please say the answer question???
Answers
Answer:
what is the question sis
Answer:
ಮೈಲಾರ ಮಹಾದೇವಪ್ಪನವರು ೧೯೧೧ರಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದರು. ಇವರ ತಾಯಿ ಬಸಮ್ಮ ; ತಂದೆ ಮಾರ್ತಾಂಡಪ್ಪ. ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಹಾಗು ಹಂಸಭಾವಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಹೈಸ್ಕೂಲಿನಲ್ಲಿ ಹರ್ಡೇಕರ ಮಂಜಪ್ಪನವರಿಂದ ರಾಷ್ಟ್ರೀಯ ಭಾವನೆಯ ಉದಯವಾಯಿತು. ಅದೇ ಸಮಯದಲ್ಲಿ ಗಳಗನಾಥರ ಸಾಹಿತ್ಯ ಹಾಗು ಲೋಕಮಾನ್ಯ ತಿಲಕರ[೧] ಕೇಸರಿ ಪತ್ರಿಕೆಯಲ್ಲಿಯ ಲೇಖನಗಳಿಂದ ಇವರಿಗೆ ಪ್ರೇರಣೆ ದೊರೆಯಿತು. ಇದರಿಂದ ೧೯೨೯ರಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಖಾದಿ ಪ್ರಚಾರದಲ್ಲಿ ತೊಡಗಿದರು. ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ[೨] ಪ್ರಾರಂಭಿಸಿ ದಾಂಡಿ ಯಾತ್ರೆ ಕೈಗೊಂಡಾಗ ಅದರಲ್ಲಿ ಭಾಗವಹಿಸಿದ ಅತಿ ಕಿರಿಯ ಚಳುವಳಿಗಾರರಾಗಿದ್ದರು. ಜೊತೆಗೆ, ಮೈಲಾರ ಮಹಾದೇವಪ್ಪನವರು ಕರ್ನಾಟಕದಿಂದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ವ್ಯಕ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
೧೯೪೨ರಲ್ಲಿ ಚಲೇಜಾವ್ ಚಳುವಳಿ ಪ್ರಾರಂಭವಾಗಿ, ಮಹಾತ್ಮಾ ಗಾಂಧೀಜಿ ಯವರು ಸೆರೆಯಾದ ಬಳಿಕ ಚಳುವಳಿ ಉಗ್ರ ರೂಪ ತಾಳಿತು. ಮೈಲಾರ ಮಹಾದೇವಪ್ಪನವರು ಯುವ ಹೋರಾಟಗಾರರನ್ನು ಸಂಘಟಿಸಿದರು. ೧೯೪೩ ಮಾರ್ಚ ೩೧ರಂದು ಹೊಸರಿತ್ತಿಯ ಕಂದಾಯ ಕಚೇರಿಯ ಮೇಲೆ ದಾಳಿ ಮಾಡಿದಾಗ, ಪೋಲೀಸರ ಗುಂಡಿಗೆ ಬಲಿಯಾದರು. ಇವರೊಂದಿಗೆ ಹಿರೇಮಠ ವೀರಯ್ಯ ಹಾಗು ಮಡಿವಾಳ ತಿರಕಪ್ಪನವರೂ ಸಹ ಹುತಾತ್ಮರಾದರು.
Explanation:
hope it helps you......
follow plss I'll help you in kannada