ಕೂಡಿ ಬಾಳಿದರೆ ಸ್ವರ್ಗ ಸುಖ ಈ ಗಾದೆಯ ವಿಸ್ತರಣೆ please
Answers
Answered by
2
Answer:
ಕೂಡಿ ಬಾಳಿದರೆ ಸ್ವರ್ಗ ಸುಖ.
* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ನಾವು ಯಾವಾಗಲೂ ಅನ್ಯೂನ್ಯತೆಯಿಂದ ಹಾಗೂ ಒಗ್ಗಟ್ಟಿನಿಂದ ಬದುಕಬೇಕು’ ಎಂಬುದನ್ನು ತಿಳಿಸುತ್ತದೆ
.
ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುತ್ತಾರೆ ಹಿರಿಯರು. ಹೌದು ಕೂಡಿ ಬಾಳುವುದರಲ್ಲಿ ಇರುವ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಯಾವುದರಲ್ಲಿಯೂ ಸಿಗುವುದಿಲ್ಲ. ಸುಖಿ ಕುಟುಂಬಗಳು ತಮ್ಮ ಕುಟುಂಬದ ಸದಸ್ಯರ ನಡುವೆ ಅನ್ಯೋನ್ಯವಾದ ಬಾಂಧವ್ಯವನ್ನು ಹೊಂದಿರುತ್ತವೆ. ಜೊತೆಗೆ ಇದು ತಲೆಮಾರುಗಳ ಕಾಲ ತಪ್ಪದೆ ಮುಂದೆ ಸಾಗುತ್ತವೆ. ಕುಟುಂಬದ ಹಿರಿಯರು ಅಂದರೆ ನಮ್ಮ ಪೋಷಕರು ತಮ್ಮ ಕುಟುಂಬದ ಬಾಂಧವ್ಯವನ್ನು ಕಾಪಾಡುವ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ.
ಇಡೀ ಕುಟುಂಬವು ಒಟ್ಟಿಗೆ ಕುಳಿತು ಹಬ್ಬ ಹರಿದಿನಗಳನ್ನು ಆಚರಿಸುವುದು; ಒಟ್ಟಿಗೆ ಊಟ ಮಾಡುವುದು; ಜವಾಬ್ದಾರಿಗಳನ್ನು ಒಟ್ಟಿಗೆ ಎಲ್ಲರೂ ಹಂಚಿಕೊಳ್ಳುವುದು; ಕುಟುಂಬದ ಸದಸ್ಯರಲ್ಲಿ ಭಾಂದವ್ಯವನ್ನು ಬೆಸೆಯುವುದಲ್ಲದೆ; ಎಲ್ಲರಲ್ಲೂ ಸುರಕ್ಷಿತ ಭಾವನೆಯನ್ನುಂಟುಮಾಡುತ್ತದೆ. ಸಂಬಂಧಗಳು ಸಣ್ಣಕುಟುಂಬಗಳಾಗಿ ಒಡೆದು ಮಾನವೀಯ ಸಂಬಂಧಗಳು ಬೆಲೆಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಕುಟುಂಬಗಳನ್ನು ಬೆಸೆದು ಅವಿಭಕ್ತವಾಗಿಸುವುದು ಅತ್ಯಾವಶ್ಯಕವಾಗಿದೆ.
ವಿಶಾಲಾರ್ಥದಲ್ಲಿ ಹೇಳುವುದಾದರೆ; ಸಮಾಜದಲ್ಲಿ ಯಾವ ಭೇದಭಾವವಿಲ್ಲದೆ ಸರ್ವರೂ ಸಹಕಾರ ಭಾವನೆಯಿಂದ ಒಂದಾಗಿ ಬಾಳಬೇಕು. ಅದೇ ಗಾಂಧಿಜಿಯವರು ಕಂಡ ರಾಮರಾಜ್ಯದ ಕನಸು.
Be Brainly!
Similar questions
Science,
2 months ago
Science,
2 months ago
Music,
2 months ago
Social Sciences,
5 months ago
Science,
5 months ago
Math,
10 months ago
Science,
10 months ago
India Languages,
10 months ago