India Languages, asked by Sharmita15, 9 months ago

ಅತಿ ಆಸೆ ಗತಿಕೇಡು please say the meaning in kannada​

Answers

Answered by kratu2305
0

Explanation:

ಅತಿ ಆಸೆ ಗತಿಕೇಡು = mischief

plz mark as Brainliest

Answered by Anonymous
0

Answer:

ಅತಿ ಆಸೆ ಗತಿಗೇಡು:

ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಮ್ಮ ಆಸೆಗಳಿಗೆ ಇತಿ-ಮಿತಿಯಿರಬೇಕು ಎಂಬುದನ್ನು ತಿಳಿಸುತ್ತದೆ.

* ’ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿದ್ದಾನೆ. ಜೀವನದಲ್ಲಿ ಆಸೆಯೇ ಇರಬಾರದೆಂದಲ್ಲ ಆದರೆ ಅದು ಅತಿಯಾಗದೆ ಮಿತವಾಗಿರಬೇಕು. ಅರಮನೆಯ ಸುಖಕ್ಕಿಂತ ನಮ್ಮಲ್ಲಿ ಲಭ್ಯವಿರುವಷ್ಟರಲ್ಲಿ ಬದುಕುವುದರಲ್ಲಿ ನೆಮ್ಮದಿ ಇದೆ. ಆಸೆಗಳು ಅತಿಯಾಗಿ ಆದಾಯ ಕಡಿಮೆ ಇದ್ದಾಗ ಸಾಲ ಮಾಡಬೇಕಾಗುತ್ತದೆ. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲುಚಾಚಬೇಕು. ಉಚಿತವಾಗಿ ಸಿಗುತ್ತದೆಂದು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣೆ ಮಾಡಲು ಪ್ರಯತ್ನಿಸಬಾರದು. ಹಾಗೆ ಮಾಡಿದರೆ ’ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕುಯ್ದು ಹಾಕಿದ ಮೂರ್ಖನ ಕಥೆಯಂತೆ’ ಅತಿಯಾಸೆಯಿಂದಾಗಿ ಇದ್ದದ್ದನ್ನೂ ಕಳೆದುಕೊಳ್ಳಬೇಕಾಗುತ್ತದೆ. ಎಂಬುದು ಈ ಗಾದೆಯ ಆಶಯವಾಗಿದೆ.

Be Brainly!

Similar questions