World Languages, asked by madhukarshettygar1, 5 months ago

please help for writing essay. water conservation And savings in Kannada please our ನೀರಿನ ಸಂರಕ್ಷಣೆ ಹಾಗೂ ಉಳಿತಾಯ. please ​

Answers

Answered by priyanshusinghps17
0

Answer:

ನೀರಿನ ಅಭಾವವನ್ನು ತಡೆಗಟ್ಟುವ ಕಡೆ ನಾವೆಲ್ಲರೂ ಗಮನಹರಿಸಬೇಕು.ಇಲ್ಲದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯವಾಗುತ್ತದೆ.ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ.ಲಭ್ಯವಿರುವ ನೀರನ್ನು ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಸಿ,ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ.

ನೀರಿನ ಸಂರಕ್ಷಣಾ ವಿಧಾನಗಳು: ಸಂಪಾದಿಸಿ

ನೀರನ್ನು ಸಂರಕ್ಷಿಸಲು ಪ್ರಮುಖವಾದ ಎರಡು ವಿಧಾನಗಳನ್ನು ಅನುಸರಿಸಬಹುದಾಗಿದೆ.

೧.ನೀರಿನ ನಿರ್ವಹಣೆ:

ಜೇವ ಸಂಕುಲದ ಉಗಮ,ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸಂರಕ್ಷಿಸಬಹುದು.ನೀರಿನ ಸಮರ್ಪಕ ನಿರ್ವಹಣೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ.

ಅ) ನೀರಿನ ಕ್ಲೋರೀನ್ ಅಂಶಗಳಂತಹ ರೋಗನಿವಾರಕ ರಾಸಾಯನಿಕಗಳನ್ನು ಬೆರೆಸಿ, ಶುದ್ಧಿಕರಿಸುವುದರ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವುದು. ಆ)ತ್ಯಾಜ್ಯವಸ್ತುಗಳನ್ನು ಕೆರೆ,ನದಿಗಳಂತಹ ನೀರಿನ ಆಕರಗಳಲ್ಲಿ ಹಾಕುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾ‍ಗೃ‍ತಿ ಮೂಡಿಸುವುದು. ಇ)ಕೈಗಾರಿಕ ತ್ಯಾಜ್ಯ ವಸ್ತುಗಳನ್ನು ನೀರಿನ ಆಕರಗಳಿಗೆ ವಿಸರ್ಜಿಸುವ ಮೊದಲು ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸುವುದು . ಈ)ನೀರಿನಲ್ಲಿರುವ ಕಲುಷಿತ ಅಂಶಗಳನ್ನು ವಿವಿಧ ವಿಧಾನಗಳಿಂದ ಬೇರ್ಪಡಿಸಿ, ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವುದು. ಉ)ಮಳೆಗಾಲದಲ್ಲಿ ಭೂಮಿಗೆಬಿದ್ದ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಸಣ್ಣ ಹಳ್ಳ-ತೊರೆಗಳಿಗೆ ಚೆಕ್ ಡ್ಯಾಮ್ಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು. ಊ)ಅರಣ‍್ಯ ನಾಶವನ್ನು ತಡೆಗಟ್ಟುವುದು ಮತ್ತು ಪ್ರಾಣಿಗಳ ಅತಿಯಾದ ಮೇಯಿಸುವಿಕೆಯನ್ನು ನಿಯಂತ್ರಿಸುವುದು. ೨.ಮಳೆ ನೀರು ಕೊಯ್ಲು:ಮಳೆ ನೀರನ್ನು ನೇರವಾಗಿ ಸಂಗ್ರಹಿಸಿ ಬಳಸುವುದನ್ನು ಮಳೇ ನೀರು ಕೊಯ್ಲು ಎನ್ನುವರು.ಇದರಲ್ಲಿ ಎರಡು ವಿಧಗಳಿವೆ. ಅ)ಮಳೆ ಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವುದು. ಆ)ಮಳೆ ಬಿದ್ದು ಹರಿಯುವ ನೀರನ್ನು ಸಂಗ್ರಹಿಸುವುದು.

ಮಳೆ ನೀರು ಹರಿದು ಹೋಗದಂತೆ ತಡೆಯೊಡ್ಡಿ ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಅಂತರ್ಜಲ ಮಟ್ಟವು ಮರುಪೂರ್ಣದಿಂದ ಹೆಚ್ಚುವುದು ಮತ್ತು ವರ್ಷದ ಎಲ್ಲಾ ಕಾಲದಲ್ಲಿಯೂ ನೀರು ದೊರೆಯುವಂತಾಗುವುದು.

Similar questions