"ಚಕ್ರಪಾಣಿ" ಯಾವ ಸಮಾಸ
please say the answer
Answers
ಬಹುವ್ರೀಹಿ ಸಮಾಸ
ಚಕ್ರವು+ಪಾಣಿಯಲ್ಲಿ ಆವಂಗೋ ಅವನು=ಚಕ್ರಪಾಣಿ
Explanation:
ಬಹುವ್ರೀಹಿ ಸಮಾಸ:- "ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ (ಅನ್ಯಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುವರು."
ಉದಾಹರಣೆಗೆ:
(i) ಕನ್ನಡ - ಕನ್ನಡ ಪದಗಳು ಸೇರಿ ಸಮಾಸವಾಗುವುದಕ್ಕೆ-
ಮೂರು+ಕಣ್ಣು-ಉಳ್ಳವ=ಮುಕ್ಕಣ್ಣ (ಮೂರು ಪದಕ್ಕೆ ಮುಕ್ ಆದೇಶ)
ನಾಲ್ಕು+ಮೊಗ-ಉಳ್ಳವ=ನಾಲ್ಮೊಗ (ನಾಲ್ಕು ಪದಕ್ಕೆ ನಾಲ್ ಆದೇಶ)
ಕೆಂಪು(ಆದ) ಕಣ್ಣು-ಉಳ್ಳವ=ಕೆಂಗಣ್ಣ.
ಡೊಂಕು(ಆದ) ಕಾಲು-ಉಳ್ಳವ=ಡೊಂಕುಗಾಲ.
ಕಡಿದು(ಆದ) ಚಾಗ-ಉಳ್ಳವ-ಕಡುಚಾಗಿ.
ಮೇಲೆ ಹೇಳಿದ ಎಲ್ಲ ಉದಾಹರಣೆಗಳನ್ನು ನೋಡಿದರೆ ಪೂರ್ವದ ಉತ್ತರದ ಪದಗಳೆರಡೂ ಸಮಾನ ವಿಭಕ್ತಿಯಿಂದ ಕೂಡಿವೆ. ಅಂದರೆ ಒಂದೇ ವಿಭಕ್ತ್ಯಂತವಾಗಿವೆ. ಹೀಗೆ ಪೂರ್ವೋತ್ತರಪದಗಳೆರಡೂ ಸಮಾನ ವಿಭಕ್ತಿಯಿಂದ ಕೂಡಿದ್ದರೆ ಅದನ್ನು ‘ಸಮಾನಾಧಿಕರಣ’ ಬಹುವ್ರೀಹಿ ಎಂದು ಕರೆಯುವರು. ಭಿನ್ನ ಭಿನ್ನ (ಬೇರೆ ಬೇರೆ) ವಿಭಕ್ತಿಗಳಿಂದ ಕೂಡಿದ್ದರೆ ‘ವ್ಯಧಿಕರಣ’ ಬಹುವ್ರೀಹಿ ಎನ್ನುವರು. ವ್ಯಧಿಕರಣ ಬಹುವ್ರೀಹಿಗೆ ಕೆಳಗಣ ಉದಾಹರಣೆಗಳನ್ನು ನೋಡಿರಿ.
ಸಂಸ್ಕೃತ - ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗುವುದಕ್ಕೆ ಉದಾಹರಣೆ:-
ಚಕ್ರವು+ಪಾಣಿಯಲ್ಲಿ ಆವಂಗೋ ಅವನು=ಚಕ್ರಪಾಣಿ (ವ್ಯಧಿಕರಣ)
ಫಾಲದಲ್ಲಿ+ನೇತ್ರವನ್ನು ಉಳ್ಳವನು=ಫಾಲನೇತ್ರ (ವ್ಯಧಿಕರಣ)
ಇಕ್ಷುವನ್ನು+ಕೋದಂಡವನ್ನಾಗಿ ಉಳ್ಳವ=ಇಕ್ಷುಕೋದಂಡ (ಸಮಾನಾಧಿಕರಣ)
ಇದುವರೆಗೆ ಬಹುವ್ರೀಹಿ ಸಮಾಸದ ಹಲವಾರು ಉದಾಹರಣೆಗಳನ್ನು ತಿಳಿದಿರಿ. ಇನ್ನೂ ಕೆಲವು ರೀತಿಯ ಉದಾಹರಣೆಗಳು ನಮಗೆ ಇಲ್ಲಿ ಕಾಣಬರುತ್ತವೆ. ಕೆಳಗೆ ವಿವರಿಸಿರುವುದನ್ನು ನೋಡಿರಿ.
“ಅವರಿಗೆ ದೊಡ್ಡ ‘ಹಣಾಹಣಿ’ಯೇ ಆಯಿತು” ಹೀಗೆ ಹೇಳುವುದುಂಟು. ‘ಹಣಾಹಣಿ’ ಎಂದರೆ ಹಣಿಯುವುದರಿಂದ, ಹಣಿಯುವುದರಿಂದ ಆದ ಯುದ್ಧವೇ ‘ಹಣಾಹಣಿ’ ಇಲ್ಲಿ ಜಗಳವೇ ಅನ್ಯಪದವಾಯಿತು. ಇದರಂತೆ-
ಕೋಲಿನಿಂದ+ಕೋಲಿನಿಂದ ಮಾಡಿದ ಜಗಳ-ಕೋಲಾಕೋಲಿ.
ಖಡ್ಗದಿಂದ+ಖಡ್ಗದಿಂದ ಮಾಡಿದ ಜಗಳ-ಖಡ್ಗಾ ಖಡ್ಗಿ.
ಹಣಾಹಣಿ, ಕೋಲಾಕೋಲಿ, ಖಡ್ಗಾಖಡ್ಗಿ ಇತ್ಯಾದಿ ಸಮಾಸಗಳನ್ನು ವ್ಯತಿಹಾರ ಲಕ್ಷಣ ವೆಂದು ಬಹುವ್ರೀಹಿಸಮಾಸದಲ್ಲಿ ಒಂದು ಬಗೆಯಾಗಿ ಹೇಳುವರು.