India Languages, asked by srinidhi6360, 1 month ago

please don't answer if you don't know

ಪದಗಳನ್ನು ಬಿಡಿಸಿ ‌ಸಂಧಿ ಹೆಸರಿಸಿ : ದಿಗಂತ
: ಹಿಂಸಾಚಾರ​

Answers

Answered by KrithikaQueen
3

Explanation:

ಜತ್ವ ಸಂಧಿ - ಇದೊಂದು ಸಂಸ್ಕೃತ ಸಂಧಿ

ಮೊದಲ ಪದದ ಕೊನೆಯಲ್ಲಿರುವ ಕ, ಚ, ಟ, ತ, ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ, ಜ, ಡ, ದ, ಬ) ಆದೇಶಗಳಾಗಿ ಬರುತ್ತವೆ. ಇದಕ್ಕೆ 'ಜತ್ವ ಸಂಧಿ' ಎನ್ನುವರು.

ಉದಾ:

ಕ>ಗ

ವಾಕ್ + ಈಶ = ವಾಗೀಶ

ವಾಕ್ + ದಾನ = ವಾಗ್ದಾನ

ದಿಕ್ + ಅಂತ = ದಿಗಂತ

ಚ>ಜ

ಅಚ್ + ಆದಿ = ಅಜಾದಿ

ಟ>ಡ

ಷಟ್ + ಆನನ = ಷಡಾನನ

ವಿರಾಟ್ + ರೂಪ = ವಿರಾಡ್ರೂಪ

ತ>ದ

ಸತ್ + ಉದ್ದೇಶ = ಸದುದ್ದೇಶ

ಬೃಹತ್ + ಆಕಾರ = ಬೃಹದಾಕಾರ

ಸತ್ + ಭಾವನೆ = ಸದ್ಭಾವನೆ

ಚಿತ್ + ಆನಂದ = ಚಿದಾನಂದ

ಪ>ಬ

ಅಪ್ + ಧಿ = ಅಬ್ಧಿ

ಕನ್ನಡ ಸಂಧಿಗಳಲ್ಲಿ ಎರಡನೇ ಪದದ ಮೊದಲ ಅಕ್ಷರ ಕ ಅಥವಾ ತ ಇದ್ದರೆ ಎಷ್ಟೋ ಸಂದರ್ಭಗಳಲ್ಲಿ ಕ್ರಮವಾಗಿ ಗ ಮತ್ತು ದ ಆಗುವುದುಂಟು.

ಉದಾಹರಣೆಗೆ

ಕಡೆ + ಕೋಲು = ಕಡೆಗೋಲು

ತಲೆ + ತೋರು = ತಲೆದೋರು.

Similar questions