Pick and speech water topic in kannada
Answers
Answered by
0
Answer:
ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ಮತ್ತು ವಾಸನಾ-ರಹಿತ ವಸ್ತು. ಇದು ಭೂಮಿಯ ಮೇಲ್ಮೈಯ ಶೇ. ೭೦ ಭಾಗಗಳಲ್ಲಿ ಕಂಡುಬರುತ್ತದೆ. ಅದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.೩ ರಷ್ಟು ಮಾತ್ರವೇ ಲಭ್ಯವಿರುತ್ತದೆ. ಪ್ರಪಂಚದಲ್ಲಿ ಒಟ್ಟು ೧೪೦ ಕೋಟಿ ಘನ ಕಿಮೀ ಗಳಷ್ಟು ನೀರು ವಿವಿಧ ರೂಪಗಳಲ್ಲಿ ಇದೆಯೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ, ಧ್ರುವ ಪ್ರದೇಶಗಳಲ್ಲಿ ಘನ ರೂಪದಲ್ಲಿ, ಹಾಗೂ ಮೋಡ, ನೀರಾವಿ ಮೊದಲಾದ ರೂಪಗಳಲ್ಲಿದೆ.
ನೀರಿನ ರಾಸಾಯನಿಕ ಸೂತ್ರ H2O - ಎಂದರೆ ಒಂದು ಅಣು ನೀರಿನಲ್ಲಿ ಎರಡು ಜಲಜನಕ ಅಣುಗಳು ಹಾಗೂ ಒಂದು ಆಮ್ಲಜನಕದ ಅಣು ಇರುತ್ತವೆ. ಹೆಚ್ಚಿನ ಪ್ರಮಾಣದ ನೀರು ಒಟ್ಟಿಗೆ ಇರುವಾಗ ತಿಳಿನೀಲಿ ಬಣ್ಣ ಪಡೆಯುತ್ತದೆ. ಇದಕ್ಕೆ ಕಾರಣ ನೀರು ಕೆಂಪು ಬಣ್ಣದ ಬೆಳಕನ್ನು ಅಲ್ಪ ಪ್ರಮಾಣದಲ್ಲಿ ಹೀರಿಕೊಂಡು ನೀಲಿ ಬೆಳಕನ್ನು ಹೆಚ್ಚಾಗಿ ಚದುರಿಸುವುದೇ ಆಗಿದೆ.
Similar questions
Physics,
5 months ago
Social Sciences,
5 months ago
India Languages,
5 months ago
English,
11 months ago
Math,
1 year ago
Science,
1 year ago
Science,
1 year ago