please write an essay on this in kannada
ಓದುಗಾರಿಕೆಯ
ಮಹತ್ವ
if you answer I will follow you and mark brainleist answer fast pleaseeeee if you don't no please don't answer
Answers
Answer:
vhc hdreszeszxftyg yg vhuuhgyf rseerdg xc h
Explanation:
gg x xgffcycgyygc gxrdzr dtyfyfy fy fcg gz rs rszsrztddxtfgf x fzzfzfdg gx g
Answer:
ಓದುಗಾರಿಕೆ: ಲಿಖಿತ ಅಥವಾ ಮುದ್ರಿತ ಸಂಕೇತಗಳ ಮೂಲಕ ವ್ಯಕ್ತವಾಗುವ ಕೃತಿಕಾರನ ಅಭಿಪ್ರಾಯವನ್ನು ಗ್ರಹಿಸುವ ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಮನೋವ್ಯಾಪಾರ. ಮಾನವನ ಅನುಭವ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಇರುವ ಬಹುಮುಖ್ಯ ಸಾಧನೆ. ಪ್ರತಿ ವ್ಯಕ್ತಿಯೂ ಶಿಕ್ಷಣದಿಂದ ತನ್ನ ವ್ಯಕ್ತಿತ್ವವನ್ನು ಪರಿಪುರ್ಣವಾಗಿ ವಿಕಸಿಸುವಂತೆ ಮಾಡಿಕೊಳ್ಳುವುದು ಅಗತ್ಯವೆಂಬ ಅಭಿಪ್ರಾಯವಿರುವ ಈ ಕಾಲದಲ್ಲಿ ಓದುವುದಕ್ಕೆ ವ್ಯಾಸಂಗ ಕ್ರಮದಲ್ಲಿ ಪ್ರಧಾನ ಸ್ಥಾನವನ್ನು ಕೊಟ್ಟಿದೆ.
ಶಾಲಾ ಜೀವನದಲ್ಲಿ ವಿದ್ಯಾರ್ಥಿ ಈ ಕಲೆಯನ್ನು ಬೆಳೆಸಿಕೊಳ್ಳಲು ಸಾಕಷ್ಟು ಅವಕಾಶವಿರಬೇಕು. ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಪಠ್ಯಪುಸ್ತಕಗಳ ಮೂಲಕ, ಆಟಪಾಠಗಳ ಮೂಲಕ, ವಿಚಾರಗೋಷ್ಠಿಗಳ ಮೂಲಕ, ಅರಿಯಲು ಅನುಕೂಲವಿರಬೇಕು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಅತ್ಯಗತ್ಯವಾಗಿ ಬೇಕಾದುದು ಓದಿನ ನೈಪುಣ್ಯ. ಹೀಗಾಗಿ ಶಾಲೆಯಲ್ಲಿ ಕಲಿಯುವ ಚರಿತ್ರೆ, ಭೂಗೋಳ, ಸಾಹಿತ್ಯ, ವಿಜ್ಞಾನ, ಲೆಕ್ಕ ಮುಂತಾದ ವಿಷಯಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬೇಕಾದರೆ, ಒಳ್ಳೆಯ ಓದುಗಾರಿಕೆಯನ್ನು ಸಾಧಿಸಬೇಕು. ಅಂದರೆ ಓದುಗಾರಿಕೆಯ ಅನೇಕ ಉತ್ತಮ ಲಕ್ಷಣಗಳನ್ನು ಪರಿಚಯ ಮಾಡಿಕೊಟ್ಟು ಓದುವುದರಲ್ಲಿ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಬೇಕು; ಅದಕ್ಕಾಗಿ ವ್ಯಾಸಂಗ ಪದ್ಧತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸುವ ಕ್ರಮವನ್ನು ರೂಢಿಸಿಕೊಳ್ಳುವುದು ಅಗತ್ಯ. ಓದುಗಾರಿಕೆ ವ್ಯಕ್ತಿಯಲ್ಲಿ ಶಿಕ್ಷಣದಿಂದ ಮೂಡಬೇಕಾದ ಉಪಯುಕ್ತ ಕೌಶಲ್ಯವಾದರೂ ಅದನ್ನು ಬೋಧಿಸುವುದು ಸುಲಭದ ಕೆಲಸವೇನಲ್ಲ. ಏಕೆಂದರೆ ಅದು ಅನೇಕ ಸೂಕ್ಷ್ಮವೂ ಕ್ಲಿಷ್ಟಕರವೂ ಆದ ಅಂಶಗಳನ್ನು ಒಳಗೊಂಡಿದೆ. ವಿದ್ಯಾರ್ಥಿಯಲ್ಲಿ ಕಂಡುಬರುವ ಓದುಗಾರಿಕೆಯ ದೋಷಗಳನ್ನೂ ನ್ಯೂನತೆಗಳನ್ನು ನಿವಾರಿಸುವಂತೆ ಅದನ್ನು ಬೋಧಿಸುವುದು ಶಾಸ್ತ್ರೀಯವೂ ಕೌಶಲ್ಯಪೂರ್ಣವೂ ಆದ ಕಾರ್ಯ, ಹಾಗೂ ಸಾಮೂಹಿಕವಾಗಿ ತೃಪ್ತಿಕರವಾದ ರೀತಿಯಲ್ಲಿ ಬೋಧಿಸುವುದು ಇನ್ನೂ ಕಷ್ಟದ ಕೆಲಸ. ಆದರೆ, ಅನೇಕ ಸಂಶೋಧನೆಗಳಿಂದ, ಹಲವಾರು ಬೋಧನ ತಂತ್ರಗಳು ಬೆಳಕಿಗೆ ಬಂದು ಓದುಗಾರಿಕೆಯನ್ನು ಪರಿಣಾಮಕಾರಿಯಾಗಿ ಬೋಧಿಸಬಲ್ಲ ವಿಧಾನಗಳು ಈಗ ರೂಪುಗೊಂಡಿವೆ. ಹಾಗೂ ಓದುಗಾರಿಕೆಯಲ್ಲಿ ಕಂಡುಬರುವ ಲೋಪದೋಷಗಳಿಗೆ ಕಾರಣವೆನಿಸುವ ವಿಶಿಷ್ಟ ದೌರ್ಬಲ್ಯಗಳನ್ನು ನಿವಾರಿಸುವ ವಿಧಾನಗಳೂ ಬಳಕೆಗೆ ಬರುತ್ತಿವೆ. (ಎ.ಎಂ.ಎಸ್.)