ 5, ರಂದು ವಿನಂತಿಸಿದರು. ಅದಕ್ಕೆ ಉತ್ತರಿಸಿದ ಅವರು, "ನನ್ನ ಜನ್ಮದಿನವನ್ನು ಆಚರಿಸಲು ಬದಲಾಗಿ, ಸೆಪ್ಟೆಂಬರ್ 5 ರ ಶಿಕ್ಷಕರ ದಿನವಾಗಿ ಆಚರಿಸಿದರೆ ಅದು ನನ್ನ ಹೆಮ್ಮೆ" ಎಂದಿದ್ದರು. ನಂತರ ಅವರ ಜನ್ಮದಿನವನ್ನು ಭಾರತದಲ್ಲಿ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.
ಶಿಕ್ಷಕರ ದಿನಾಚರಣೆ ವಿಶೇಷ: ಒಂದು ಸವಿ ನೆನಪು
ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವತೆಯನ್ನು ಬೋಧಿಸುವ, ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದಾಗಿದೆ.