Hindi, asked by akshu383, 6 hours ago


ವಿದ್ಯುತ್ ದೀಪ ಸರಿಪಡಿಸುವ ಬಗ್ಗೆ ,plz give me this answer in Kannada then I will make u brainliest​

Answers

Answered by aparnaamruth
0

Explanation:

ಕಳೆದ ನಾಲ್ಕೈದು ತಿಂಗಳಿಂದ ಪಟ್ಟಣದ 23 ವಾರ್ಡುಗಳಲ್ಲಿ ಬೀದಿ ದೀಪದ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದ್ದ ಗುತ್ತಿಗೆದಾರರು ಒಪ್ಪಂದದ ನಿಯಮಾನುಸಾರ ಸಮರ್ಪಕವಾಗಿ ಬೀದಿ ದೀಪಗಳ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಎಲ್ಲ ವಾರ್ಡುಗಳಲ್ಲಿ ಬೀದಿ ದೀಪಗಳು ಉರಿಯದೇ ಜನ ರಾತ್ರಿ ಸಮಯದಲ್ಲಿ ಓಡಾಡುವುದು ಕಷ್ಟಕರವಾಗಿದೆ. ಅಲ್ಲದೇ ಮಹಿಳೆಯರು ಒಬ್ಬಂಟಿಗರಾಗಿ ಸಂಜೆ ಸಮಯದಲ್ಲಿ ರಸ್ತೆಯಲ್ಲಿ ಓಡಾಡಲು ಭಯಪಡುತ್ತಾರೆ. ಒಳಚರಂಡಿ ಕಾಮಗಾರಿಯಿಂದ ನಿರ್ಮಾಣಗೊಂಡ ಹೊಂಡ-ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ಕತ್ತಲೆಯ ಓಡಾಟ ದುಸ್ತರವಾಗಿದೆ. ಅಲ್ಲದೇ ಹಲವು ಅಪಾಯ ಸೂಚಿಸುವ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಬೀದಿ ದೀಪಗಳು ಉರಿಯದ ಕಾರಣ ಕಳ್ಳಕಾಕರಿಗೆ ಕಳವು ಮಾಡಲು ಒಳ್ಳೆಯ ಸಂದರ್ಭ ದೊರೆತಂತಾಗಿದೆ. ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ, ಎಂಜಿನಿಯರರಿಗೆ ಹಲವು ಬಾರಿ ತಿಳಿಸಿದ್ದರೂ, ಇನ್ನುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಪುರಸಭೆಯ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಪಟ್ಟಣದ ಸಮಸ್ಯೆಗಳನ್ನು ಗಂಭೀರವಾಗಿ ಪರಿಶೀಲಿಸಿ ತಕ್ಷ ಣ ಕ್ರಮ ಕೈಗೊಂಡು ಎಲ್ಲ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ದೀಪಗಳು ಉರಿದು ಬೆಳಕು ಹರಿಸಲು ಕ್ರಮ ಕೈಗೊಳ್ಳಬೇಕು

Similar questions