India Languages, asked by JAYmilind6941, 11 months ago

Plastic recycling essay in Kannada language

Answers

Answered by gnvarshita
2

Explanation:

ವಿದ್ಯುನ್ಮಾನ ತ್ಯಾಜ್ಯ , ಇ-ತ್ಯಾಜ್ಯ , ಇ-ಸ್ಕ್ರ್ಯಾಪ್‌ , ಅಥವಾ ನಿರುಪಯುಕ್ತ ವಿದ್ಯುತ್‌ ಮತ್ತು ವಿದ್ಯುನ್ಮಾನ ಸಲಕರಣೆಗಳು ಎಂಬ ಪದಗಳು ಹಿಂದಕ್ಕೆ ಹಾಕಿದ, ಮಿಕ್ಕಿದ, ಹಳೆಯ, ಅಥವಾ ಮುರಿದ ವಿದ್ಯುತ್‌ ಮತ್ತು ವಿದ್ಯುನ್ಮಾನ ಸಾಧನಗಳನ್ನು ಸರಲವಾಗಿ ವಿವರಿಸುತ್ತದೆ[೧]. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿದ್ಯುನ್ಮಾನ ತ್ಯಾಜ್ಯವನ್ನು ಅಸಾಂಪ್ರದಾಯಿಕವಾಗಿ ಸಂಸ್ಕರಿಸುವುದರಿಂದ ಗಂಭೀರ ಅರೋಗ್ಯ ಮತ್ತು ಮಲಿನತೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಪರಿಸರ ಪ್ರೇಮಿ ಸಂಘಗಳು ವಾದಿಸುತ್ತವೆ. ಕೆಲವು ವಿದ್ಯುನ್ಮಾನ ಸ್ಕ್ರ್ಯಾಪ್‌ ಭಾಗಗಳು, ಉದಾಹರಣೆಗೆ ಸಿಆರ್‌ಟಿಗಳು, ಸೀಸ, ನೀಲಿ ತವರ, ಬೆರಿಲಿಯಮ್‌, ಪಾದರಸ, ಮತ್ತು ಬ್ರಾಮಿನೇಟೆಡ್‌ ಫ್ಲೇಮ್‌ ರಿಟಾರ್ಡ್ಯಾಂಟ್‌ಗಳನ್ನು ಹೊಂದಿರುತ್ತವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಕೂಡ ಇ-ತ್ಯಾಜ್ಯದ ಮರುಬಳಕೆ ಮತ್ತು ಗಳಿಂದ ಕೆಲಸಗಾರರಿಗೆ ಮತ್ತು ಸಮುದಾಯಕ್ಕೆ ಅಪಾಯ ಒದಗುವ ಸಂಭವವಿದ್ದು, ಮರುಬಳಕೆ ಕಾರ್ಯಗಳ ಸಂದರ್ಭದಲ್ಲಿ ಅಸುರಕ್ಷಿತವಾಗಿ ಅವುಗಳಿಗೆ ತೆರೆದುಕೊಳ್ಳುವುದು ಮತ್ತು ಕಸದ ರಾಶಿಗಳು ಮತ್ತು ಇನ್ಸಿನೆರೇಟರ್‌ಗಳಿಂದ ಭಾರವಾದ ಲೋಹ ಮುಂತಾದ ವಸ್ತುಗಳ ಸೋರಿಕೆಯನ್ನು ತಡೆಯಲು ಹೆಚ್ಚಿನ ನಿಗಾವಹಿಸಬೇಕು. ವಸ್ತುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕೆಂಬುದನ್ನು ಸ್ಕ್ರ್ಯಾಪ್‌ ಉದ್ಯಮ ಮತ್ತು ಯುಎಸ್‌ಎ ಇಪಿಎ‌ ಅಧಿಕಾರಿಗಳು ಒಪ್ಪುತ್ತಾರೆ, ಆದರೆ ಅತಿಯಾದ ನಿಯಮಗಳಿಂದ ಲಾಭ ಹೊಂದುವ ಸಂಸ್ಥೆಗಳು ನಿರುಪಯುಕ್ತ ವಿದ್ಯುನ್ಮಾನ ವಸ್ತುಗಳಿಂದ ಪರಿಸರಕ್ಕೆ ಆಗುವ ಅಪಾಯಗಳನ್ನು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನುತ್ತಾರೆ.

ಪರಿವಿಡಿ

ವ್ಯಾಖ್ಯಾನ ಸಂಪಾದಿಸಿ

"ವಿದ್ಯುನ್ಮಾನ ತ್ಯಾಜ್ಯ"ವನ್ನು, ತನ್ನ ಮೂಲ ಮಾಲೀಕರು ಮಾರಿದ, ದಾನಮಾಡಿದ ಅಥವಾ ಬಿಸಾಡಿದ ಎಲ್ಲ ಗೌಣ ಕಂಪ್ಯೂಟರ್‌ಗಳು, ಮನೋರಂಜನ ಸಾಧನ ಎಲೆಕ್ಟ್ರಾನಿಕ್‌ಗಳು, ಮೊಬೈಲ್‌ ದೂರವಾಣಿಗಳು, ಮತ್ತು ಟಿವಿ ಸೆಟ್‌ಗಳು ಮತ್ತು ಫ್ರಿಜ್‌ಗಳು ಮುಂತಾದ ಇತರ ವಸ್ತುಗಳು. ಈ ವ್ಯಾಖ್ಯಾನವು ಎರಡನೇ ಬಳಕೆ, ಮರುಮಾರಾಟ, ಅವಶೇಷದ ಬಳಕೆ, ಮರುಬಳಕೆ, ಅಥವಾ ವಿಲೇವಾರಿಗೆ ಯೋಗ್ಯವಾಗಿರುವ ವಿದ್ಯುನ್ಮಾನ ವಸ್ತುಗಳನ್ನು ಒಳಗೊಂಡಿದೆ. ಇತರ ವ್ಯಾಖ್ಯಾನಗಳು ಎರಡನೇ ಬಳಕೆಗೆ ಯೋಗ್ಯವಾದ, (ಕೆಲಸ ಮಾಡುತ್ತಿರುವ ಮತ್ತು ರಿಪೇರಿ ಮಾಡಬಹುದಾದ ವಿದ್ಯುನ್ಮಾನ ಉಪಕರಣಗಳು) ಮತ್ತು "ಪದಾರ್ಥ"ಗಳಾಗಬಹುದಾದ ಗೌಣ ಸ್ಕ್ರ್ಯಾಪ್‌ಗಳಾದ (ತಾಮ್ರ, ಸ್ಟೀಲ್‌, ಪ್ಲಾಸ್ಟಿಕ್‌, ಮುಂತಾದುವನ್ನು.) ವ್ಯಾಖ್ಯಾನಿಸುತ್ತವೆ, ಮತ್ತು "ತ್ಯಾಜ್ಯ" ಎಂಬ ಪದವನ್ನು ಎರಡನೇ ಬಳಕೆ ಮತ್ತು ಮರುಬಳಕೆ ಕಾರ್ಯಗಳಿಂದಾದ ಶೇಷಗಳನ್ನೂ ಒಳಗೊಂಡು, ಕೆಲಸ ಮಾಡುತ್ತಿರುವ ಅಥವಾ ರಿಪೇರಿ ಮಾಡಬಹುದಾದ ವಸ್ತುಗಳು ಎಂದು ಹೇಳಿದ್ದರೂ ಗ್ರಾಹಕನು ಬಿಸಾಡಿದ ಅಥವಾ ವಿಲೇವಾರಿ ಮಾಡಿದ ಅಥವಾ ಹಿಂದಕ್ಕೆ ತಳ್ಳಿದ ವಸ್ತುಗಳಿಗೆ ಮಾತ್ರ ಉಪಯೋಗಿಸಲಾಗಿದೆ. ಏಕೆಂದರೆ ಸಾಮಾನ್ಯವಾಗಿ ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳ ರಾಶಿಗಳನ್ನೇ ಸಮ್ಮಿಶ್ರ ಮಾಡಲಾಗುತ್ತದೆ (ಒಳ್ಳೆಯವು, ಮರುಬಳಕೆ ಮಾಡಬಹುದಾದ, ಮತ್ತು ಮರುಬಳಕೆ ಮಾಡಲಾಗದ), ಹಲವು ಸಾರ್ವಜನಿಕ ಕಾರ್ಯನೀತಿ ಪ್ರತಿಪಾದಕರು ’ಇ-ತ್ಯಾಜ್ಯ’ ಎಂಬ ಪದವನ್ನು ಎಲ್ಲ ಹೆಚ್ಚುವರಿ ವಿದ್ಯುನ್ಮಾನ ಉಪಕರಣಗಳಿಗೆ ಉಪಯೋಗಿಸುತ್ತಾರೆ. ಯುನೈಟೆಡ್‌ ಸ್ಟೇಟ್ಸ್‌ ಪರಿಸರ ಸಂರಕ್ಷಣಾ ಸಂಸ್ಥೆಯು ಹಿಂದಕ್ಕೆ ಹಾಕಿದ ಸಿಆರ್‌ಟಿ ಮಾನಿಟರ್‌ಗಳನ್ನು ಕೂಡ ತನ್ನ "ಅಪಾಯಕಾರಿ ಗೃಹೀಯ ತ್ಯಾಜ್ಯ" ವಿಭಾಗದಲ್ಲಿ ಸೇರಿಸುತ್ತದೆ.[೨] ಆದರೆ ಅವುಗಳನ್ನು ಹಿಂದಕ್ಕೆ ಹಾಕದೆ, ಅನುಮಾನಾಸ್ಪದವಾಗಿ ಒಟ್ಟುಮಾಡದೆ ಅಥವಾ ಹವಾಮಾನ ಮತ್ತು ಇತರ ಹಾನಿಗಳಿಂದ ರಕ್ಷಣೆ ಮಾಡದೆ ಬಿಡದಿದ್ದ ಪಕ್ಷದಲ್ಲಿ ಅವುಗಳಿಂದ ’ಪದಾರ್ಥ’ಗಳಾಗಬಹುದೇನೋ ಎಂಬ ಪರೀಕ್ಷೆಗೆ ಪರಿಗಣಿಸುತ್ತದೆ.

"ಪದಾರ್ಥ" ಮತ್ತು "ತ್ಯಾಜ್ಯ" ವಿದ್ಯುನ್ಮಾನ ಉಪಕರಣಗಳ ವ್ಯಾಖ್ಯಾನಗಳ ನಡುವಿನ ಭೇದಗಳ ಬಗೆಗೆ ಚರ್ಚೆ ಮುಂದುವರೆದಿದೆ. ಕೆಲಸ ಮಾಡುತ್ತಿರುವ ಉಪಕರಣಗಳ ರಾಶಿಯಲ್ಲಿ ಸೇರಿಕೊಂಡ ಗುರುತಿಸಲಾಗದ, ಹಳೆಯ ಅಥವಾ ಕೆಲಸ ಮಾಡದ ಉಪಕರಣಗಳನ್ನು ಉದ್ದೇಶಪೂರ್ವಕವಾಗಿ ಕೆಲವು ರಫ್ತುಗಾರರು ಬಿಟ್ಟುಬಿಡುತ್ತಾರೆ (ತಿಳುವಳಿಕೆ ಇಲ್ಲದೇ, ಅಥವಾ ಹೆಚ್ಚು ದುಬಾರಿ ಸಂಸ್ಕರಣಾ ಪ್ರಕ್ರಿಯೆಗಳನ್ನು ತಪ್ಪಿಸಲು). ವ್ಯಾಪಾರಿ ಸಂರಕ್ಷಣಕಾರರು (ಪ್ರೊಟೆಕ್ಷನಿಸ್ಟ್ಸ್‌) "ತ್ಯಾಜ್ಯ" ವಿದ್ಯುನ್ಮಾನ ಉಪಕರಣಗಳ ವ್ಯಾಖ್ಯಾನವನ್ನು ವಿಸ್ತರಿಸಬಹುದು. ವಿದ್ಯುನ್ಮಾನ ತ್ಯಾಜ್ಯದ ಉಪವಿಭಾಗವಾದ ಕಂಪ್ಯೂಟರ್‌ ಮರುಬಳಕೆಯ ಅತಿಮೌಲ್ಯವು (ಕೆಲಸ ಮಾಡುತ್ತಿರುವ ಮತ್ತು ಉಪಯೋಗಿಸಬಹುದಾದ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಮತ್ತು ರ್ಯಾಮ್‌ನಂತಹ ಭಾಗಗಳು) ಅನೇಕ ಅನುಪಯುಕ್ತ "ಪದಾರ್ಥಗಳ" ಸಾಗಾಣಿಕೆ ವೆಚ್ಚವನ್ನು ಕೊಡಲು ಸಹಾಯ ಮಾಡಬಲ್ಲದು.

Answered by krishnakhalligeri200
0

Answer:

yssunt8t8t7r

Explanation:

Similar questions