Personal Letters in Kannada
Answers
Answer:
ಕ್ಷೇಮ ಶ್ರೀ ದಿನಾಂಕ
ಸ್ಥಳ
ಇಂದ,
ಸುಧಾ ರಾಮ್,
#46,1ನೇ ಅಡ್ಡ ರಸ್ತೆ,
4ನೇ ಮುಖ್ಯ ರಸ್ತೆ,
ಹರ್ಷ ಬಡಾವಣೆ,
ಬೆಂಗಳೂರು -560060.
29ನೇ ಜನವರಿ, 2021.
ಪ್ರೀತಿಯ ಅಕ್ಕ ರಾಧಾಳಿಗೆ,
ನಿನ್ನ ತಂಗಿ ಸುಧಾ ಮಾಡುವ ನಮಸ್ಕಾರಗಳು. ನಾನು ಇಲ್ಲಿ ಕ್ಷೇಮ. ನೀನು ಅಲ್ಲಿ ಹೇಗಿದ್ದೀಯಾ? ನಿನ್ನ ವಿಧ್ಯಾರ್ಥಿ ನಿಲಯದ ವಾಸ ಚೆನ್ನಾಗಿದೆಯೇ? ಅಪ್ಪ ಅಮ್ಮ ಇಲ್ಲಿ ಕ್ಷೇಮವಾಗಿದ್ದಾರೆ. ನಿನ್ನ ಕ್ಷೇಮ ಸಮಾಚಾರ ತಿಳಿಸುತ್ತಾ ಆದಷ್ಟು ಬೇಗ ನನಗೊಂದು ಪತ್ರ ಬರೆ.
ನೀನು ನಮ್ಮನ್ನು ಬಿಟ್ಟು ವಿಧ್ಯಾರ್ಥಿ ನಿಲಯಕ್ಕೆ ಹೋಗಿ ಈಗಾಗಲೇ ಒಂಬತ್ತು ತಿಂಗಳುಗಳಾಗಿವೆ. ನಿನ್ನ ಪರೀಕ್ಷೆಗಳು ಈಗ ಸಮೀಪಿಸುತ್ತಿವೆ. ಆದ್ದರಿಂದ ಅಪ್ಪ ಅಮ್ಮ ತಮ್ಮ ಆಶೀರ್ವಾದಗಳನ್ನು ಈ ಪತ್ರದ ಮೂಲಕ ತಿಳಿಸಿದ್ದಾರೆ.
ನೀನು ಒಳ್ಳೆಯ ಅಂಕಗಳನ್ನು ಗಳಿಸಿ ತಂದೆ ತಾಯಿಗೆ ಒಳ್ಳೆ ಹೆಸರು ತರಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ.
ಇನ್ನೇನು ವಿಷಯವಿಲ್ಲ. ಚೆನ್ನಾಗಿ ಓದಿ, ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗೆ ತಯಾರಾಗು. ಒಳ್ಳೆಯದಾಗಲಿ.
ವಂದನೆಗಳು ಇಂತಿ ನಿನ್ನ ತಂಗಿ
ಸುಧಾ ರಾಮ್
ಹೊರವಿಳಾಸ
ಗೆ, ಇಂದ,
ರಾಧಾ ರಾಮ್, ಸುಧಾ ರಾಮ್,
#12, 3ನೇ ಅಡ್ಡ ರಸ್ತೆ, #46,1ನೇ ಅಡ್ಡ ರಸ್ತೆ,
2ನೇ ಮುಖ್ಯ ರಸ್ತೆ, 4ನೇ ಮುಖ್ಯ ರಸ್ತೆ,
ಕುಶಾಲ್ ನಗರ, ಹರ್ಷ ಬಡಾವಣೆ,
ಮೈಸೂರು-571234. ಬೆಂಗಳೂರು-560060.
Explanation:
ಧನ್ಯವಾದಗಳು!!